ಸಿನಿ ಲೋಕ ಈ ಹೆಸರು ಕೇಳಲು ಎಷ್ಟು ಖುಷಿಯಾಗುತ್ತದೆ. ಆದರೆ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟು, ಅದನ್ನೇ ಬದುಕಿಗಾಗಿ ನಂಬುವುದು ಸ್ವಲ್ಪ ಕಷ್ಟವೇ. ಯಾಕಂದರೆ ಕೆಲವೊಮ್ಮೆ ಈ ಸಿನಿಮಾರಂಗದಲ್ಲಿ ಸಾಲು ಸಾಲು ಅವಕಾಶಗಳು ಬರಬಹುದು. ಆದರೆ ಅವಕಾಶಗಳು ಇಲ್ಲದೇನೆ ನಟನಾ ಬದುಕಿನಿಂದ ದೂರ ಉಳಿಯಬಹುದು. ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ಅಪ್ಪಟ ಕನ್ನಡತಿ ನಟಿ ರೋಶನಿ ಪ್ರಕಾಶ್ (Roshani Prakash) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?.
ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟಿ ರೋಶನಿ ಪ್ರಕಾಶ್ ಅವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ನಟಿ ರೋಶನಿ ಸೀರೆ ಉಟ್ಟು ಸುಂದರವಾಗಿ ಕಂಗೊಳಿಸಿದ್ದಾರೆ. ಸಿಂಪಲ್ ಸೀರೆ ಉಟ್ಟಿದ್ದು ಮರದ ಕೆಳಗೆ ನಿಂತು ಕ್ಯಾಮೆರಾಗೆ ಪೋಸ್ ನೀಡಿರುವ ನಟಿಯ ಫೋಟೋಗಳ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ (Social Media) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅಮ್ಮ ಯಾವಾಗಲೂ ಹೇಳುತ್ತಾರೆ ನಾನು ಸೀರೆಯಲ್ಲಿ ಚೆನ್ನಾಗಿ ಉಡುತ್ತೇನೆಯಂತೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಹದಿನೆಂಟು ಸಾವಿರಕ್ಕೂ ಹೆಚ್ಚು ಜನರು ಈ ಫೋಟೋವನ್ನು ಮೆಚ್ಚಿದ್ದು ಲೈಕ್ಸ್ ನೀಡಿದ್ದಾರೆ.

ರೋಶಿನಿ ಪ್ರಕಾಶ್ ಅವರು 23 ಸೆಪ್ಟೆಂಬರ್ 1993ರಲ್ಲಿ ಕೊಡಗು (Kodag ಜಿಲ್ಲೆಯಲ್ಲಿ ಜನಿಸಿದರು. ಎಂಜಿನಿಯರಿಂಗ್ ಪದವಿಯನ್ನು ಮುಗಿಸಿದ ಇವರು ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡರು. ಹೆಚ್ಚಾಗಿ ತೆಲುಗು (Telug) ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು. ಹೌದು ಅಪ್ಪಟ ಕನ್ನಡದ ಪ್ರತಿಭಾವಂತ ನಟಿ ರೋಶಿನಿ ಪ್ರಕಾಶ್ ಅವರು ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಅಲ್ಲಿಯು ಕೂಡ ಸಿನಿ ಪ್ರಿಯರ ಪ್ರೀತಿಯನ್ನು ಸಂಪಾದಿಸಿಕೊಂಡಿದ್ದಾರೆ.
ಕನ್ನಡದಲ್ಲಿ `ಟೈಗರ್ ಗಲ್ಲಿ’ (Tiger Galli) ಮುಖಾಂತರ ಚಂದನವನಕ್ಕೆ ಲಗ್ಗೆ ಇಟ್ಟರು. ನಟಿ ಈ ಹಿಂದೆ ತಮಿಳು ಚಿತ್ರಗಳು ಯೆಮಾಲಿ (Yemali), ಜಡಾ (Jada) ಹಾಗೂ ಕನ್ನಡದ ಕವಲುದಾರಿ (Kavaludari), ಲಕ್ಕಿ ಮ್ಯಾನ್ (Lucky Man) ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಸದ್ಯಕ್ಕೆ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ವನಂಗಾನ್ (Vanangan) ಚಿತ್ರದ ನಿರ್ಮಾಪಕರು ಶೀಘ್ರದಲ್ಲೇ ಚಿತ್ರದಲ್ಲಿ ರೋಶನಿ ಸಿನಿಮಾದಲ್ಲಿ ನಟಿಸುವ ಬಗ್ಗೆ ಅಧಿಕೃತವಾದ ಮಾಹಿತಿಯೊಂದನ್ನು ನೀಡಲಿದ್ದಾರೆ. ಸದ್ಯಕ್ಕೆ ನಟಿ ರೋಶನಿ ಪ್ರಕಾಶ್ ಅವರಿಗೆ ಸಾಲು ಸಾಲು ಅವಕಾಶಗಳು ಬರುತ್ತಲೇ ಇದೆ.
