ವಿಭಿನ್ನವಾಗಿ ಪೋಸ್ ಕೊಟ್ಟು ಸೆಲ್ಫಿ ಕ್ಲಿಕಿಸಿಕೊಂಡ ಖ್ಯಾತ ನಟಿ ಸಂಗೀತಾ, ಫೋಟೋ ನೋಡಿದರೆ ಇವರೇನಾ ಸಿರೀಯಲ್ ನಟಿ ಎಂದು ಬಾಯಿ ಮೇಲೆ ಬೆರಳು ಇಡುತ್ತೀರಿ!!

ಕನ್ನಡ ಕಿರುತೆರೆ ಲೋಕದಲ್ಲಿ ಕಳೆದ ಕೆಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಟಿಯರು ಇವತ್ತಿಗೂ ಬೇಡಿಕೆಯನ್ನು ಹೊಂದಿದ್ದಾರೆ. ಅಂತಹ ನಟಿಯರಲ್ಲಿ ಮುದ್ದು ಮುಖದ ಚೆಲುವೆ ನಟಿ ಸಂಗೀತಾ ಅನಿಲ್ (Sangeetha Anil) ಕೂಡ ಒಬ್ಬರು. ನಟಿ ಸಂಗೀತಾರವರ ಪರಿಚಯ ಮಿಡಿಯಾ ಪ್ರೇಕ್ಷಕರಿಗೆ ಇದ್ದೇ ಇರುತ್ತದೆ ನಟಿ ಸಂಗೀತ ಕೇವಲ ಸೀರಿಯಲ್ ಗಳಲ್ಲಿ ಮಾತ್ರವಲ್ಲದೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಸಂಗೀತಾ (Sangeetha) ರವರು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ನಟಿಯ ವಿಶೇಷ ಪೋಸ್ಟ್ ವೊಂದು ಗಮನ ಸೆಳೆಯುತ್ತಿದೆ. ಹೌದು, ನಟಿ ಸಂಗೀತಾರವರು ಸ್ಕೈ ಬ್ಲೂ ಕಲರ್ ಸೀರೆಯಲ್ಲಿ ವಿವಿಧ ರೀತಿಯಲ್ಲಿ ಪೋಸ್ ನೀಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶುಭೋದಯ, ಜೀವನ ಸಾಗಿದೆ ಸಂಗೀತದಂತೆ ಇರಿ ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಪೋಸ್ಟ್ ಗೆ ಫ್ಯಾನ್ಸ್ ಮೆಚ್ಚಿ ಎರಡೂವರೆ ಸಾವಿರಕ್ಕೂ ಅಧಿಕ ಲೈಕ್ಸ್ ಒತ್ತಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಹೆಚ್ಚಾಗಿ ತಾಯಿ ಪಾತ್ರ ನಿಭಾಯಿಸಿಕೊಂಡು ಹೋಗಿರುವ ನಟಿ ಸಂಗೀತ ತನ್ನ ಸೌಂದರ್ಯವನ್ನು ಕಾಪಾಡಿಕೊಂಡಿದ್ದು ಯಂಗ್ ಆಗಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಸಾಕಷ್ಟು ಕನ್ನಡದ ಸೂಪರ್ ಸ್ಟಾರ್ ನಟರಿಗೆ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಂಗೀತಾ ಅವರು ಕಿರುತೆರೆಯಲ್ಲಿ 10 ಕ್ಕಿಂತ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದು, ಬೆಳ್ಳಿತೆರೆಯಲ್ಲಿ ಸುಮಾರು 50 ಕ್ಕಿಂತ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವಾಗಿ 20 ಚಿತ್ರಗಳಲ್ಲಿ ಇವರು ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.

ಇತ್ತೀಚೆಗಷ್ಟೇ ಸಂಗೀತ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇಂತಿ ನಿಮ್ಮ ಆಶಾ (Inti Nimma Asha) ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಲೋಕದಲ್ಲಿ ಬ್ಯುಸಿಯಾಗಿದ್ದರೂ ಬಿಡುವು ಸಿಕ್ಕಾಗಲೆಲ್ಲಾ ಕುಟುಂಬದ ಜೊತೆಗೆ ಕಳೆಯುವುದೆಂದರೆ ಇವರಿಗೆ ತುಂಬಾ ಇಷ್ಟ. ಹೀಗಾಗಿ ಪತಿ ಹಾಗೂ ಮಕ್ಕಳ ಜೊತೆಗೆ ಆಗಾಗ ಹೊರಗಡೆ ಸುತ್ತಾಡಲು ಹೋಗುತ್ತಿರುತ್ತಾರೆ.

ನಟಿ ಸಂಗೀತಾ ಅವರ ವೈಯುಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅನಿಲ್ ಕುಮಾರ್ (Anil Kumar) ಎಂಬುವವರನ್ನು ಮದುವೆಯಾಗಿದ್ದಾರೆ. ಪತಿ ಅನಿಲ್ ಕುಮಾರ್ ಅವರು ಖಾಸಗಿ ಕಂಪನಿಯಲ್ಲಿ ಒಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ನಟಿ ಸಂಗೀತಾ ದಂಪತಿಗಳಿಗೆ ಇಬ್ಬರೂ ಗಂಡು ಮಕ್ಕಳಿದ್ದು, ಸಂಸಾರ ಹಾಗೂ ವೃತ್ತಿ ಜೀವನವನ್ನು ಮ್ಯಾನೇಜ್ ಮಾಡಿಕೊಂಡು ಹೋಗುತ್ತಿದ್ದಾರೆ. ಕಿರುತೆರೆಯಲ್ಲಿ ಬೇಡಿಕೆಯಿರುವ ನಟಿ ಸಂಗೀತಾರವರಿಗೆ ಪತಿ ಅನಿಲ್ ಕುಮಾರ್ ಅವರು ಬೆಂಬಲವಾಗಿ ನಿಂತಿದ್ದಾರೆ.

Leave a Reply

Your email address will not be published. Required fields are marked *