ಹಾಟ್ ಉಡುಗೆಯಲ್ಲಿ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಶ್ವೇತಾ ಪ್ರಸಾದ್, ಅವತಾರ ಕಂಡು ನೆಟ್ಟಿಗರು ಶಾಕ್

ರಾಧಾ ರಮಣ (Radha Ramana) ಧಾರಾವಾಹಿ ಖ್ಯಾತಿಯ ನಟಿ ಶ್ವೇತಾ ಪ್ರಸಾದ್ (Shwetha Prasad) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಕನ್ನಡ ಕಿರುತೆರೆ ಲೋಕದಲ್ಲಿ ಬಾರಿ ಬೇಡಿಕೆಯನ್ನು ಹೊಂದಿದ್ದ ನಟಿಯಿವರು. ಸದ್ಯಕ್ಕೆ ನಟನಾ ಬದುಕಿನಿಂದ ದೂರವಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ನಟಿ ಆಗಾಗ ತಮ್ಮ ಫೋಟೋ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ನೆಟ್ಟಿಗರ ನಿದ್ದೆ ಕದಿಯುತ್ತಿರುವ ನಟಿಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುವುದಿದೆ.

ರಾಧಾ ರಮಣ (Radha Ramana) ಧಾರಾವಾಹಿ ಖ್ಯಾತಿಯ ಶ್ವೇತಾ ಪ್ರಸಾದ್ ಅವರು ಆಗಾಗ ಫೋಟೋ ಶೂಟ್ ಹಾಗೂ ಟ್ರಿಪ್ ಗೆ ತೆರಳುವ ಮೂಲಕ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ಆರೆಂಜ್ (Orange ) ಅಂಡ್ ವೈಟ್ (White) ಕಲರ್ ಶಾರ್ಟ್ ಉಡುಗೆಯಲ್ಲಿ ಸಮುದ್ರ ತೀರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರಿಂದ ಲೈಕ್ಸ್ ಗಳು ಬಂದಿವೆ. ಶ್ವೇತಾ ಪ್ರಸಾದ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು. ಶ್ರೀರಸ್ತು ಶುಭಮಸ್ತು (Shreerastu Subhamastu) ಜಾನ್ಹವಿ, ರಾಧಾ ರಮಣ (Radha Ramana) ದ ರಾಧಾ ಖ್ಯಾತಿ ಗಳಿಸಿಕೊಂಡಿದ್ದರು.

ಮೂಲತಃ ಶಿವಮೊಗ್ಗ (Shivamogga) ದವರಾದ ಇವರು ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟಿಕ್ಚೆರ್ ವಿಭಾಗದಲ್ಲಿ ಪದವಿ ಪಡೆದುಕೊಂಡರು. ಹೀಗಿರುವಾಗ ಒಂದು ದಿನ ಪೇಸ್‌ಬುಕ್‌ನಲ್ಲಿ ಇವರ ಪೋಟೋ ನೋಡಿದ ನಿರ್ಮಾಪಕಿ ಶೃತಿ ನಾಯ್ಡು (Producer Shruthi Naidu) ತಮ್ಮ ಮುಂದಿನ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದರು.

ಮೊದಮೊದಲು ನಿರಾಕರಿಸಿದರೂ, ಕೊನೆಗೆ ನಟಿಸಿಲು ಒಪ್ಪಿಕೊಂಡರು. ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಕಿರುತೆರೆಯಿಂದ ದೂರ ಉಳಿದರು. ‘ರಾಧಾ ರಮಣ’ ( Radha Ramana) ಧಾರಾವಾಹಿಯ ಮಧ್ಯದಲ್ಲಿಯೇ ಹೊರ ಬಂದರು. ಆ ಬಳಿಕ ಡಿಜಿಟಲ್ ಮೀಡಿಯಾ (Digital Media) ದತ್ತ ಹೆಚ್ಚು ಗಮನ ಹರಿಸಿದ್ದರು. ಇತ್ತೀಚೆಗಷ್ಟೇ ನಟಿ ಶ್ವೇತಾ ಪ್ರಸಾದ್ ಅವರು ಹೊಸ ಕೆಲಸ ಶುರು ಮಾಡಡಿದ್ದರು. ತಂದೆ ಹೆಸರಿನಲ್ಲಿ ಎನ್‌ಜಿಒ (NGO) ಆರಂಭಿಸಿ ಸೇವೆ ಮಾಡಲು ಮುಂದಾಗಿದ್ದರು.

ಈ ಬಗೆಗೆ ಪೋಸ್ಟ್ ಹಂಚಿಕೊಂಡಿದ್ದ ನಟಿ, ‘ನನ್ನ ಜೀವನದ ಸ್ಪೆಷಲ್ ದಿನ ಇದು. ಎನ್‌ಜಿಒ ಮೂಲಕ ನಾನು ಎಲ್ಲಾ ಕೆಲಸಗಳನ್ನು ಮಾಡೋಣ ಅಂದುಕೊಂಡಿದ್ದೆ ಅದರಂತೆ ಆರಂಭಿಸಿರುವೆ. ತಂದೆ ಪ್ರಸಾದ್ ಫೌಂಡೇಷನ್‌ ಮೂಲಕ ನಾನು ಸಮಾಜ ಸೇವೆ ಮಾಡಲು ಮುಂದಾಗುತ್ತಿರುವೆ. ಅನ್ನದಾನ ಮಾಡಲು ದೇವಸ್ಥಾನಗಳಿಗೆ ದೇಣಿಗೆಗಳು ಕೊಡಬೇಕು ಎಂದು ಹೇಳಿಕೊಟ್ಟವರು.

ಅಪ್ಪ ಹಸಿವು ನೀಗಿಸಲು ಮತ್ತು ನನ್ನ ಸುತ್ತಲಿರುವವರೆಲ್ಲರನ್ನು ಸಂತೋಷವಾಗಿರಿಸಲು ಮತ್ತು ಅದು ನಿಜವಾದ ಸಂತೋಷ’ ಎಂದು ಶ್ವೇತಾ ಬರೆದುಕೊಂಡಿದ್ದರು. ಆದರೆ ಬಣ್ಣದ ಲೋಕದಿಂದ ದೂರವಿದ್ದು ನಾನಾ ರೀತಿಯಿಂದ ಸುದ್ದಿಯಾಗುವ ನಟಿ ಶ್ವೇತಾ ಪ್ರಸಾದ್ ಅವರು ಯಾವಾಗ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗಿದೆ

Leave a Reply

Your email address will not be published. Required fields are marked *