ನಾಗಿಣಿ ಸೀರಿಯಲ್ ನಟಿ ಗಿಂತ ತಾನೇನು ಕಮ್ಮಿ ಇಲ್ಲ ಎಂದು ತೋರಿಸಲು ಗೋವಾ ಬೀಚ್ ನಲ್ಲಿ ಬಿಕಿನಿ ತೊಟ್ಟು ಹಾಟ್ ಆಗಿ ಗಮನ ಸೆಳೆದ ನಟಿ ಸಾರಾ ಅಣ್ಣಯ್ಯ!!!

ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿಯರು ತುಂಡುಗೆಯಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಈಗಾಗಲೇ ಬಿಕಿನಿಯಲ್ಲಿ ನೆಟ್ಟಿಗರ ಗಮನ ಸೆಳೆದ ನಟಿಯರು ಹಲವರಿದ್ದಾರೆ. ಅಂತಹವರ ಸಾಲಿಗೆ ನಟಿ ಸಾರಾ ಅಣ್ಣಯ್ಯ (Sara Annayya) ಕೂಡ ಸೇರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಸಾರಾ ಅಣ್ಣಯ್ಯ ಮತ್ತೆ ಹಾಟ್ ಫೋಟೋ (Hot Photo) ಮೂಲಕ ಸುದ್ದಿಯಾಗಿದ್ದಾರೆ.

ಕನ್ನಡತಿ (Kanndati) ಧಾರಾವಾಹಿಯಲ್ಲಿ ವರೂಧಿನಿ (Varudhini) ಪಾತ್ರದಲ್ಲಿ ನಟಿಸಿದ್ದರು ನಟಿ ಸಾರಾ ಅಣ್ಣಯ್ಯ (Sara Annayya). ಕನ್ನಡತಿಯಲ್ಲಿ ವಿಲನ್ ಆಗಿ ನಟಿಸುತ್ತಿದ್ದ ವರೂಧಿನಿ ಅಲಿಯಾಸ್ ಸಾರಾ ಅಣ್ಣಯ್ಯ ಅವರು ಮಾಡಲಿಂಗ್ (Modeling) ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು. ಸದ್ಯಕ್ಕೆ ನಟಿ ಸಾರಾ ಅಣ್ಣಯ್ಯನವರು ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ಇದೀಗ ವೇಕೆಶನ್ ಮೂಡ್ ನಲ್ಲಿದ್ದಾರೆ.

ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಗೋವಾದಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಮೈ ಕೈ ಕಾಣುವ ಉಡುಗೆ ತೊಟ್ಟು ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದ ಬೆಡಗಿ ಇದೀಗ ಬಿಕಿನಿನಲ್ಲಿ ಹಾಟ್ ಆಗಿ ಕಂಗೊಳಿಸಿದ್ದಾರೆ. ಸಾರಾ ಅಣ್ಣಯ್ಯ ಅವರು ಬ್ಲ್ಯಾಕ್ (Black) ಪ್ರಿಂಟೆಡ್ ಬಿಕಿನಿ ಧರಿಸಿ ಕಡಲ ತೀರದಲ್ಲಿ ಸಖತ್ ಹಾಟ್ ಆಗಿ ಗಮನ ಸೆಳೆದಿದ್ದಾರೆ.

ಬ್ಲ್ಯಾಕ್ ಪ್ರಿಂಟೆಡ್ ಬಿಕಿನಿ ಧರಿಸಿ ಹೇರ್ ಸ್ಟೈಲ್ ಮಾಡಿಸಿಕೊಂಡಿಲ್ಲ. ಕೂದಲನ್ನು ಹರಿಬಿಟ್ಟಿದ್ದು ವಿವಿಧ ರೀತಿಯಲ್ಲಿ ಪೋಸ್ ನೀಡಿದ್ದಾರೆ. ನಟಿ ಸಾರಾ ಅಣ್ಣಯ್ಯರವರ ಅವತಾರ ಕಂಡು ನೆಟ್ಟಿಗರು ಬಾಯಿಗೆ ಬೆರಳು ಇಟ್ಟುಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗುತ್ತಿದೆ. ಬಾಲಿವುಡ್ ನಟಿಯರು ಕೂಡಾ ಈ ರೀತಿಯ ಪೋಸ್ಟ್ ಹಾಕುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ನಟಿ ಸಾರಾ ಅಣ್ಣಯ್ಯ ಕನ್ನಡತಿ (Kannadati) ಧಾರಾವಾಹಿಯಲ್ಲಿ ನಟಿಸುವ ಅವಕಾಶಸಿಕ್ಕಿತು. ಇತ್ತೀಚೆಗಷ್ಟೇ ನಮ್ಮ ಲಚ್ಚಿ (Namma Lacchi) ಧಾರಾವಾಹಿಯಲ್ಲಿ ಸ್ವಲ್ಪ ದಿನ ದೀಪಿಕಾ ಪಾತ್ರದಲ್ಲಿ ನಟಿಸಿದ್ದರು. ಸದ್ಯಕ್ಕೆ ಜೀ ಕನ್ನಡ (Zee Kannada) ದಲ್ಲಿ ಪ್ರಸಾರವಾಗ್ತಿರುವ ಅಮೃತಧಾರೆ (Amrutha Dhare) ಧಾರಾವಾಹಿಯಲ್ಲಿ ನಟಿಸುತ್ತಿದ್ದು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

Leave a Reply

Your email address will not be published. Required fields are marked *