actress samantha : ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಸಮಂತಾರವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಸಿನಿಮಾರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ನಟಿ ಸಮಂತಾರವರು ವೈಯುಕ್ತಿಕ ಜೀವನದ ಕಾರಣಕ್ಕೆ ಸುದ್ದಿಯಾಗಿದ್ದರು. ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ತೆರೆ ಎಳೆಯುವ ಮೂಲಕ,ನಟಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇಧನ ಪಡೆದುಕೊಂಡಿದ್ದರು.
ತೆಲುಗು ಚಿತ್ರರಂಗದಲ್ಲಿ ಮೋಸ್ಟ್ ಲವ್ಲಿ ಕಪಲ್ ಆಗಿ ಗುರುತಿಸಿಕೊಂಡಿದ್ದ ಇವರಿಬ್ಬರೂ ಸಿನಿ ತೆರೆ ಮೇಲೆ ಮಾತ್ರವಲ್ಲದೇ ರಿಯಲ್ ಲೈಫ್ ನಲ್ಲಿಯೂ ಇಷ್ಟವಾಗಿದ್ದರು. ಪ್ರೀತಿಸಿ ಮನೆಯವರನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಗಳು ವೈವಾಹಿಕ ಸಂಬಂಧದಿಂದ ದೂರವಾಗಿದ್ದರು. ಆದಾದ ಬಳಿಕ ತನ್ನ ಸಿನಿಕೆರಿಯರ್ ಬಗ್ಗೆ ಗಮನ ಹರಿಸುತ್ತಿದ್ದ ಸಮಂತಾರವರ ಬಗ್ಗೆ ಇಲ್ಲ ಸಲ್ಲದ ವಿಚಾರ ಗಳು ಹರಿದಾಡಿದ್ದವು.
ಸಿನಿ ಬದುಕಿನಲ್ಲಿ ಬ್ಯುಸಿಯಾಗಿರುವಾಗಲೇ ನಟಿಗೆ ಆರೋಗ್ಯ ಸಮಸ್ಯೆಯೊಂದು ಕಾಡಿತ್ತು. ಇತ್ತೀಚೆಗಷ್ಟೇ ಸ್ಯಾಮ್ ಅವರು ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದು, ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದರು. ಸ್ಯಾಮ್ ತಾನು ಮೈಯೋಸಿಟಿಸ್ ಎನ್ನುವ ಅಟೋ ಇಮ್ಯೂನ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತತಿಳಿಸಿದ್ದರು.
ಆಸ್ಪತ್ರೆಯ ಫೋಟೋ ಹಂಚಿಕೊಂಡು, ‘ಕೆಲವು ತಿಂಗಳ ಹಿಂದೆ ನನಗೆ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆ ಇರುವುದು ಪತ್ತೆಯಾಯ್ತು. ಇದರಿಂದ ಮುಕ್ತಿ ಪಡೆದ ನಂತರ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕೆಂದು ಎದುರು ನೋಡುತ್ತಿದ್ದೆ. ಆದರೆ ಇದು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆʼ ಅಂತಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.
ವಿದೇಶದಲ್ಲಿ ನಟಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸಮಸ್ಯೆಯಿಂದ ಬ್ರೇಕ್ ಪಡೆದುಕೊಂಡಿದ್ದ ಸ್ಯಾಮ್ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇದೀಗ ನಟಿ ಚೇತರಿಸಿಕೊಂಡಿದ್ದು ಮತ್ತೆ ವಾಪಾಸ್ ಆಗಿದ್ದಾರೆ. ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿರುವ ಸಮಂತಾ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಇನ್ನು ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾಗಳನ್ನು ಕಂಡರೂ ನಟಿ ಸಮಂತಾ ಯಾವುದೇ ರಿಯಾಕ್ಷನ್ ಮಾಡಿಲ್ಲ.
ತೀರಾ ಡಲ್ ಆಗಿರುವಂತೆ ನಟಿ ಸಮಂತಾ ಕಂಡುಬಂದಿದ್ದು, ಅಭಿಮಾನಿಗಳು ಸೆಲ್ಫಿ ಕೇಳಿದಾಗಲೂ ಸಮಂತಾ ಸುಮ್ಮನೆ ನಿಂತುಬಿಟ್ಟಿದ್ದಾರೆ. ಏರ್ ಪೋರ್ಟ್ ನಲ್ಲಿ ಸಮಂತಾ ಬಿಳಿ ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು ಈ ವಿಡಿಯೋವೊಂದು ವೈರಲ್ ಆಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟಿ ಸಮಂತಾ ಸೋಶಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದರು.
ಅದಕ್ಕೂ ಮೊದಲು ಫೋಟೋ ಹಾಗೂ ವಿಡಿಯೋ ಎಂದು ಅಪ್ಡೇಟ್ ನೀಡುತ್ತಿದ್ದರು. ನಟಿ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು. ಆಗಾಗ ಫೋಟೋ ವಿಡಿಯೋ ಎಂದು ಹಂಚಿಕೊಳ್ಳುವ ಸಮಂತಾರವರ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿತ್ತು. ಇತ್ತೀಚೆಗಷ್ಟೇ ನಟಿ ಸಮಂತಾ, ಶ್ವಾನದ ಜೊತೆಗಿನ ಫೋಟೋ ಹಂಚಿಕೊಂಡಿದ್ದರು. ಈ ಫೋಟೋಗೆ ಕಾಮೆಂಟ್ ಮಾಡಿದ್ದ ನೆಟ್ಟಿಗನೊಬ್ಬ, ನೀವು ಕೊನೆಗೆ ನಾಯಿಗಳ ಜೊತೆಗೆ ಸಾ ಯುತ್ತೀರಿ ಎಂದು ಹೇಳಿದ್ದನು.
ಆತನ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿದ್ದ ಸಮಂತಾನು ಹಾಗಾದ್ರೆ ನಾನು ಲಕ್ಕಿ ಎಂದಿದ್ದರು. ಸಮಂತಾರವರ ಖಡಕ್ ಉತ್ತರಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಟಿ ಸಮಂತಾರವರ ಮುಂಬರುವ ಸಿನಿಮಾ ಶಾಕುಂತಲಂ ರಿಲೀಸ್ ಗೆ ಸಿದ್ಧವಾಗಿದೆ. ಗುಣಶೇಖರ್ ನಿರ್ದೇಶನದ ಈ ಸಿನಿಮಾವು ಫೆಬ್ರವರಿ 17 ರಂದು ರಿಲೀಸ್ ಆಗಲಿದೆ. ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿ ತೆರೆಗೆ ಬರಲಿದ್ದು ಈ ಸಿನಿಮಾದ ಬಗ್ಗೆ ಬಹುನಿರೀಕ್ಷೆಯಿದೆ.