ಸಿಂಪಲ್ ಲುಕ್ ನಲ್ಲಿ ತೆಗೆದ ಫೋಟೋವನ್ನು ಶೇರ್ ಮಾಡಿಕೊಂಡ ಕಾಂತಾರದ ಚೆಲುವೆ ಸಪ್ತಮಿ ಗೌಡ

ಚಂದನವನದಿಂದ ಬಣ್ಣದ ಲೋಕಕ್ಕೆ ಲಗ್ಗೆ ಇಟ್ಟ ಬೆಡಗಿ ಸಪ್ತಮಿ ಗೌಡ (Saptami Gowda) ರವರು ಪರಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರದ ಚೆಲುವೆ ಸಪ್ತಮಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾವೈಯುಕ್ತಿಕ ಜೀವನದ ಕುರಿತಂತೆ ಅಪ್ಡೇಡ್ ನೀಡುತ್ತಿರುತ್ತಾರೆ. ಮೂಗುತಿ ಸುಂದರಿಯೂ ಸಿಂಪಲ್ ಲುಕ್ ನಲ್ಲಿರುವ ಫೋಟೋಗಳನ್ನು ಶೇರ್ ಮಾಡಿಕೊಂಡು ಹಾಟ್ ಆಗಿ ಬರ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಗಳಿಂದ ಹದಿಮೂರು ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.

ಕಾಂತಾರ (Kantara) ದ ಲೀಲಾ ಅಲಿಯಾಸ್ ಸಪ್ತಮಿ ಗೌಡರ ಅವರು ಎಲ್ಲರಿಗೂ ಕೂಡ ಇಷ್ಟವಾಗಿದ್ದಾರೆ ಎನ್ನುವುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಸಪ್ತಮಿ ಗೌಡ ತಮ್ಮ ಲೀಲಾ ಲುಕ್, ಕಾಸ್ಟ್ಯೂಮ್, ಹಾವಭಾವದಿಂದಲೇ ಫಾರೆಸ್ಟ್ ಗಾರ್ಡ್ ಲೀಲಾ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಬಳಿಕ ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲಿಯೂ ಸಾಲು ಸಾಲು ಅವಕಾಶಗಳು ಬರುತ್ತಿದೆ.

ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದಲ್ಲಿ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ನಟಿ ಸಪ್ತಮಿ ಗೌಡ, ‘ಮೊದಲಿಗೆ, ಕಾಶ್ಮೀರ್ ಫೈಲ್ಸ್ ಸಿನಿಮಾ ಎಷ್ಟು ದೊಡ್ಡದಾಗಿದೆ ಎಂಬುದು ನಮಗೆ ತಿಳಿದಿದೆ. ವಿವೇಕ್ ಅಗ್ನಿಹೋತ್ರಿ ಸರ್ ಅವರಂತಹ ನಿರ್ದೇಶಕರೊಂದಿಗೆ ಕೆಲಸ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಇದು ಹೊಸ ಭಾಷೆ, ಹೊಸ ಉದ್ಯಮ, ಮತ್ತು ಹಲವು ಅಂಶಗಳನ್ನು ಕಲಿತುಕೊಳ್ಳುವ ಅಗತ್ಯವಿರುತ್ತದೆ ಎಂಬುದು ನನಗೆ ಖಚಿತವಾಗಿದೆ”.

“ಚಿತ್ರದ ಭಾಗವಾಗುವುದು ಮತ್ತು ದೊಡ್ಡ ತಾರೆಯರೊಂದಿಗೆ ನಟಿಸುವುದು ಸೇರಿದಂತೆ ಬಹುಭಾಷಾ ಚಿತ್ರದಲ್ಲಿ ಅನ್ವೇಷಿಸಲು ಸಾಕಷ್ಟು ಹೊಸ ಮಾರ್ಗಗಳಿವೆ. ಇದು ಕೇವಲ ಬಾಲಿವುಡ್ ನಲ್ಲಿ ಕೆಲಸ ಮಾಡುವುದು ಮಾತ್ರವಲ್ಲ. ನಾನು ಭಾರತೀಯ ಚಿತ್ರರಂಗದ ಅದ್ಭುತ ದಿಗ್ಗಜರಾದ ಅನುಪಮ್ ಖೇರ್ ಮತ್ತು ನಾನಾ ಪಾಟೇಕರ್ ಅವರೊಂದಿಗೆ ಕೆಲಸ ಮಾಡುತ್ತೇನೆ’ ಎಂದಿದ್ದರು.

ಆದರೆ ಇದೀಗ, ‘ದಿ ವ್ಯಾಕ್ಸಿನ್ ವಾರ್ ‘ (The Vaccine War) ಸಿನಿಮಾದ ರಿಲೀಸ್ ಡೇಟ್ ಪೋಸ್ಟ್ ಫೋನ್ ಆಗಿದೆ. ಅಂದಹಾಗೆ, ಭಾರತದಲ್ಲಿ ಈ ಸಿನಿಮಾವನ್ನು ತೆರೆಗೆ ತರುವ ಮೊದಲೇ ಅಮೆರಿಕದಲ್ಲಿ ಪ್ರೀಮಿಯರ್ ಮಾಡಲು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಯೋಚಿಸಿದ್ದಾರಂತೆ. ಹೀಗಾಗಿ ಈ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಇತ್ತ ನಟಿ ಸಪ್ತಮಿ ಗೌಡರವರಿಗೆ ಅವಕಾಶಗಳು ಬರುತ್ತಲೇ ಇದ್ದು, ದಿ ವ್ಯಾಕ್ಸಿನ್ ವಾರ್ (The Vaccine War), ಕಾಳಿ (Kali), ಯುವ (Yuva) ಸಿನಿಮಾಗಳಿವೆ. ಇನ್ನುಳಿತ ಸಿನಿಮಾಗಳು ಮಾತು ಕಥೆಯ ಹಂತದಲ್ಲಿ ಸದ್ಯಕ್ಕೆ ನಟಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *