ಸದ್ದು ಗದ್ದಲ ಇಲ್ಲದೆ ಸೈಲೆಂಟಾಗಿ ಮದುವೆ ಮಾಡಿಕೊಂಡಿದ್ದಾರಾ ನಟಿ ಸಾಯಿ ಪಲ್ಲವಿ? ವೈರಲ್ ಆದ ಫೋಟೋದ ಹಿಂದಿನ ಕಥೆ ಬೇರೆನೇ ಇದೆ. ಇಲ್ಲಿದೇ ಅಸಲಿ ಸತ್ಯ!!

ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟಿಯರ ಪೈಕಿ ಸಾಯಿ ಪಲ್ಲವಿ (Saipallavi) ಕೂಡ ಒಬ್ಬರು. ನಟಿ ಸಾಯಿ ಪಲ್ಲವಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ ಆಗುವ ವ್ಯಕ್ತಿತ್ವ. ಸಿಂಪಲ್ ಹುಡುಗಿ ಪಾತ್ರಕ್ಕೆ ಹೊಂದಿಕೆಯಾಗುವ ಸಾಯಿ ಪಲ್ಲವಿ ನಟನೆ ಎಲ್ಲರಿಗೂ ಇಷ್ಟ ಆಗುತ್ತಾರೆ. ಸಾಯಿ ಪಲ್ಲವಿ 2005 ರ ತಮಿಳು ಚಿತ್ರ ಕಸ್ತೂರಿ ಮಾನ್ (Kasturiman) ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.

ತೆಲುಗು (Telugu), ತಮಿಳು (Tamil) ಹಾಗೂ ಮಲಯಾಳಂ (Malayalam) ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಕೇವಲ ಬೆರಳಿಣಿಕೆ ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ನಟಿ ಸಾಯಿ ಪಲ್ಲವಿಯವರ ಮದುವೆ (Marriage) ಯ ಸುದ್ದಿಯೊಂದು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದು, ಆದರೆ ಇದೀಗ ನಟಿ ಸಾಯಿ ಪಲ್ಲವಿಯವರ ಮದುವೆಯ ಸುದ್ದಿಗೆ ಕೊನೆಗೂ ಬ್ರೇಕ್ ಬಿದ್ದಿದೆ.

ಹೌದು, ಇತ್ತೀಚೆಗಷ್ಟೇ ಸಾಯಿ ಪಲ್ಲವಿ ಗುಟ್ಟಾಗಿ ಮದುವೆ (Marriage) ಆಗಿದ್ಧಾರೆ ಎನ್ನಲಾಗಿದೆ. ನಟಿ ಸಾಯಿ ಪಲ್ಲವಿ ಯಾವುದೇ ಮೇಕಪ್‌ ಇಲ್ಲದೆ ಹಾರ ಹಾಕಿಕೊಂಡು ನಿಂತಿರುವ ಫೋಟೋ ವೈರಲ್‌ ಆಗಿತ್ತು. ನಟಿ ಸಾಯಿ ಪಲ್ಲವಿಯವರ ಪಕ್ಕದಲ್ಲಿ ಒಬ್ಬ ವ್ಯಕ್ತಿಯ ಜೊತೆಗೆ ನಿಂತಿದ್ದು, ಆ ವ್ಯಕ್ತಿಯ ಕೊರಳಲ್ಲಿಯು ಹಾರ ಇದೆ.ಹೀಗಾಗಿ ಇಬ್ಬರಿಗೂ ಮದುವೆ ಆಗಿದೆ ಎನ್ನುವಂತೆ ಈ ಫೋಟೋವು ಬಿಂಬಿಸುವಂತಿತ್ತು. ಸರಳ ವ್ಯಕ್ತಿತ್ವದ ಚೆಲುವೆ ಸಾಯಿ ಪಲ್ಲವಿ ಸರಳವಾಗಿಯೇ ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ನಟಿ ಸಾಯಿ ಪಲ್ಲವಿ ಮದುವೆಯಾಗಿಲ್ಲ ಎನ್ನುವುದಕ್ಕೆ ಸ್ಪಷ್ಟನೆವೊಂದು ಸಿಕ್ಕಿದೆ.

ಸದ್ಯಕ್ಕೆ ಸೋಶಿಯಲ್ ಮೀಡಿಯಾ (Social Media) ದಲ್ಲಿ ಹರಿದಾಡುತ್ತಿರುವ ಫೋಟೋವು ಸಾಯಿ ಪಲ್ಲವಿ ನಟಿಸುತ್ತಿರುವ ಹೊಸ ಸಿನಿಮಾದ ಮುಹೂರ್ತದ ಫೋಟೋ ಎನ್ನಲಾಗಿದೆ. ಶಿವಕಾರ್ತಿಕೇಯನ್‌ (Shivakarthikeyan) ನಾಯಕನಾಗಿ ನಟಿಸುತ್ತಿರುವ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರಾಜ್‌ಕುಮಾರ್‌ ಪೆರಿಯಸಾಮಿ (Raj Kumar Periyasami) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಳೆದ ವರ್ಷ ಆ ಸಿನಿಮಾ ಮುಹೂರ್ತದ ವೇಳೆ ತೆಗೆಯಲಾದ ಫೋಟೋವಾಗಿದೆ.

ಈ ವೇಳೆಯಲ್ಲಿ ಚಿತ್ರತಂಡ ಎಲ್ಲರ ಕೊರಳಿಗೂ ಕೂಡ ಹಾರಹಾಕಲಾಗಿತ್ತು. ಆದರೆ ಯಾರೋ ನಟಿ ಪಲ್ಲವಿ ಹಾಗೂ ನಿರ್ದೇಶಕ ರಾಜ್‌ಕುಮಾರ್‌ ಇಬ್ಬರ ಫೋಟೋವನ್ನು ಮಾತ್ರ ಕ್ರಾಪ್ ಮಾಡಿದ್ದು, ನಟಿಯು ಸದ್ದಿಲ್ಲದೇ ಮದುವೆ ಮಾಡಿಕೊಂಡ್ರು ಎನ್ನುವ ಹಾಗೇ ಮಾಡಿದ್ದರು. ಆದರೆ ಈ ಫೋಟೋವು ಸಿನಿಮಾದ ಮುಹೂರ್ತದ ಫೋಟೋ ಎನ್ನಬಹುದು.

Leave a Reply

Your email address will not be published. Required fields are marked *