ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Session 10) ಶುರುವಾಗಿ 1 ವಾರ ಕಳೆದಿದೆ. ಇದೀಗ ಎರಡನೇ ವಾರದಲ್ಲಿ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿಯೇ ಇದೆ. ಈಗಾಗಲೇ ಸ್ಪರ್ಧಿಗಳ ನಡುವೆ ಜಗಳಗಳು, ಮನಸ್ತಾಪ, ಟಾರ್ಗೆಟ್ ಮಾಡುವ ಪ್ರವೃತ್ತಿಗಳು ಎದ್ದು ಕಾಣುತ್ತಿವೆ. ದೊಡ್ಮನೆಯಲ್ಲಿ 2ನೇ ವಾರದಲ್ಲೇ ಪ್ರೀತಿ ಪ್ರೇಮಗಳು ಚಿಗುರುತ್ತಿವೆ.
ಇತ್ತ ಚಾರ್ಲಿ ನಟಿ ಸಂಗೀತಾ ಶೃಂಗೇರಿ (Sangeetha Sringeri) ಬಿಗ್ ಬಾಸ್ ಬಹಳಷ್ಟು ಸುದ್ದಿಯಲ್ಲಿದ್ದಾರೆ. ಎಲ್ಲಾ ಸ್ಪರ್ಧಿಗಳ ನಡುವೆ ಒಳ್ಳೆಯ ಒಡನಾಟ ಹೊಂದಿರುವ ನಟಿ ಸಂಗೀತಾ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ಪಡೆಯುವ ಸಂಭಾವನೆಯ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವಿಚಾರಕ್ಕೆ ಬಂದರೆ ಎಲ್ಲಾ ಸ್ಪರ್ಧಿಗಳಿಗೂ ಪೈಪೋಟಿ ನೀಡುತ್ತಿರುವ ಸಂಗೀತಾ ಶೃಂಗೇರಿಯವರು ಪಡೆಯುವ ಸಂಭಾವನೆಯ ಮೊತ್ತ ಕೇಳಿದರೆ ಅಚ್ಚರಿಯಾಗಬಹುದು.
ಚಾರ್ಲಿ ಬೆಡಗಿಯ ಸಂಗೀತಾ ಶೃಂಗೇರಿಯವರು ಬಿಗ್ ಬಾಸ್ ಮನೆಯಲ್ಲಿ ದಿನಕ್ಕೆ ಹದಿನೈದು ಸಾವಿರರೂಪಾಯಿ ಸಂಭಾವನೆ (Remuneration) ಪಡೆಯುತ್ತಾರೆ. ಅಂದರೆ ವಾರಕ್ಕೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.ಇನ್ನೊಂದೆಡೆ ಸಂಗೀತಾ ಶೃಂಗೇರಿಯವರು ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಗೌಡ (Karthik Gowda) ರವರ ಜೊತೆಗೆ ಕ್ಲೋಸ್ ಆಗುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.
ಈಗಾಗಲೇ ಇವರಿಬ್ಬರ ನಡುವೆ ಲವ್ ಶುರುವಾಗಿದೆ ಎನ್ನಲಾಗುತ್ತಿದೆ. ಪ್ರಾರಂಭದಲ್ಲಿ ಬಿಗ್ ಬಾಸ್ ಪ್ರಾರಂಭದಲ್ಲಿಯು ಕಾರ್ತಿಕ್ ಹಾಗೂ ಸಂಗೀತಾ ಕ್ಲೋಸ್ ಫ್ರೆಂಡ್ ಆಗಿದ್ದರು. ಸದ್ಯಕ್ಕೆ ಇವರಿಬ್ಬರ ಫ್ರೆಂಡ್ ಶಿಪ್ ಪ್ರೀತಿಗೆ ತಿರುಗುವಂತೆ ಕಾಣುತ್ತಿದೆ.ಬಿಗ್ ಬಾಸ್ ನೀಡಿದ ಟಾಸ್ಕ್ ವೇಳೆ ಕಾರ್ತಿಕ್ ಬೆನ್ನಿಗೆ ಗಾಯವಾಗಿದ್ದು, ಈ ವೇಳೆಯಲ್ಲಿ ಸಂಗೀತಾ ಗಾಯಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿದ್ದಾರೆ. ಕೊನೆಗೆ ಕಾರ್ತಿಕ್ ತಬ್ಬಿಕೊಂಡು ಸಮಾಧಾನ ಮಾಡುವ ದೃಶ್ಯ ಸದ್ಯಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ.
ಬಿಗ್ ಬಾಸ್ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸದ್ಯಕ್ಕೆ ಇವರ ಲವ್ ಸ್ಟೋರಿಯು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅದೇನೇ ಇರಲಿ ಬಿಗ್ ಬಾಸ್ ಮನೆಯಲ್ಲಿ ಮುಗಿಯುವಷ್ಟರಲ್ಲಿ ಮತ್ತೊಂದು ಮುದ್ದಾದ ಜೋಡಿಗಳು ಮನೆಯಿಂದ ಹೊರಗೆ ಹೋಗುತ್ತಾರಾ ಎಂದು ಕಾದು ನೋಡಬೇಕು.