30 ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡ ಖ್ಯಾತ ನಟಿ ಶ್ರುತಿ ಷಣ್ಮುಗ ಪ್ರಿಯಾ!! ಕೆಟ್ಟ ಚ-ಟ ವೇ ಸಾ-ವಿಗೆ ಕಾರಣ ಆಯ್ತಾ?..

ತಮಿಳಿನ ಜನಪ್ರಿಯ ಕಿರುತೆರೆ ನಟಿ ಶ್ರುತಿ ಷಣ್ಮುಗ ಪ್ರಿಯಾ (shruti shanmugapriya) ಅವರ ಪತಿ ಅರವಿಂದ್ ಶೇಖರ್ ಇತ್ತೀಚೆಗೆ ಹೃದಯಾಘಾತದಿಂದ ಇಹಲೋಕವನ್ನು ತ್ಯಜಿಸಿದ್ದಾರೆ. ಆದರೆ ಇದೀಗ ಈ ಸತ್ಯವನ್ನು ಒಪ್ಪಿಕೊಳ್ಳಲು ಶ್ರುತಿಯವರು ಕಷ್ಟ ಪಡುತ್ತಿದ್ದಾರೆ.

ಕಲ್ಯಾಣಿ ಪರಿಸು (Kalyani Parisu), ವಾಣಿ ರಾಣಿ (Vani Rani), ಭಾರತಿ ಕಣ್ಣಮ್ಮ (Bharathi Kannamma) ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಶ್ರುತಿ ಷಣ್ಮುಖ ಪ್ರಿಯಾರವರು ಕಳೆದ ವರ್ಷವಷ್ಟೇ ಅರವಿಂದ್ ಅವರನ್ನು ಮದುವೆಯಾಗಿದ್ದರು. ಕಳೆದ ಕಳೆದ ಮೇ ತಿಂಗಳಲ್ಲಿ ಶ್ರುತಿ ಷಣ್ಗುಗ ಪ್ರಿಯಾ ಹಾಗೂ ಅರವಿಂದ್ ಮೊದಲ ವರ್ಷದ ವೆಡ್ಡಿಂಗ್ ಆನಿವರ್ಸರಿ ಸೆಲೆಬ್ರೇಶನ್ ಮಾಡಿದ್ದರು.

ಆದರೆ ಇದೀಗ ಪತಿಯ ಅಗಲುವಿಕೆ ನೋವು ನಟಿಗೆ ನುಂಗಲಾರಾದ ತುತ್ತಾ ಗಿದೆ. ಅರವಿಂದ್ ಅವರು 30 ನೆ ವಯಸ್ಸಿನಲ್ಲಿ ಸಾ-ವನ್ನು ಅಪ್ಪಿರುವುದು ಶಾಕ್ ತಂದಿದೆ.ಅರವಿಂದ್ ಅವರು ಫಿಟ್ ನೆಸ್ (Fitness) ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದರು. ಇತ್ತ ಅರವಿಂದ್ ಫಿಟ್‍ನೆಸ್ ಕೋಚ್ ಆಗಿ ಕೆಲಸ ಮಾಡುತ್ತಿದ್ದರು. ದೇಹದ ತೂಕ ಇಳಿಸಿಕೊಳ್ಳಲು ತರಬೇತಿ ನೀಡುತ್ತಿದ್ದ ಇವರು 2022ರ ‘ಮಿಸ್ಟರ್ ತಮಿಳುನಾಡು’ ಸಹ ಆಗಿ ಹೊರಹೊಮ್ಮಿದ್ದರು.

ಹೀಗೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದ ವ್ಯಕ್ತಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ಸಾಗಿಸಿದರೂ ಕೂಡ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಸದ್ಯಕ್ಕೆ ಕಿರುತೆರೆಯ ನಟಿ ಶ್ರುತಿಯವರ ಕುಟುಂಬಕ್ಕೆ ಧೈರ್ಯ ತುಂಬುವ ಮೂಲಕ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಕೆಲವು ಯೂಟ್ಯೂಬ್ ಚಾನೆಲ್‌ಗಳು, ವೆಬ್‌ಸೈಟ್‌ಗಳು ಮತ್ತು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅರವಿಂದ್ (Aravind Sekhar) ಸಾ-ವಿನ ಬಗ್ಗೆ ತಪ್ಪಾಗಿ ಮಾಹಿತಿಯನ್ನು ನೀಡಲಾಗುತ್ತಿದೆ.

ಅರವಿಂದ್ ತಮ್ಮ ಕೆಟ್ಟ ಚಟಗಳಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಈ ಬಗ್ಗೆ ಬೇಸರವನ್ನು ಹೊರಹಾಕಿದ್ದು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕಿರುತೆರೆಯ ನಟಿ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದು, ‘ಸದ್ಯ ನಾನು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿದ್ದೇನೆ. ನನಗೆ ಸಾಂತ್ವನ ಹೇಳಲು ಅನೇಕರು ಕರೆ ಮಾಡಿದ್ದಾರೆ, ಸಂದೇಶ ಕಳುಹಿಸುತ್ತಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆ ಮತ್ತು ಧನ್ಯವಾದಗಳು.

ಈ ಸಮಯದಲ್ಲಿ ಎಲ್ಲಾ ಯೂಟ್ಯೂಬ್​ ಚಾನೆಲ್‌ಗಳು ಮತ್ತು ಮಾಧ್ಯಮಗಳಿಗೆ ನನ್ನದೊಂದು ವಿನಂತಿ. ನನ್ನ ಪತಿ ಹೃದಯಾಘಾತದಿಂದ ನಿ-ಧನರಾದರು. ಇದನ್ನು ವೈದ್ಯರು ಕೂಡ ದೃಢಪಡಿಸಿದ್ದಾರೆ. ಆದರೆ ಸತ್ಯಾಂಶ ತಿಳಿಯದೆ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ನಾವೆಲ್ಲರೂ ಈಗ ದುಃಖದಲ್ಲಿದ್ದೇವೆ. ಇಂತಹ ಸಮಯದಲ್ಲಿ ನಿಮ್ಮ ಅಭಿಪ್ರಾಯ ಮತ್ತು ಇಷ್ಟಗಳಿಗಾಗಿ ನಮಗೆಈ ರೀತಿ ಕಿರುಕುಳ ನೀಡಬೇಡಿ’ ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *