ಅಮ್ಮ ಹಾಗೂ ತಂಗಿಯ ಜೊತೆಗೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ ನಟಿ ಸಪ್ತಮಿ ಗೌಡ, ಫೋಟೋಗಳು ವೈರಲ್

ಕಾಂತಾರ (Kaantara) ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ಮಿಂಚಿದ ಚೆಂದುಳ್ಳಿ ಚೆಲುವೆ ಸಪ್ತಮಿ ಗೌಡ (Saptami Gowda). ತನ್ನ ನಟನೆಯಿಂದಲೇ ಎಲ್ಲರ ಮನಸ್ಸು ಗೆದ್ದ ಈ ಬೆಡಗಿಯ ಅದೃಷ್ಟವೇ ಬದಲಾಯಿತು. ಈ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಆಗಿ ಬದಲಾದ ನಟಿ ಸಪ್ತಮಿ ಗೌಡರವರಿಗೆ ಬಾರಿ ಬೇಡಿಕೆಯಿದೆ.

ಹೀಗಾಗಿ ಕನ್ನಡ ಮಾತ್ರವಲ್ಲದೇ ಪರಭಾಷೆಯ ಸಿನಿಮಾಗಳನ್ನು ಒಪ್ಪಿಕೊಂಡಿರುವ ನಟಿ ಸಪ್ತಮಿ ಗೌಡರವರು ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.ಕಾಂತಾರದ ಬೆಡಗಿ ಸಪ್ತಮಿ ಗೌಡ ವರಮಹಾಲಕ್ಷ್ಮಿ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದು, ನಟಿ ಸಪ್ತಮಿ ಗೌಡರವರು ಫ್ಯಾಮಿಲಿ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ.

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ಫೋಟೋಗಳನ್ನು ನಲ್ಲಿ ಸಪ್ತಮಿ ಗೌಡರವರು ತಮ್ಮ ಇನ್ಸ್ಟಾಗ್ರಾಮ್​ (Instagram) ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಈ ಫೋಟೋದಲ್ಲಿ ಅಮ್ಮ ಹಾಗೂ ತಂಗಿಯ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಬಿಳಿ ಹಾಗೂ ಹಳದಿ ಬಣ್ಣದ ಸೀರೆಯುಟ್ಟ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ನಟಿಯು ಶೇರ್ ಮಾಡಿಕೊಂಡಿರುವ ಫೋಟೋ ನೋಡಿ ಮೆಚ್ಚಿಕೊಂಡಿದ್ದು, ನಟಿಯ ಅಮ್ಮ ಹಾಗೂ ತಂಗಿಯನ್ನು ಕಂಡು ಖುಷಿ ಪಟ್ಟಿದ್ದಾರೆ. ಸದ್ಯಕ್ಕೆ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ನಟಿ ಸಪ್ತಮಿ ಗೌಡ (Saptami Gowda) ರವರು, ಅವಕಾಶಗಳು ಬರುತ್ತಿದೆ. ಈಗಾಗಲೇ ನಟಿ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಕಾಂತಾರ’ ಸಿನಿಮಾವನ್ನು ನೋಡಿ ಮೆಚ್ಚಿದ್ದ ಬಾಲಿವುಡ್‌ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ, ಚಿತ್ರದ ನಾಯಕಿ ಸಪ್ತಮಿ ಗೌಡ ಅವರನ್ನು ಬಾಲಿವುಡ್‌ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Director Vivek Agnihotri) ಅವರ ನಿರ್ದೇಶನದ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ ನಟಿಸುತ್ತಿದ್ದು ಈಗಾಗಲೇ ಸಿನಿಮಾ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ.

ಕೋವಿಡ್ ವ್ಯಾಕ್ಸಿನ್ ಗೆ ಸಂಬಂಧ ಪಟ್ಟಂತೆ ಕಥೆಯಲ್ಲಿ ವಿವೇಕ್‌ ರಂಜನ್‌ ಪತ್ನಿ ಪಲ್ಲವಿ ಜೋಶಿ, ಅನುಪಮ್ ಖೇರ್, ನಾನಾ ಪಾಟೇಕರ್ ಮತ್ತು ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ.ಮುಂದಿನ ಸೆಪ್ಟೆಂಬರ್‌​ 28 ರಂದೇ ‘ದಿ ವ್ಯಾಕ್ಸಿನ್​ ವಾರ್’ ಚಿತ್ರ 11 ಭಾಷೆಗಳಲ್ಲಿ ತೆರೆ ಕಾಣಲಿದೆ. ಅದಲ್ಲದೇ ಅಭಿಷೇಕ್ ಅಂಬರೀಶ್ (Abhishek Ambarish) ನಟನೆಯ ಕಾಳಿ (Kaali) ಹಾಗೂ ಯುವರಾಜ್ ಕುಮಾರ್ ಅವರ ನಟನೆಯ ಯುವ (Yuva) ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *