ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದರೂ ಅವನು ನನಗೆ ಸಿಗಲಿಲ್ಲ. ತನ್ನ ಮೊದಲ ಪ್ರೇಮಿಯನ್ನು ನೆನಪಿಸಿಕೊಂಡ ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ, ಯಾರು ಆ ಪ್ರೇಮಿ ಗೊತ್ತಾ?

ನಟಿ ಶಕೀಲಾ (Shakila) ಈ ಹೆಸರನ್ನು ಎಲ್ಲರೂ ಕೂಡ ಕೇಳಿಯೇ ಇರುತ್ತಾರೆ. ಮಾದಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಸಿನಿರಸಿಕರ ಮನಸ್ಸು ಕದ್ದಿದ್ದ ಚೆಲುವೆಯೇ ನಟಿ ಶಕೀಲಾ. ಹೌದು, ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಶಕೀಲಾರವರಿಗೆ ಒಂದು ಕಾಲದಲ್ಲಿ ಎಲ್ಲಿಲ್ಲದ ಬೇಡಿಕೆಯಿತ್ತು. ಸಾಲು ಸಾಲು ಅವಕಾಶಗಳ ಜೊತೆಗೆ ನೇಮ್ ಫೇಮ್ ಎರಡು ಕೂಡ ಬಂದಿತ್ತು.

ಆದರೆ ಸಿನಿಮಾರಂಗದಲ್ಲಿದ್ದ ಗುರುತಿಸಿಕೊಂಡಿದ್ದ ನಟಿ ಶಕೀಲಾರವರು ಬದುಕು ನಾವು ನೀವು ಅಂದುಕೊಂಡಂತೆ ಹೂವಿನ ಹಾಸಿಗೆಯಂತೂ ಆಗಿರಲಿಲ್ಲ. ವೈಯುಕ್ತಿಕ ಬದುಕಿನಲ್ಲಿ ಸಾಕಷ್ಟು ಹೊಡೆತಗಳನ್ನು ತಿನ್ನುತ್ತಾ ಹೋದರು. ಇವರ ಕನಸನ್ನು ನನಸು ಮಾಡುತ್ತೇವೆ ಎಂದು ಅದೆಷ್ಟೋ ಜನ ಪುರುಷರು ಇವರ ಬದುಕಿಗೆ ಬಂದು ಅರ್ಧದಲ್ಲೇ ಬಿಟ್ಟೆ ಹೋದರು.

ಹೀಗೆ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಎರಡನ್ನು ಹೇಗೋ ಸಂಭಾಳಿಸಿಕೊಂಡು ಬಂದ ನಟಿ ಶಕೀಲಾ ಇದೀಗ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋ (Reality Show) ಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಇತ್ತೀಚೆಗಷ್ಟೇ ಸಂದರ್ಶನ (Interview)ವೊಂದರಲ್ಲಿ ತನ್ನ ಪ್ರೇಮಿಯನ್ನು ನೆನಪಿಸಿಕೊಂಡಿದ್ದಾರೆ. ತನ್ನ ಪ್ರೇಮಿಯನ್ನು ನೆನಪಿಸಿಕೊಂಡು ನಾನು ಅವನನ್ನೇ ಮದುವೆಯಾಗಬೇಕಿತ್ತು. ಆದರೆ ಮದುವೆಗೆ ಇಬ್ಬರ ಮನೆಯಲ್ಲಿ ಒಪ್ಪಿಗೆ ಸಿಕ್ಕಿತು ಎನ್ನುವಷ್ಟರಲ್ಲಿ ಜಾತಿಯು ಅಡ್ಡಿಯಾಯಿತು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಶಕೀಲಾ, ಮದುವೆ ಅಂದರೆ ಅದು ಇಬ್ಬರ ನಿರ್ಧಾರವಾಗಿರಲಿಲ್ಲ. ಕುಟುಂಬಗಳೂ ಒಪ್ಪಬೇಕಿತ್ತು. ನಾನೂ ಮುಸ್ಲಿಂ, ಆತ ಹಿಂದೂ. ನಮ್ಮಿಬ್ಬರ ಕುಟುಂಬಗಳ ನಡುವೆ ಈ ಮದುವೆ ವಿಚಾರದಲ್ಲಿ ಸಾಕಷ್ಟು ಅಂತರವಿತ್ತು. ಜಾತಿ ವಿಚಾರವಾಗಿ ಈ ಮದುವೆ ಆಗದು ಎಂಬ ಸುಳಿವೂ ನನಗೆ ಅದಾಗಲೇ ಸಿಕ್ಕಿತ್ತು. ಅದ್ಯಾವ ಮಟ್ಟಿಗೆ ಹೋಯಿತು ಎಂದರೆ, ಈ ಸಂಬಂಧ ಬೇಡ, ಬೇರೆ ಹುಡುಗಿಯನ್ನು ಮದುವೆ ಆಗು ಎಂದು ಆತನಿಗೆ ಮನೆಯಲ್ಲಿ ಒತ್ತಾಯ ಹೇರಿದರು. ಆತನ ಮನೆಯಲ್ಲಿ ಈ ಮದುವೆ ವಿಚಾರ ವಿ-ಕೋಪಕ್ಕೆ ಹೋಯಿತು.”

“ಕೊನೆಗೆ ನನ್ನ ಬಳಿ ಬಂದು, ಮದುವೆಗೆ ಒಪ್ಪದ ವಿಚಾರವನ್ನು ನನ್ನ ಮುಂದೆ ಹೇಳಿದ. ಬೇರೆ ಮದುವೆ ಆಗುವ ಬಗ್ಗೆಯೂ ತಿಳಿಸಿದ. ಆತನ ಮಾತಿಗೆ ನಾನೂ ಚಕಾರ ಎತ್ತದೆ ಒಪ್ಪಿದೆ ಸೂಚಿಸಿದೆ. ಏಕೆಂದರೆ, ಪ್ರೀತಿ ಪಾತ್ರರಿಗೆ ನೋವು ತರಿಸುವುದು ನನಗೂ ಇಷ್ಟವಿರಲಿಲ್ಲ. ಆತ ಸದಾ ಖುಷಿಯಾಗಿರಬೇಕು ಎಂದು ಬಯಸುವವಳು ನಾನು. ಆ ವ್ಯಕ್ತಿ ಯಾರೆಂದು ನಾನು ರಿವೀಲ್‌ ಮಾಡುವುದಿಲ್ಲ. ಏಕೆಂದರೆ, ಅವನೀಗ ಒಂಟಿಯಲ್ಲ. ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾನೆ. ಹೆಸರು ಹೇಳಿ ಸಂಸಾರ ಹಾಳು ಮಾಡುವುದು ನನಗಿಷ್ಟವಿಲ್ಲ” ಎಂದಿದ್ದಾರೆ.

ಅಷ್ಟೇ ಅಲ್ಲದೇ, ತನ್ನ ಮೊದಲ ಪ್ರೇಮಿಯನ್ನು ನೆನಪಿಸಿಕೊಂಡು ಆತನ ಬಗ್ಗೆಯು ಮಾತನಾಡಿದ್ದು, “ಆಗ ನನಗಿನ್ನು 11 ವರ್ಷ ವಯಸ್ಸು. ನನ್ನ ಮನೆ ಪಕ್ಕದ ವ್ಯಕ್ತಿ ಜತೆಗೆ ನನಗೆ ಸಂಬಂಧವಿತ್ತು. ಆತನ ಹೆಸರು ಸುರೇಶ್‌ ರೆಡ್ಡಿ. ನನಗೆ ಆಗ ಗೊತ್ತಿರಲಿಲ್ಲ. ಇದು ಲವ್ವಾ ಅಥವಾ ಬೇರೆ ಏನೋ ಎಂದು. ಆದರೆ, ಆ ವಯಸ್ಸಿನಲ್ಲಿ ಅದು ಘಟಿಸಿತ್ತು” ಎಂದಿದ್ದಾರೆ. ಹೀಗೆ ಎಲ್ಲಾ ನೋವನ್ನು ತಿಂದ ನಟಿ ಶಕೀಲಾರವರ ಬದುಕು ಮುಳ್ಳಿನ ಹಾದಿಯಾಗಿದ್ದರೂ ಸಿನಿ ಪ್ರಿಯರ ಪ್ರೀತಿಯನ್ನು ಸಂಪಾದಿಸಿಕೊಂಡು, ಬಣ್ಣದ ಬದುಕನ್ನೇ ತನ್ನ ಜೀವನವನ್ನಾಗಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *