Actress Samantha saree: ತೆಳ್ಳಗೆ, ಬೆಳ್ಳಗೆ ಇರುವ ಸಮಂತಾ ಯಾವ ಉಡುಪನ್ನು ಧರಿಸಿದರು ಸಕತ್ cute ಆಗಿ ಕಾಣುತ್ತಾರೆ.ವೆಸ್ಟರ್ನ್, ಕ್ಲಾಸಿಕಲ್, ethnic ಯಾವ ಉಡುಪಾದರು ಸರಿ; ನಿದ್ದೆಗೆಡಿಸುವಂತಹ ಮೈ ಮಾಟ ಅವರದ್ದು. ಹೊಸ ಹೊಸ ಚಿತ್ರ ಕಥೆಗಳ ಚಿತ್ರೀಕರಣದಲ್ಲಿ ಸದಾಕಾಲ ಬ್ಯುಸಿಯಾಗಿರುವ Beauty Queen ಸಮಂತಾ ಶಾಕುಂತಲಂ ಚಿತ್ರದ ಟ್ರೈಲರ್ ಲಾಂಚ್ ಗೆ ತಿಳಿ ಬಿಳಿಯಾದ ಸೀರೆಯನ್ನು ಉಟ್ಟು ಬಂದಿದ್ದರು.
‘ಸೀರೆಲಿ ಹುಡುಗಿರ ನೋಡಲೆಬಾರದು ನಿಲ್ಲಲ್ಲ ಟೆಂಪರೇಚರ್’ ಎನ್ನುವ ಹಾಡಿನ ಸಾಲುಗಳಂತೆ, ಸಮಂತಾಳನ್ನು ಸೀರೆಯಲ್ಲಿ ಕಂಡ ಅಭಿಮಾನಿಗಳ ದಿಲ್ ಖುಷ್ ಆಗಿದೆ. ಸೀರೆಯ ಅಸಲಿ ಬೆಲೆಯ ಬಗ್ಗೆಯೂ ಸಾಕಷ್ಟು ಚರ್ಚೆಗಳಾಗುತ್ತಿವೆ. ಸಿಂಪಲ್ಲಾಗಿ ಎಂಟ್ರಿ ಕೊಟ್ಟ ಸಮಂತಾಳನ್ನು ಕಂಡ ನೆಟ್ಟಿಗರು ‘ಶಾಕುಂತಲೆಯಂತೆ ರೂಪವತಿ’ ಎಂದು ಹಾಡಿ ಹೊಗಳಿದ್ದಾರೆ.
ಟಾಲಿವುಡ್(Tollywood) ನಲ್ಲಿ ಸಾಕಷ್ಟು ಹೆಸರುಗಳಿಸಿರುವ ಸಮಂತಾ ಅಭಿಮಾನಿಗಳಿಂದ ಸ್ಯಾಮ್ ಎಂದೇ ಕರೆಸಿಕೊಳ್ಳುತ್ತಾರೆ. ಇತ್ತೀಚಿಗಷ್ಟೇ ಭರ್ಜರಿ ಪ್ರದರ್ಶನ ನೀಡಿದ ‘ಯಶೋಧ’ ಚಿತ್ರವು ವೀಕ್ಷಕರ ಮನ ಗೆದ್ದು ಚಪ್ಪಾಳೆಗಿಟ್ಟಿಸಿಕೊಂಡು, ಸಕ್ಸಸ್ (Success) ತಂದು ಕೊಟ್ಟಿತ್ತು. ಸಮಂತಾ ಅವರ ನಟನೆಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಅನಾರೋಗ್ಯದ ಮದ್ಯೆಯು ಸಾಲು ಸಾಲು ಚಿತ್ರಗಳನ್ನು ನೀಡುತ್ತಿರುವ ಸಮಂತಾ, ಇದೀಗ ಶಾಕುಂತಲಂ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ.
ಶಾಕುಂತಲಂ(Shakunthalam) ಚಿತ್ರದ ಟ್ರೈಲರ್ ಲಾಂಚಿಂಗ್ ಕಾರ್ಯಕ್ರಮಕ್ಕೆ ಆಡಂಭರ, ಆಭರಣಗಳಿಲ್ಲದೆ ಸರಳವಾದ ತಿಳಿ ಬಿಳಿ ಬಣ್ಣದ ಸೀರೆಯನ್ನುಟ್ಟು ಸಮಂತಾ ಬಂದಿದ್ದರು. ಬಿಳಿ ಬಣ್ಣದ ಸ್ಲೀವ್ಲೆೇಸ್ ಬ್ಲೌಸ್ (Sleeveless Blouse) ಅನ್ನು ತೊಟ್ಟಿದ್ದರು. ಸೀರೆಯ ಮೇಲೆ ಬಿಳಿ ಬಣ್ಣದ ಬಳ್ಳಿ ಬಳ್ಳಿಗಳಂತಹ ಚಿತ್ತಾರವಿತ್ತು. ಕಣ್ಣಿಗೆ ದೊಡ್ಡದಾದ ಗ್ಲಾಸ್ ಧರಿಸಿ, ಸೀರೆಗೆ ತಕ್ಕನಾದ ಪಾದರಕ್ಷೆಯನ್ನು ಕೂಡ ಧರಿಸಿದ್ದರು.
ಈ ಸೀರೆಯ ಅಸಲಿ ಬೆಲೆಯು ಎಪ್ಪತ್ತೆಂಟು ಸಾವಿರ ರೂಪಾಯಿಗಳೆಂದು ಮೂಲಗಳಿಂದ ತಿಳಿದು ಬಂದಿದೆ. ಈ ಸೀರೆಯು ಸಿದ್ಧಗೊಂಡಿರುವುದು ದೇವನಗರಿಯಲ್ಲಿ. ಸೀರೆ ಅದಕ್ಕೆ ತಕ್ಕನಾದ ಕನ್ನಡಕ ಮತ್ತು ಪಾದರಕ್ಷೆಯನ್ನು ಪಡೆಯಲು ಒಟ್ಟಾರೆಯಾಗಿ ತೊಂಭತ್ತು ಸಾವಿರ ರೂಪಾಯಿಗಳನ್ನು ಸಮಂತಾ ನೀಡಿದ್ದಾರೆ ಎನ್ನಲಾಗುತ್ತಿದೆ.
ಈ ಸೀರೆಯು ದೇವನಾಗರಿ ಬ್ರಾಂಡ್‌ನ ಸೆಹರ್ ಸಂಗ್ರಹದಿಂದ ಬಂದಿದೆ. ಈ ಸೀರೆಯ ಬೆಲೆ ಎಪ್ಪತ್ತೆಂಟು ಸಾವಿರ ರೂ.‘ಶಾಕುಂತಲಂ’ ಶಕುಂತಲಾ-ದುಷ್ಯಂತನ್ ಲವ್ ಸ್ಟೋರಿ ‘ಅಭಿಜ್ಞಾನ ಶಾಕುಂತಲ’ ಆಧಾರಿತ ಚಿತ್ರ. ‘ಸೂಫಿ ಯಂ ಸುಜಾತಂ’ ಚಿತ್ರದ ಮೂಲಕ ಫೇಮಸ್ ಆಗಿರುವ ದೇವ್ ಮೋಹನ್ ಅವರು ಸಮಂತಾ ಪಾತ್ರವನ್ನು ನಿರ್ವಹಿಸಿದ್ದಾರೆ. ಫೆಬ್ರವರಿ 17 ರಂದು ‘ಶಾಕುಂತಲಂ’ ಚಿತ್ರಮಂದಿರಕ್ಕೆ ಬರಲಿದೆ.