ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್

ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ (Ranjani Raghavan) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ನಟಿ ರಂಜನಿ ರಾಘವನ್ ರವರು ಒಬ್ಬ ನಟಿ, ನಿರ್ದೇಶಕಿ ಹಾಗೂ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗುವುದರ ಜೊತೆಗೆ ಆಗಾಗ ವೈಯುಕ್ತಿಕ ಜೀವನದ ಕುರಿತು ಅಪ್ಡೇಟ್ ನೀಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ನಟಿ ರಂಜನಿಗೆ ಇನ್​ಸ್ಟಾಗ್ರಾಂ (Instagram)ನಲ್ಲಿ 1 ಮಿಲಿಯನ್​ ಫಾಲೋವರ್ಸ್​ ಇದ್ದು, ಪುಸ್ತಕ ಓಡುವುದರ ಜೊತೆಗೆ ದೇಶವನ್ನು ಸುತ್ತುವುದೆಂದರೆ ನಟಿಗೆ ಬಹಳ ಇಷ್ಟ. ಇತ್ತೀಚೆಗಷ್ಟೇ ಯುರೋಪ್​​ಗೆ ಇಂಟರ್​ನ್ಯಾಶನಲ್​ ಟ್ರಿಪ್​ ಹೋಗಿ ಬಂದಿರುವ ರಂಜನಿ ರಾಘವನ್ ಇದೀಗ ಟೆಂಪಲ್ ರನ್ ಮಾಡುತ್ತಿದ್ದಾರೆ. ಇದೀಗ ಮಧ್ಯಪ್ರದೇಶ (Madhya Pradesh) ದ ಪ್ರವಾಸದಲ್ಲಿದ್ದು, ದೇಗುಲಕ್ಕೆ ತೆರಳಿದ್ದಾರೆ. ನಟಿ ರಂಜನಿ ರಾಘವನ್​ ಯವರು ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ನಟಿ ಶೇರ್ ಮಾಡಿಕೊಂಡಿರುವ ಈ ಫೋಟೋದಲ್ಲಿ ಹಣೆ ಮೇಲೆ ಮಹಾಕಾಲ ಎಂದು ಬರೆದು, ತ್ರಿಶೂಲದ ಚಿತ್ರವಿರುವ ತಿಲಕ (ತ್ರಿಪುಂಡ್​) ಇರುವುದನ್ನು ಕಾಣಬಹುದು. ಅದಲ್ಲದೇ, ಉಜ್ಜಯಿನಿ ದೇಗುಲದ ಫೋಟೋ ಶೇರ್ ಮಾಡಿಕೊಂಡು, “ಪುರಾಣ ಪ್ರಸಿದ್ಧ ಉಜ್ಜಯಿನಿಯ ಮಹಾಕಾಲೇಶ್ವರ ಜ್ಯೋತಿರ್ಲಿಂಗ ದರ್ಶನ ಮಾಡಿದೆ.

ಶಿಪ್ರಾ ನದಿಯ ಆರತಿಯಲ್ಲಿ ಭಾಗಿಯಾಗಿ ಮನಸ್ಸು ಫುಲ್ ಖುಷ್ ಆಗಿದೆ. ಕಾಳಿದಾಸನ “ಮೇಘದೂತ” ಕಾವ್ಯದಲ್ಲಿ ಬರುವ ಉಜ್ಜಯಿನಿಯ ವರ್ಣನೆಯನ್ನ ಬೇರೆ ಲೈಟ್ ಆಗಿ ಓದ್ಕೊಂಡು ಹೋದಿದ್ದೆ, ಹಾಗಾಗಿ ಇನ್ನೂ ಥ್ರಿಲ್ ಆಗೋಯ್ತು!’ ಎಂದು ಬರೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಟಿ ರಂಜನಿ ರಾಘವನ್ ಶೇರ್ ಮಾಡಿಕೊಂಡಿರುವ ಫೋಟೋಗಳಿಗೆ ಲೈಕ್​ ಗಳು ಬಂದಿವೆ. ಪುಟ್ಟಗೌರಿ (Puttagowri) ಸೀರಿಯಲ್ ಮೂಲಕ ನಟನಾ ಬದುಕಿಗೆ ಎಂಟ್ರಿ ಕೊಟ್ಟ ಇವರು ಇದೀಗ ಕನ್ನಡತಿ (Kannadati) ಧಾರಾವಾಹಿ ಮೂಲಕ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯಕ್ಕೆ ಸಿನಿಮಾ, ವೆಬ್ ಸಿರೀಸ್ ಹಾಗೂ ಚಿತ್ರಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದು, ನಟಿಗೆ ಸಾಲು ಸಾಲು ಅವಕಾಶಗಳು ಬರುತ್ತಿದೆ.

Leave a Reply

Your email address will not be published. Required fields are marked *