ಪಾರ್ವತಿ ಪಾತ್ರ ಮಾಡಿದ ನೀವು ಯಾಕೆ ಬಿ ಕಿನಿ ದರಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ನಟಿ ಸಂಗೀತ ಕೊಟ್ಟ ಉತ್ತರಕ್ಕೆ ಕೇಳಿ ಶಾಕ್ ಆದ ಜನತೆ!!

ಬಿಗ್ ಬಾಸ್ ಸೀಸನ್ 10 ರಲ್ಲಿ ಸದ್ಯಕ್ಕಂತೂ ಹೆಚ್ಚು ಸುದ್ದಿಯಲ್ಲಿರುವ ಸ್ಪರ್ಧಿ ಸಂಗೀತ ಶೃಂಗೇರಿ (Sangeetha Shrungeri) ಪ್ರಾರಂಭದಲ್ಲಿ ಕ್ರಶ್ ಎಂದು ಪ್ರೇಕ್ಷಕರ ಮನಸ್ಸು ಕದ್ದಿದ್ದ ಇವರು ಫ್ಯಾನ್ಸ್ ಗಳ ಮನಸ್ಸನ್ನು ಮುರಿಯುತ್ತಿದ್ದಾರೆ. ಕಾರ್ತಿಕ್ (Karthik) ಜೊತೆಗೆ ಇದ್ದ ಸಂಗೀತಾ ಶೃಂಗೇರಿಯವರು ಇದೀಗ ವಿನಯ್ ಗೌಡ (Vinay Gowda) ಅವರ ತಂಡ ಸೇರಿದ್ದಾರೆ. ಇತ್ತ ಹೊರ ಜಗತ್ತಿನಲ್ಲಿ ಸಂಗೀತಾ ಶೃಂಗೇರಿಯವರಿಗಿದ್ದ ಫ್ಯಾನ್ಸ್ ಫಾಲ್ಲೋರ್ಸ್ ಕಡಿಮೆಯಾಗುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಶೃಂಗೇರಿಯವರು ತೆಗೆದುಕೊಂಡಿರುವ ನಿರ್ಧಾರದಿಂದ ಟ್ರೋ-ಲ್ ಕೂಡ ಆಗುತ್ತಾ ಸುದ್ದಿಯಲ್ಲಿದ್ದಾರೆ. ಅವರ ಹೇಳಿಕೆಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹೌದು, ನಟಿ ಸಂಗೀತಾ ಶೃಂಗೇರಿ ಈ ಹಿಂದೊಮ್ಮೆ ಬಿ-ಕಿನಿ ಧರಿಸಿ ಫೋಟೋಶೂಟ್ (Photoshoot) ಮಾಡಿಸಿದ್ದು ಇದೆ. ಅವರ ಫೋಟೋ ಶೂಟ್ ಗೆ ಸಂಬಂಧ ಪಟ್ಟಂತೆ ಕೆಲವರು ಕೆ-ಟ್ಟದಾಗಿ ಕಾಮೆಂಟ್ ಮಾಡಿದ್ದರು.

ಈಬಗ್ಗೆ ನಟಿ ಸಂಗೀತಾ ಶೃಂಗೇರಿಯವರು ಖಾರ ಹೇಳಿದ್ದ ಬೋಲ್ಡ್‌ ಮಾತುಗಳು (Bold Statement) ವೈರಲ್ ಆಗುತ್ತಿವೆ. ಅಂದಹಾಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಸಂಗೀತಾ ಶೃಂಗೇರಿಯವರು, “ನನಗೆ ಸುಮಾರು ಡಿಸೈನರ್‌ಗಳು ಪರಿಚಯ ಇದ್ದಾರೆ ಬಾಲಿವುಡ್‌ನಿಂದ ಕೂಡ. ಅಲ್ಲಿನ ಡಿಸೈನರ್ಸ್‌ ನನ್ನನ್ನು ಭೇಟಿ ಮಾಡಿದಾಗ ಯಾಕೆ ಸೌತ್‌ ಇಂಡಿಯನ್ಸ್‌ ಇನ್ನೂ ಹಳೆ ಸ್ಟೈಲ್‌ನ ಫಾಲೋ ಮಾಡುತ್ತಿದ್ದಾರೆ ಅಂತ ಕೇಳುತ್ತಾರೆ. ನಾವು ಹಳ್ಳೆ ಸ್ಟೈಲ್‌ನಲ್ಲಿ ಇದ್ದೀವಾ ಅಂತ ಯೋಚನೆ ಮಾಡಲು ಶುರು ಮಾಡಿದೆ.

