ಪತಿಯನ್ನು ಅಪ್ಪಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ ಕಿರುತೆರೆಯ ನಟಿ ರಶ್ಮಿ ಪ್ರಭಾಕರ್, ಇಲ್ಲಿದೆ ಅಪರೂಪದ ಫೋಟೋಗಳು!!

ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ರಶ್ಮಿ ಪ್ರಭಾಕರ್ (Rashmi Prabhakar) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಕನ್ನಡದಲ್ಲಿ ‘ಲಕ್ಷ್ಮೀ ಬಾರಮ್ಮ’ (Lakshmi Baramma) ಸೀರಿಯಲ್ ಮೂಲಕ ರಶ್ಮಿ ಪ್ರಭಾಕರ್ ವೀಕ್ಷಕರ ಮನ ಗೆದ್ದಿದ್ದ ಚೆಲುವೆ ಪರಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡವರು. ರಶ್ಮಿ ಪ್ರಭಾಕರ್ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದು, ಕನ್ನಡ (Kannada) ಮಾತ್ರವಲ್ಲದೇ, ತೆಲುಗು (Telugu), ತಮಿಳು (Tamil)ಭಾಷೆಯ ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ.

ಕಳೆದ ವರ್ಷ ಪ್ರೀತಿಸಿದ ಹುಡುಗನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ರಶ್ಮಿ ಪ್ರಭಾಕರ್ ಅವರು ಪತಿಯ ಜೊತೆಗೆ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಭಾರ್ಗವ್ (Nikhil Bhargav) ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಈ ಹಿಂದೆ ನಿಖಿಲ್ ಹಾಗೂ ರಶ್ಮಿ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿತ್ತು. ಎರಡೂ ಮನೆಯವರೂ ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.

ಇದೀಗ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ದಂಪತಿಗಳ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ರಶ್ಮಿ ಹಾಗೂ ನಿಖಿಲ್ ಇಬ್ಬರೂ ಹಚ್ಚ ಹಸಿರಿನ ಪರಿಸರ ನಡುವೆ ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದ್ದು, ನಾಲ್ಕೂರಕ್ಕೂ ಅಧಿಕ ಲೈಕ್ಸ್ ಬಂದಿವೆ. ನಿಖಿಲ್ ಭಾರ್ಗವ್ ಬೆಂಗಳೂರಿ (Banglore) ನಲ್ಲೇ ನೆಲೆಸಿದ್ದಾರೆ. ಖಾಸಗಿ ಕಂಪನಿ (Private Company) ಯಲ್ಲಿ ಉದ್ಯೋಗ ಮಾಡುತ್ತಿದ್ದು, ಪತ್ನಿ ರಶ್ಮಿ ಪ್ರಭಾಕರ್ ಅವರಿಗೆ ಸದಾ ಬೆಂಬಲ ನೀಡುತ್ತಿರುತ್ತಾರೆ.

ಕಳೆದ ವರ್ಷ ಮದುವೆಯಾಗಿರುವ ರಶ್ಮಿ ಪ್ರಭಾಕರ್‌ ಇದೇ ಏಪ್ರಿಲ್ ತಿಂಗಳಲ್ಲಿ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ನಟಿ ರಶ್ಮಿ ಪ್ರಭಾಕರ್‌ ಅವರು ತಮ್ಮ ಪತಿಯ ಹೆಸರಿನ ಮೊದಲ ಅಕ್ಷರವನ್ನು ಟ್ಯಾಟೂ (Tatto) ಹಾಕಿಸಿಕೊಂಡಿದ್ದರು. N ಅಕ್ಷರವನ್ನು ಟ್ಯಾಟೂ ಹಾಕಿಸಿಕೊಂಡು, ಮದುವೆ ವಾರ್ಷಿಕೋತ್ಸವಕ್ಕೆ ವೀಡಿಯೋ ಶೇರ್‌ ಮಾಡಿ ಪತಿಗೆ ಧನ್ಯವಾದವನ್ನು ತಿಳಿಸಿದ್ದರು.

ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿರುವ ನಟಿ ರಶ್ಮಿ ಪ್ರಭಾಕರ್ ಅವರು, ಶುಭ ವಿವಾಹ (Shubha Vivaha) , ಮಹಾಭಾರತ (Mahabharatha), ದರ್ಪಣ (Darpana), ಜೀವನ ಚೈತ್ರ (Jivana Chaitra), ಮನಸೆಲ್ಲಾ ನೀನೇ (Manassella Neene) , ಲಕ್ಷ್ಮೀ ಬಾರಮ್ಮ ( Lakshmi Baramma) ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ತಮಿಳು ಭಾಷೆಯಲ್ಲಿ ಅರುಂಧತಿ (Arundhati) ಹಾಗೂ ತೆಲುಗಿನ ಪೌರ್ಣಮಿ (Powrnami) ಹಾಗೂ ‘ಕಾವ್ಯಾಂಜಲಿ’ (Kavyaanjali) ಯಲ್ಲಿ ನಟಿಸಿದ್ದಾರೆ. ಮಹಾಕಾವ್ಯ (Mahakavya) ಮತ್ತು ‘ಬಿಬಿ5’ (BB5) ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ರಶ್ಮಿ ಪ್ರಭಾಕರ್‌ ಇತ್ತೀಚೆಗಷ್ಟೇ ‘ಸೂಪರ್‌ ಕ್ವೀನ್‌’ (Super Queen) ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗೆದ್ದುಕೊಂಡಿದ್ದರು. ಆದರೆ ಇದೀಗ ಕನ್ನಡ ಕಿರುತೆರೆ ಲೋಕದಲ್ಲಿ ಬ್ಯುಸಿಯಾಗಿರುವ ನಟಿಯಾಗಿದ್ದಾರೆ

Leave a Reply

Your email address will not be published. Required fields are marked *