ತನ್ನ ಮೊದಲ ಗಂಡ ಮತ್ತು ಅವನ ಜೊತೆಗಿನ ಸಂಬಂಧ ಮುರಿದು ಬಿದ್ದ ಕಾರಣ ತಿಳಿಸಿದ ನಟಿ ಸೋನು ಗೌಡ.. ಏನು ಹೇಳಿದ್ರು ಗೊತ್ತಾ!!!

ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡಿರುವ ನಟಿಯರಲ್ಲಿ ಸೋನು ಗೌಡ ಕೂಡ ಒಬ್ಬರು. ನಟಿ ಸೋನು ಗೌಡ ಟ್ರಿಪ್, ಔಟಿಂಗ್ ಎಂದು ಸುದ್ದಿಯಾಗುವುದೇ ಹೆಚ್ಚು. ನಟಿ ಸೋನು ಗೌಡರವರು ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿದ್ದು ಸಿನಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ (Kannada) ಮಾತ್ರವಲ್ಲದೇ, ತೆಲುಗು (Telugu), ತಮಿಳು (Tamil), ಮಲಯಾಳಂ (Malayalam) ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2008 ರಲ್ಲಿ ಇಂತಿ ನಿನ್ನ ಪ್ರೀತಿಯ (Inti Ninna Preethiya) ಸಿನಿಮಾದಲ್ಲಿ ನಟಿಸಿದರು.

ಆದಾದ ಬಳಿಕ ಪರಮೇಶಿ ಪಾನ್ ವಾಲ (Parameshi Pan Wala), ಗುಲಾಮ (Gulama) ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕಿರುತೆರೆ ಲೋಕದ ಜೊತೆ ಜೊತೆಯಲಿ (Jote Joteyali) ಧಾರಾವಾಹಿಯಲ್ಲಿ ರಾಜನಂದಿನಿ ಪಾತ್ರದಲ್ಲಿ ನಟಿಸಿದ್ದರು. ಸದ್ಯಕ್ಕೆ ನಟಿ ಸೋನು ಗೌಡ ಮರೀಚಿ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ತೆರೆಗೆ ಬಂದಿದೆ. ಮರೀಚಿ ಸಿನಿಮಾ ರಿಲೀಸ್ ಸಮಯದಲ್ಲಿ ನಟಿ ಸೋನು ಗೌಡ ಮತ್ತೊಮ್ಮೆ ಮದುವೆ ಹಾಗೂ ಡಿ-ವೋರ್ಸ್ ಬಗ್ಗೆ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ತಾವು ಮದುವೆಯಾಗಲು ರೆಡಿ ಇರುವುದಾಗಿಯೂ ಹಾಗೂ ತನ್ನ ಹುಡುಗ ಹೇಗಿರಬೇಕು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ನಟಿ ಸೋನು ಗೌಡ, ‘ಸಿಂಗಲ್ ಅಥವಾ ಮ್ಯಾರಿಡ್ ಲೈಫ್‌ನಲ್ಲಿ ಯಾವುದು ಬೆಸ್ಟ್‌ ವರ್ಸ್ಟ್‌ ಅಂತಿಲ್ಲ. ಎಲ್ಲವೂ ಚೆನ್ನಾಗಿರುತ್ತದೆ. ನಾವು ಹೇಗೆ ಇಟ್ಟುಕೊಂಡಿರುತ್ತೀವಿ ಹಾಗೆ. ನನಗೆ ಸೂಕ್ತವಾದ ಸಂಗಾತಿ ಸಿಕ್ಕಾಗ ಮದುವೆ ಮಾಡಿಕೊಳ್ಳಬೇಕು ಅನ್ನೋ ಆಲೋಚನೆ ನನಗೆ ಬಂದಿದೆ. ಒಂದು ವೇಳೆ ಮದುವೆ ಮಾಡಿಕೊಂಡಿಲ್ಲ ಅಂದ್ರೂ ಸಮಸ್ಯೆ ಇಲ್ಲ ಖುಷಿಯಾಗಿರುತ್ತೀನಿ.

ಇರುವಷ್ಟು ದಿನ ಖುಷಿಯಾಗಿ ಇರಬೇಕು ಅನ್ನೋದಷ್ಟೆ ನನ್ನ ಯೋಚನೆ. ಯುಟ್ಯೂಬ್‌ನಲ್ಲಿ ವಿಡಿಯೋ ಮಾಡಲು ಸಂಗಾತಿ ಹುಡುಕಿಕೊಳ್ಳಲು ಆಗಲ್ಲ. ಮಾಧ್ಯಮ ಪಬ್ಲಿಸಿಟಿ ಎಲ್ಲವೂ ಬೇಕು ಆದರೆ ಜೀವನದಲ್ಲಿ ನಿಜಕ್ಕೂ ಬೇಕಿರುವುದು ನೆಮ್ಮದಿ. ಯಾವುದೇ ಮುಚ್ಚು ಮರೆ ಇಲ್ಲದೆ ನೆಮ್ಮದಿಯಾಗಿ ಮದುವೆ ಮಾಡಿಕೊಂಡು ಖುಷಿಯಾಗಿರಬೇಕು ಆ ವ್ಯಕ್ತಿ ಜೊತೆ. ದಿನ ಹೀಗಿತ್ತು ಅಂತ ಹೇಳಿದ್ರೆ ನಿನ್ನ ಬಗ್ಗೆ ಹಾಗೆ ಮಾತನಾಡಿದ್ದಾರಾ? ನೀನು ಅಷ್ಟು ಸ್ಪೇಸ್ ಕೊಟ್ಟಿರುವೆ ಇಲ್ಲ ನೀವು ಇಷ್ಟು ಕ್ಲೋಸಾ ಅನ್ನೋ ರೀತಿ ಪ್ರಶ್ನೆ ಮಾಡಬಾರದು.

ನನ್ನ ತಂದೆ ತಾಯಿ ಜೊತೆ ಎಲ್ಲವೂ ಶೇರ್ ಮಾಡಿಕೊಳ್ಳುತ್ತೀನಿ…ನನಗೆ ಗಂಡ ಜೊತೆನೂ ಹಾಗೆ ಇರಬೇಕು. ಒಳ್ಳೆ ಸ್ನೇಹಿತನಾಗಿ ನನ್ನ ಜೊತೆ ಜೀವನ ಮಾಡಬೇಕು. ಹೇಳಿದರೆ ಭಯ ಆಗುತ್ತದೆ ಅನ್ನೋ ರೀತಿ ಇರಬಾರದು. ಎಲ್ಲರ ಎದುರು ನಾನು ಮರ್ಯಾದೆ ಕೊಡುತ್ತೀನಿ ಇಬ್ರಿಗೂ ಕಂಫರ್ಟ್ ಜೋನ್ ಇರಬೇಕು. ನಾಳೆ ದಿನ ಏನೇ ಆದರೂ ನನ್ನ ಜೊತೆ ನಿಂತುಕೊಳ್ಳುತ್ತಾರೆ ಅನ್ನೋ ಧೈರ್ಯ ಇದ್ದ ಮೇಲೆ ಆ ಹುಡುಗನನ್ನು ಮದುವೆ ಮಾಡಿಕೊಳ್ಳುವೆ.

ಎಷ್ಟೇ ನೋವಿದ್ದರೂ ಖುಷಿಯಾಗಿ ಜೀವನ ನಡೆಸುತ್ತಿರುವೆ. ಯಾರೊಟ್ಟಿಗೂ ನೋವು ಹೇಳಿಕೊಂಡಿಲ್ಲ. ಪ್ರಮಾಣಿಕವಾಗಿ ಜೀವನ ಮಾಡುತ್ತಿರುವ, ಅವಕಾಶ ಕೊಟ್ಟಿಲ್ಲ ಅಥವಾ ಕಿತ್ತುಕೊಂಡು ಜೀವನ ಮಾಡುತ್ತಿಲ್ಲ.’ ಎಂದಿದ್ದಾರೆ. ಅದಲ್ಲದೆ ತಮ್ಮ ಡೈವೋರ್ಸ್ ಬಗ್ಗೆ ಮಾತನಾಡಿದ ನಟಿ ಸೋನು ಗೌಡ, ‘ನಾನು ಯಾರಿಗೂ ಮೋ-ಸ ಮಾಡಿಲ್ಲ ಅಂದ್ಮೇಲೆ ಯಾಕೆ ಹೆ-ದರಿಕೊಳ್ಳಬೇಕು? ಇದುವರೆಗೂ ಒಬ್ಬರ ಬಗ್ಗೆ ನೆಗೆಟಿವ್ ಮಾತನಾಡಿಲ್ಲ. ನನ್ನ ಎಕ್ಸ್‌ ಏನ್ ಏನೋ ಮಾಡಿದರೂ ಅದರಲ್ಲಿ ನಾನು ಮಾತ್ರವಲ್ಲ ಅವರೂ ಇದ್ದರು.

ಇದುವರೆಗೂ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ.ಒಂದು ಸಮಯದಲ್ಲಿ ಇಬ್ಬರು ಇಷ್ಟ ಪಟ್ಟು ಮದುವೆ ಮಾಡಿಕೊಂಡಿದ್ದು. ವರ್ಕೌಟ್ ಆಗುತ್ತಿಲ್ಲ ಸರಿ ಹೋಗುತ್ತಿಲ್ಲ ಅಂದ ಮೇಲೆ ಡಿವೋರ್ಸ್ ಪಡೆದಿದ್ದು. ಇದುವರೆಗೂ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಅವರು ಕೆಟ್ಟವನಾಗಿದ್ರೆ ನಾನು ಮದುವೆನೇ ಆಗ್ತಾ ಇರ್ಲಿಲ್ಲ. ಒಂದು ಸಮಯದಲ್ಲಿ ಇಬ್ಬರು ಇಷ್ಟ ಪಟ್ಟು ಮದುವೆ ಮಾಡಿಕೊಂಡಿದ್ದು. ವರ್ಕೌಟ್ ಆಗುತ್ತಿಲ್ಲ ಸರಿ ಹೋಗುತ್ತಿಲ್ಲ ಅಂದ ಮೇಲೆ ಡಿ-ವೋರ್ಸ್ ಪಡೆದಿದ್ದು.’ ಎಂದಿದ್ದಾರೆ.

Leave a Reply

Your email address will not be published. Required fields are marked *