ಬಾಲ್ಯದಿಂದ ನನಗೆ ಒಂದು ಡ್ರೀಮ್ ಇತ್ತು ಎಲ್ಲಾ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂದು ಆದರೆ ಸತಿ ಪಾತ್ರ ಮಾಡುವಾಗ ಬೋಲ್ಡ್ ಫೋಟೋ ಅಪ್ಲೋಡ್ ಮಾಡಿದರೆ ನನ್ನ ಪ್ರೊಡಕ್ಷನ್ ತಂಡ ಅದನ್ನು ಡಿಲೀಟ್ ಮಾಡುವುದಕ್ಕೆ ಹೇಳಿತ್ತು. ನಟನೆಗೆ ಕಾಲಿಡುವ ಮುನ್ನವೇ ಮಾಡಲ್ ಆಗಿದ್ದೆ. ನನಗೆ ಮೊದಲು ಪ್ರಶಸ್ತಿ ಸಿಕ್ಕಿದ್ದೆ ವರ್ಲ್ಡ್‌ ಸೂಪರ್ ಮಾಡಲ್ ಟೀನ್ ಅಂತ. ಇಂಡಸ್ಟ್ರಿಗೆ ಕಾಲಿಡದೇ ಇದ್ದಿದ್ದರೂ ನಾನು ಮಾಡಲ್ ಆಗಿರುತ್ತಿದ್ದೆ.

ಬಿ-ಕಿನಿ ಹಾಕುವುದು ಗ್ಲಾ-ಮರ್ ತೋರಿಸುವುದಕ್ಕೆ ಅಲ್ಲ ನಾವು ಎಷ್ಟು ಫಿಟ್ ಆಗಿದ್ದೀವಿ ಅಂತ. ನಮ್ಮ ಆಹಾರ ಶೈಲಿ ಮತ್ತು ಮಾಡುವ ವರ್ಕೌಟ್‌ನಿಂದ ನಾವು ಫಿಟ್ ಆಗಿದ್ದೀವಿ ಅದಿಕ್ಕೆ ಬಿಕಿನಿ ಹಾಕ್ತೀನಿ. ಫಿಟ್ನೆಸ್ ಕಾಳಜಿ ವಹಿಸಿದರೆ ಯಾರಿಗೂ ಆರೋಗ್ಯದಲ್ಲಿ ಸಮಸ್ಯೆ ಬರುವುದಿಲ್ಲ.ಹಲವು ವರ್ಷಗಳ ಹಿಂದೆನೇ ನಾನು ಬಿಕಿನಿ ಹಾಕಿದ್ದೀನಿ ಆದರೆ ಯಾರಿಗೂ ಯಾಕೆ ಗೊತ್ತಿರಲಿಲ್ಲ ಅಂದ್ರೆ ಆಗ ನಾನು ಫೇಮಸ್ ಇರಲಿಲ್ಲ. ಈಗ ಚಾರ್ಲಿ ಬೆಡಗಿ ಆದ್ಮೇಲೆ ಫೇಮಸ್ ಆದೆ.

ಹರ ಹರ ಮಹಾದೇವ್ ಸಮಯದಲ್ಲಿ ನಾನು ಸೀರೆ ಹಾಕಿಕೊಂಡು 60-70 ವಯಸ್ಸಿನವರ ರೀತಿ ಇರುತ್ತಿದ್ದೆ. ನನಗೆ ವಯಸ್ಸಿದೆ ಯಾಕೆ ನಾನು ಈ ರೀತಿ ಡ್ರೆಸ್ ಹಾಕಿಕೊಳ್ಳುತ್ತಿರುವೆ ಎಂದು ಯೋಚನೆ ಮಾಡಿ ವರ್ಕೌಟ್ ಮಾಡಲು ಶುರು ಮಾಡಿ ನನಗೆ ಬೇಕಿರುವ ರೀತಿಯಲ್ಲಿ ಡ್ರೆಸ್ ಮಾಡಿಕೊಳ್ಳುತ್ತಿರುವೆ.ಯಾರೇ ಕಷ್ಟ ಪಟ್ಟರೂ ಈ ರೀತಿ ಡ್ರೆಸ್ ಆಗಬಹುದು ಎಂದು ತೋರಿಸಿಕೊಡುತ್ತಿರುವೆ. ಪ್ರತಿಯೊಬ್ಬರಿಗೂ ಒಂದು ಶೈಲಿಯ ಬಟ್ಟೆ ಹಾಕಬೇಕು ಅನಿಸುತ್ತದೆ ಆದರೆ ಅವರಿಗೆ ಅವಕಾಶ ಮತ್ತು ದೇಹ ಪೋರ್ಟ್ ಮಾಡುವುದಿಲ್ಲ ಅವರಿಗೆ ನಾನು ಸ್ಪೂರ್ತಿ ನೀಡುತ್ತಿರುವೆ” ಎಂದು ಖಡಕ್ ಅಗಿಯೇ ಹೇಳಿದ್ದರು. ಈ ಹೇಳಿಕೆ ಗಳು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗುತ್ತಿವೆ.

Leave a Reply

Your email address will not be published. Required fields are marked *