ವರಮಹಾಲಕ್ಷ್ಮಿ ಹಬ್ಬದಂದು ಟ್ರಡಿಷನಲ್ ಉಡುಗೆಯಲ್ಲಿ ಮಿಂಚಿದ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್

ಕನ್ನಡತಿ ಧಾರಾವಾಹಿಯಿಂದ ಮನೆ ಮಾತಾಗಿರುವ ರಂಜನಿ ರಾಘವನ್ (Ranjani Raghavan) ಎಲ್ಲರಿಗೂ ಕೂಡ ಚಿರಪರಿಚಿತರಾಗಿದ್ದಾರೆ. ನಟಿ ರಂಜನಿ ರಾಘವನ್ ರವರು ಒಬ್ಬ ನಟಿ ಮಾತ್ರವಲ್ಲದೇ ನಿರ್ದೇಶಕಿ ಹಾಗೂ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ಅಭಿಮಾನಿಗಳ ಜೊತೆಗೆ ಹೆಚ್ಚು ಆತ್ಮೀಯವಾಗಿರಲು ಸೋಶಿಯಲ್ ಮೀಡಿಯಾವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ.

ನಟಿ ರಂಜನಿ ರಾಘವನ್ ಅವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಆಕ್ಟಿವ್ ಆಗಿದ್ದು, ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ಬಿಡುವು ಮಾಡಿಕೊಂಡು ಟ್ರಿಪ್ ಎಂದು ಸುತ್ತಾಡುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಈ ಬಾರಿಯ ವರಮಹಾಲಕ್ಷ್ಮಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿರುವ ನಟಿ ರಂಜನಿ ರಾಘವನ್ ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಸಾಂಪ್ರದಾಯಿಕ ಉಡುಗೆಯ ಫೋಟೋಗಳನ್ನು ಹಂಚಿಕೊಂಡ ನಟಿ ರಂಜನಿ ರಾಘವನ್ ಅವರು, ಆದಿ ಲಕ್ಷ್ಮೀ, ಧನ-ಧಾನ್ಯ ಲಕ್ಷ್ಮೀ, ಸಂತಾನ ಲಕ್ಷ್ಮೀ, ಸೌಭಾಗ್ಯ ಲಕ್ಷ್ಮೀ, ವೀರ ಲಕ್ಷ್ಮೀ, ವಿಜಯ ಲಕ್ಷ್ಮೀ, ಶ್ರೀವರ ಲಕ್ಷ್ಮೀ ನಿಮ್ಮನ್ನೆಲ್ಲಾ ಕೈಹಿಡಿದು ಕಾಪಾಡಲಿ” ಎಂದು ಬರೆದುಕೊಂಡಿದ್ದರು.

ಅಷ್ಟೇ ಅಲ್ಲದೇ ‘ಲಂಗ ಬ್ಲೌಸ್, ಸರ-ಬಳೆ ತೊಟ್ಟು ಹೂವು ಮುಡಿದು ರೆಡಿ ಆಗೋಕೇ ಟೈಮ್ ಆಗೋಯ್ತು. ಕ್ಯಾಪ್ಷನ್ ಕೂಡಾ ಹುಡುಕಬೇಕೇ?’ ಎಂದು ಬರೆದುಕೊಂಡಿದ್ದರು. ನಟಿಯ ಈ ಫೋಟೋ ನೋಡಿದ ನೆಟ್ಟಿಗರು ಕಾಮೆಂಟ್ ಮಾಡಿದ್ದರು. ‘ನಿಮ್ಮ ಅಂದ ಮತ್ತಷ್ಟು ಹೆಚ್ಚಿದೆ’ ಎಂದರೆ, ಇನ್ನೂ ಕೆಲವರು, ‘ಕ್ಯಾಪ್ಶನ್ ಬೇಡ. ನಿಮ್ಮ ನಗು ಸಾಕು’ ಎಂದಿದ್ದರು.

ನಟಿ ರಂಜನಿ ರಾಘವನ್ ಅವರ ನಟನಾ ಬದುಕಿನ ಹಿನ್ನಲೆಯನ್ನು ಗಮನಿಸಿದಾಗ ಆಕಾಶದೀಪ (Akasha Deepa) ಧಾರಾವಾಹಿ ನಟಿಸಿದ್ದರು. ಕೆಳದಿ ಚೆನ್ನಮ್ಮ (Keladi Chennamma) ದಲ್ಲಿ ನಾಗವೇಣಿ ಪಾತ್ರವನ್ನು ಮಾಡಿದರು. ಆದಾದ ಬಳಿಕ ಪುಟ್ಟಗೌರಿ ಮದುವೆ (Putta Gowri Maduve) ಧಾರಾವಾಹಿಯು ನಟಿಯ ನಟನಾ ಬದುಕಿಗೆ ಬ್ರೇಕ್ ನೀಡಿತ್ತು.

ಕನ್ನಡ ಮಾತ್ರವಲ್ಲದೇ, ಪೌರ್ಣಮಿ ತಿಂಕಲ್ ಎಂಬ ಮಲಯಾಳಂ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇಷ್ಟದೇವತೆ ಧಾರಾವಾಹಿಯ ನಿರ್ಮಾಣ ಜವಾಬ್ದಾರಿಯನ್ನು ವಹಿಸಿಕೊಂಡರು. ಇನ್ನು, ಟ್ರೇನ್ ಟು ಪಾಕಿಸ್ತಾನ್, ಕರ್ವಾಲೋ, ರಾಮಧಾನ್ಯ, ಯಹೂದಿ ಹುಡುಗಿ ಮುಂತಾದ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿ ರಂಜನಿ ರಾಘವನ್ ನಟಿಸಿರುವ ಕನ್ನಡತಿ ಧಾರಾವಾಹಿಯು ಇವರಿಗೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದುಕೊಟ್ಟಿದೆ. ಸದ್ಯಕ್ಕೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *