ಅಪ್ಪ ಅಮ್ಮನ ಜೊತೆಗೆ ಕ್ಯಾಮೆರಾಗೆ ಪೋಸ್ ಕೊಟ್ಟ ನಟಿ ರಶ್ಮಿಕಾ ಮಂದಣ್ಣ, ಇಲ್ಲಿದೆ ನೋಡಿ ವಿಶೇಷ ಫೋಟೋ

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈ ಹೆಸರು ಎಲ್ಲರಿಗೂ ಕೂಡ ಚಿರಪರಿಚಿತ. ಸಿನಿಮಾರಂಗದಲ್ಲಿ ಬಾರಿ ಬೇಡಿಕೆಯಿರುವ ನಟಿಗೆ ದೊಡ್ಡ ಸಂಖ್ಯೆ ಯಲ್ಲಿ ಅಭಿಮಾನಿಗಳು ಇದ್ದಾರೆ. ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‍ವುಡ್ (Sandalwood), ಬಾಲಿವುಡ್ (Bollywood) , ಟಾಲಿವುಡ್‍ (Tallywood)ನಲ್ಲಿ ಬಹು ಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ. ಅದಲ್ಲದೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೂ ಕೂಡ ಇನ್ನಿತ್ತರ ವಿಚಾರಗಳಿಂದ ನಟಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗುವುದೇ ಹೆಚ್ಚು.

ಕಿರಿಕ್ ಪಾರ್ಟಿ (Kirik Party) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ( Rashmika Mandanna) ನವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ರಶ್ಮಿಕಾಗೆ (Rashmika Mandanna) ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 3.8 ಕೋಟಿ ಫಾಲ್ಲೋರ್ಸ್ ಹೊಂದಿದ್ದಾರೆ.

ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ, ಸದಾ ಸುದ್ದಿಯಲ್ಲಿರುವ ನಟಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಆದರೆ ಇದೀಗ ತನ್ನ ಕುಟುಂಬದ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅಪ್ಪ ಅಮ್ಮನ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಮುನ್ನೂರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಷ್ಟೇ ಅಲ್ಲದೇ ಖ್ಯಾತ ನಟಿ ರಶ್ಮಿಕಾ ಮಂದಣ್ಣನವರನ್ನು ಫ್ಯಾಮಿಲಿ ಜೊತೆಗೆ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.

ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇವೆಂಟ್ ಒಂದಕ್ಕೆ ತೆರಳಿದ್ದರು. ಮರಳಿ ಬರುವಾಗ ಅಲ್ಲಿದ್ದ ಅಭಿಮಾನಿಯೊಬ್ಬನು ಸೆಲ್ಫಿ ಕೇಳಿದ್ದಾನೆ. ರಶ್ಮಿಕಾ ಸೆಲ್ಫಿಗೆ ಪೋಸ್ ಕೊಡುವುದಕ್ಕೆ ರೆಡಿ ಆಗಿದ್ದು, ಆದರೆ ಬಾಡಿಗಾರ್ಡ್ ಅಭಿಮಾನಿಯನ್ನು ಪಕ್ಕಕ್ಕೆ ಎಳೆದು ತಳ್ಳಿದ್ದನು. ಬಾಡಿಗಾರ್ಡ್ ವರ್ತನೆಗೆ ರಶ್ಮಿಕಾ ಮಂದಣ್ಣಗೆ ಶಾಕ್ ಆಗಿದ್ದರು. ಅದಲ್ಲದೇ, ಮುಂದಕ್ಕೆ ನಡೆಯುತ್ತಾ ಅವರು ಹಿಂದಕ್ಕೆ ತಿರುಗಿ ನೋಡಿದ ಬಳಿಕ ಆ ಯುವತಿಗೆ ರಶ್ಮಿಕಾ ಸೆಲ್ಫಿ ನೀಡಿದ್ದರು.

ಈ ವಿಡಿಯೋ ವೈರಲ್ ಆಗಿತ್ತು. ಅದಲ್ಲದೇ ಈ ವಿಡಿಯೋ ನೋಡಿದ ನೆಟ್ಟಿಗರು ಆಗುತ್ತಿದ್ದಂತೆ ಫ್ಯಾನ್ಸ್ ಬಾಡಿಗಾರ್ಡ್ ಹೀಗೆ ಮಾಡಬಾರದಿತ್ತು ಎಂದಿದ್ದರು ಫ್ಯಾನ್ಸ್ ಗಳು ರಶ್ಮಿಕಾ ಮಂದಣ್ಣ ವಿರುದ್ಧ ಗರಂ ಆಗಿದ್ದರು. ಸದ್ಯಕ್ಕೆ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ನಟಿ ರಶ್ಮಿಕಾ ಮಂದಣ್ಣ ಕೈಯಲ್ಲಿ ‘ಪುಷ್ಪ 2’ (Pushpa 2), ‘ಅನಿಮಲ್’ (Animal) ಹಾಗೂ ‘ರೇನ್​ಬೋ’ (Rainbo) ಸಿನಿಮಾಗಳಿವೆ. ಅದಲ್ಲದೇ ಈಗಾಗಲೇ ಹೆಸರಿಡದ ನಿತಿನ್ ಸಿನಿಮಾ ಒಪ್ಪಿಕೊಂಡಿದ್ದಾರೆ.

Leave a Reply

Your email address will not be published. Required fields are marked *