ವಿಚಿತ್ರ ಉಡುಗೆಯಲ್ಲಿ ಅವಾರ್ಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕಬ್ಜ ಸುಂದರಿ ನಟಿ ಶ್ರೀಯಾ ಶರಣ್

ನಟಿ ಶ್ರಿಯಾ ಶರಣ್ (Shreeya Sharan) ಬಾಲಿವುಡ್, ಕಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಕಬ್ಜ (Kabza) ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಶ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು 2 ದಶಕಗಳೇ ಆಗಿದ್ದು, 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶ್ರಿಯಾ ರವರು ಸದಾ ಸುದ್ದಿಯಲ್ಲಿರುವ ನಟಿ ಮಣಿಯರಲ್ಲಿ ಒಬ್ಬರು ಎಂದರೆ ತಪ್ಪಿಲ್ಲ.

ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಬೆಡಗಿ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವಿದೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಸದಾ ಸುದ್ದಿಯಲ್ಲಿರುವ ನಟಿಯ ಹೊಸ ಫೋಟೋ ನೋಡಿ ಫಾನ್ಸ್ ಶಾಕ್ ಆಗಿದ್ದಾರೆ. ನಟಿ ಶ್ರೀಯಾ ಶರಣ್ ಬಟ್ಟೆ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಸೊಂಟದ ಕೆಳಗೆ ಕಾಣುವ ಡ್ರೆಸ್ ಹಾಕಿ ಪೋಸ್ ನೀಡಿದ ಫೋಟೋಗಳು ವೈರಲ್ ಆಗಿವೆ.

ಶ್ರೀಯಾರವರು ಅವಾರ್ಡ್ ಕಾರ್ಯಕ್ರಮ (Awards Function) ಕ್ಕಾಗಿ ವಿಶೇಷ ರೀತಿಯ ಉಡುಗೆಯನ್ನು ಧರಿಸಿದ್ದರು. ನಟಿ ಶ್ರೀಯಾ ವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದರು. ಹೌದು, ಶ್ರೀಯಾ ಧರಿಸಿರುವ ಬಟ್ಟೆಯಲ್ಲಿ ಸೊಂಟದ ಭಾಗದಲ್ಲಿ ಸಂಪೂರ್ಣ ಓಪನ್ ಇದ್ದು, ಡೆನಿಮ್ ಸ್ಲಿಟ್ ಗೌನ್ (Denim Slit Gown) ಧರಿಸಿದ್ದರು. ನಟಿಯ ಈ ಅವತಾರ ಕಂಡು ನೆಟ್ಟಿಗರು ಶಾಕ್ ಆಗಿದ್ದು, ನಟಿಯ ಈ ಉಡುಗೆಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.

ಈ ಹಿಂದೆಯೂ ಕೂಡ ಉಡುಗೆಯ ವಿಚಾರವಾಗಿ ನೆಟ್ಟಿಗರ ಗಮನ ಸೆಳೆದಿದ್ದರು. ಹಾಟ್‌ ಉಡುಗೆ ತೊಟ್ಟು ಶಿಲುಬೆ ಇರುವ ಸರ ಧರಿಸಿ ಹಾಟ್‌ ಲುಕ್‌ ನಲ್ಲಿ ಫೋಟೊ ಶೂಟ್‌ ಮಾಡಿಸಿದ್ದರು. ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪ್ರತಿ ಬಾರಿ ನಟಿ ಬೋಲ್ಡ್‌ ಲುಕ್‌ ಫೋಸ್‌ ನೀಡಿ ಫೋಟೊ ಶೇರ್‌ ಮಾಡಿರುವ ನಟಿಯು ಟ್ರೋಲ್ ಆಗಲು ಕಾರಣ ಶಿಲುಬೆ ಸರವಾಗಿತ್ತು. ಈ ಫೋಟೋಗಳಿಂದ ನಟಿಯು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

ಶ್ರೀಯಾ ಶರಣ್ ಈಗಾಗಲೇ ಕನ್ನಡ (Kannada), ತೆಲುಗು (Telugu) ಹಾಗೂ ಹಿಂದಿ (Hindi) ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟಂ (Istam) ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ರಿಯಾರವರಿಗೆ ಅವಕಾಶಗಳು ಬಂದವು. ಶ್ರಿಯಾ ಶರಣ್ ಅವರು ನಟಿ ಮಾತ್ರವಲ್ಲ ಮಾಡೆಲ್ ಕೂಡ. ಭಾರತೀಯ ಸಿನಿಮಾಗಳಲ್ಲಿ ಮಾತ್ರವಲ್ಲದೇ, ಅಮೆರಿಕಾ ಸಿನಿಮಾಗಳಲ್ಲೂ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಸದ್ಯಕ್ಕೆ ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *