ಕರ್ಪೂರದ ಗೊಂಬೆ ಖ್ಯಾತಿಯ ನಟಿ ಶ್ರುತಿಯವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ಅಪರೂಪದ ಫೋಟೋ

ಚಂದನವನದಲ್ಲಿ ಈ ಕರ್ಪೂರದ ಗೊಂಬೆ ಎಂದೇ ಖ್ಯಾತಿ ಗಳಿಸಿದವರು ನಟಿ ಶ್ರುತಿ (Shruthi) ಯವರು ಎಲ್ಲರಿಗೂ ಚಿರಪರಿಚಿತ. ಒಂದು ಕಾಲದಲ್ಲಿ ನಟಿ ಶ್ರುತಿಯವರ ಸಿನಿಮಾಗಳು ಎಂದರೆ ಹಿಟ್ ಆಗುತ್ತಿತ್ತು. ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಶ್ರುತಿ ಅವರು ಅನೇಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಆಗಿನ ಕಾಲದಲ್ಲಿ ಸ್ಯಾಂಡಲ್ ವುಡ್ ಎವರ್ ಗ್ರೀನ್ ನಟಿಯರಲ್ಲಿ ಒಬ್ಬರು. ಕನ್ನಡ (Kannada) ಸೇರಿದಂತೆ ತಮಿಳು (Tamil), ಮಲಯಾಳಂ (Malayalam, ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿಯು ಇವತ್ತಿಗೂ ಕೂಡ ಚಂದನವನದಲ್ಲಿ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಆದರೆ ಕನ್ನಡದ ನಟಿ ಶ್ರುತಿಯವರು ಸಿನಿಮಾ ಹೊರತು ಪಡಿಸಿ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುತ್ತಿರುತ್ತಾರೆ. ಆಗಾಗ ನಟಿಯ ಕೆಲವು ಫೋಟೋಗಳು ವೈರಲ್ ಆಗುತ್ತದೆ. ಸದ್ಯಕ್ಕೆ ಶ್ರುತಿಯವರ ಕುಟುಂಬದ ಮುದ್ದಾದ ಫೋಟೋಗಳು ವೈರಲ್ ಆಗಿದೆ.

ಈ ಫೋಟೋದಲ್ಲಿ ನಟಿ ಶ್ರುತಿ, ಅವರ ತಂದೆ ಕೃಷ್ಣ (Krishana), ತಾಯಂದಿರಾದ ರಾಧಾ ರುಕ್ಮಿಣಿ (Radha Rukmini) ಹಾಗೂ ಮಗಳು ಗೌರಿ (Gowri) ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಅದರಲ್ಲಿಯು ಒಂದು ಫೋಟೋದಲ್ಲಿ ಎಲ್ಲರೂ ಕೂಡ ಕಪ್ಪು ಬಣ್ಣದ ಧರಿಸಿ ಈ ಫೋಟೋವು ಬಾರಿ ಹೈ ಲೈಟ್ ಆಗಿದೆ. ಕರ್ಪೂರದ ಗೊಂಬೆ ಖ್ಯಾತಿಯ ನಟಿ ಶ್ರುತಿಯವರ ಫ್ಯಾಮಿಲಿ ಫೋಟೋ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.

ಸಿನಿಮಾದ ಜೊತೆಗೆ ನಟಿ ಶ್ರುತಿ ತಮ್ಮ ಸಮಯವನ್ನು ಕುಟುಂಬದ ಜೊತೆಗೆ ಹೆಚ್ಚಾಗಿ ಕಳೆಯುತ್ತಾರೆ. ತನ್ನ ತಾಯಂದಿರು ಹಾಗೂ ಮಗಳ ಜೊತೆಗೆ ಟೈಮ್ ಸ್ಪೆಂಡ್ ಮಾಡುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುವುದು ಮಾಮೂಲಿ. ಅದರಲ್ಲಿ ನಟಿ ಶ್ರುತಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಆಗಾಗ ತಮ್ಮ ವೈಯುಕ್ತಿಕ ಬದುಕಿನ ಕುರಿತು ಆಗಾಗ ಅಪ್ಡೇಟ್ ನೀಡುವ ಅಭಿಮಾನಿಗಳನ್ನು ಖುಷಿ ಪಡಿಸುವ ಪ್ರಯತ್ನ ಮಾಡುತ್ತಾರೆ.

ಚಂದನವನದಲ್ಲಿ ಶ್ರುತಿ ಎಂದೇ ಖ್ಯಾತಿ ಗಳಿಸಿರುವ ಇವರ ನಿಜವಾದ ಹೆಸರು ಗಿರಿಜಾ (Girija). ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಶ್ರುತಿ ಎಂಬ ಹೆಸರಿನಿಂದಲೇ ಎಲ್ಲರೂ ಗುರುತಿಸುವಂತಾದರು. ದ್ವಾರಕೀಶ್ (Dwarakish) ಅವರು ನಿರ್ದೇಶನ ಮಾಡಿರುವ ಕನ್ನಡದ “ಶೃತಿ” (Shruthi) ಚಿತ್ರದಲ್ಲಿ ನಟಿಸಿದ ಬಳಿಕ ಇವರ ಹೆಸರು ಶ್ರುತಿಯಾಗಿ ಬದಲಾಯಿತು. ಮೊದಲ ಬಾರಿಗೆ ಶಿವರಾಜ್ ಕುಮಾರ್ ಅವರ ಸಿನಿಮಾ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ನಟಿಸಿದ್ದರು. ಆ ಬಳಿಕ ದ್ವಾರಕೀಶ್ ಅವರ “ಶೃತಿ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಮಿಂಚಿದರು.

ಇವತ್ತಿಗೂ ನಟಿ ಶ್ರುತಿಯವರಿಗೆ ಅಷ್ಟೇ ಬೇಡಿಕೆಯಿದ್ದು ಬೆಳ್ಳಿತೆರೆ ಹಾಗೂ ಕಿರು ತೆರೆಯಲ್ಲಿ ಸಕ್ರಿಯರಾಗಿರುವ ನಟಿಮಣಿಯರಲ್ಲಿ ಒಬ್ಬರಾಗಿದ್ದಾರೆ. ಸದ್ಯಕ್ಕೆ ಕನ್ನಡ ಕಿರುತೆರೆಯ ಹೆಸರಾಂತ ರಿಯಾಲಿಟಿ ಶೋ ಗಿಚ್ಚಿ ಗಿಲಿ ಗಿಲಿ ಸೀಸನ್ 2 (Gicchi Gili Gili Sisan 2) ನಲ್ಲಿ ತೀರ್ಪುಗಾರರಾಗಿ ಸಕ್ರಿಯರಾಗಿದ್ದು ಅದರ ಜೊತೆಗೆ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಸುಧೀರ್ ಅತ್ತಾವರ್ ನಿರ್ದೇಶನದ ‘ಕರಿ ಹೈದ ಕರಿ ಅಜ್ಜ’ (Kari Haida Kari Ajja) ಚಿತ್ರದಲ್ಲಿ ನಟಿ ಶ್ರುತಿ ನಟಿಸುತ್ತಿದ್ದು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *