ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ ಮೋಹಕ ತಾರೆ ರಮ್ಯಾ, ನಟಿಯ ಪೋಸ್ಟ್ ವೈರಲ್

ಸ್ಯಾಂಡಲ್ ವುಡ್ ನಟಿ ಮೋಹಕ ತಾರೆ ರಮ್ಯಾ (Ramya) ಬೇಡಿಕೆಯನ್ನು ಹೊಂದಿರುವ ನಟಿಯಾಗಿದ್ದು, ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಿನಿಮಾ ಹಾಗೂ ರಾಜಕೀಯ ಎಂದು ದೂರವಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು. ಇದೀಗ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ಪ್ರಕೃತಿ ಚಿಕಿತ್ಸೆಗಾಗಿ ಲಂಡನ್ (Landan) ಗೆ ತೆರಳಿದ್ದಾರೆ. ಸಾಕಷ್ಟು ವರ್ಷಗಳ ಬಳಿಕ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುತ್ತಿರುವ ಕಾರಣದಿಂದಾಗಿ ಮತ್ತಷ್ಟು ಫಿಟ್ ಎಂಡ್ ಫೈನ್ ಆಗುವ ಸಲುವಾಗಿ ಚಿಕಿತ್ಸೆಗಾಗಿ ವಿದೇಶಕ್ಕೆ ಹಾರಿದ್ದಾರೆ. ಈ ನಡುವೆ ವಿಶೇಷ ಪೋಸ್ಟ್ ಮೂಲಕ ಸುದ್ದಿಯಾಗಿದ್ದಾರೆ.

ಸಿನಿಮಾ-ರಾಜಕೀಯ ಎರಡು ಕ್ಷೇತ್ರದಲ್ಲೂ ರಮ್ಯಾ ಗುರುತಿಸಿಕೊಂಡಿರುವ ರಾಜಕೀಯ ರಂಗದಲ್ಲಿ ಅಷ್ಟೇನು ಯಶಸ್ಸು ಗಳಿಸಿಲ್ಲ. ಆದರೂ ರಾಜಕೀಯ ವ್ಯಕ್ತಿಗಳ ಜೊತೆಗೆ ಅಷ್ಟೇ ಒಡನಾಟವನ್ನು ಹೊಂದಿದ್ದು ಒಂದೆರಡು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಹುಟ್ಟುಹಬ್ಬಕ್ಕೆ ರಮ್ಯಾ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

ನಟಿ ರಮ್ಯಾರವರ ಈ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನನ್ನ ಮುಖದಲ್ಲಿ ಮತ್ತೆ ನಗು ಮೂಡಿಸಿದ ವ್ಯಕ್ತಿ. ಕರುಣೆಯ ಕಣ್ಣುಗಳಿಂದ ಜಗತ್ತನ್ನು ನೋಡಲು ಕಲಿಸಿದವರು ಎಂದು ರಾಹುಲ್ ಗಾಂಧಿ ಅವರ 53ನೇ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯಗಳನ್ನು ಕೋರಿದ್ದಾರೆ.

ನಟಿ ರಮ್ಯಾರವರಿಗೆ ವಯಸ್ಸು ಏರಿದರೂ ಕೂಡ ಮದುವೆಯಾಗಿಲ್ಲ. ಈ ಹಿಂದೆಯಷ್ಟೇ ಮಂಡ್ಯ ಚುನಾವಣಾ ಪ್ರಚಾರ ( Mandya Election Campaign) ದ ವೇಳೆಯಲ್ಲಿ ಮದುವೆಯ ಬಗ್ಗೆ ಪ್ರಶ್ನೆಯೊಂದು ಎದುರಾಗಿತ್ತು. ಮದುವೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದ ನಟಿ ರಮ್ಯಾ, ” ನನಗೆ ಮೊದಲು ಹುಡುಗನನ್ನು ಹುಡುಕಿ. ಗೌಡರ ಹುಡುಗ ಸಿಕ್ತಾರೆ ಅಂದ್ರೆ ನೋಡಿ. ನನಗೆ ಒಬ್ಬರೂ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. ನನಗೂ ಹುಡುಗನನ್ನು ನೋಡಿ ನೋಡಿ ಸಾಕಾಗಿದೆ. ಬೇಕಿದ್ದರೆ ನೀವೇ ಸ್ವಯಂವರ ಏರ್ಪಾಟು ಮಾಡಿ, ಮದುವೆ ಆಗುತ್ತೇನೆ.

ನಾನು ಯಾವಾಗಲೂ ಮಂಡ್ಯದವಳು. ನಾನು ಗೌಡತಿ ಎಂಬುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ. ನಮ್ಮ ತಾಯಿ ಊರು ಮಂಡ್ಯ, ನಮ್ಮ ತಂದೆ ಸತ್ತಿದ್ದು ಇಲ್ಲೇ, ನನ್ನ ಅಭ್ಯರ್ಥಿ ಮಾಡಿದ್ದು ಇಲ್ಲೇ, ಮಂಡ್ಯ ಜಿಲ್ಲೆಯ ಜನರು ನನಗೆ ಬೆಂಬಲ‌ ನೀಡಿದ್ದಾರೆ. ಈ ಅಭಿಮಾನವನ್ನು ನಾನು ಯಾವತ್ತೂ ಮರೆಯಲ್ಲ, ಇದು ಕಮ್ಮಿಯೂ ಆಗಲ್ಲ. ಮಂಡ್ಯ ಸಂಬಂಧ ಕೇವಲ‌ ರಾಜಕೀಯವಾಗಿ ಅಲ್ಲ, ನನಗೆ ಮಂಡ್ಯ ಕುಟುಂಬದ ರೀತಿ ಎಂದ ರಮ್ಯಾ, ನಾನು ಮಂಡ್ಯಕ್ಕೆ ಬಂದುಹೋಗುತ್ತಾ ಇರುತ್ತೇನೆ” ಎಂದಿದ್ದರು.

ನಟಿ ರಮ್ಯಾರವರು ರಾಜ್ ಬಿ ಶೆಟ್ಟಿ (Raj B Shetty) ಯವರ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ. ಅದರ ಜೊತೆಗೆ, ಡಾಲಿ ಧನಂಜಯ್ ಜೊತೆ ರಮ್ಯಾ ಉತ್ತರಕಾಂಡ (Uttara Kaanda) ಸಿನಿಮಾದಲ್ಲಿ ನಟಿಸುತ್ತಿದ್ದು, ಸದ್ಯಕ್ಕೆ ವೃತ್ತಿ ಜೀವನದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಲಾಂಗ್ ಗ್ಯಾಪ್ ನಂತರದಲ್ಲಿ ರಮ್ಯಾರವರ ಈ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Leave a Reply

Your email address will not be published. Required fields are marked *