ಮೋಹಕ ತಾರೆ ರಮ್ಯಾ (Mohaka Tare Ramya) ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದು, ಬೇಡಿಕೆಯನ್ನು ಹೊಂದಿದ್ದಾರೆ. ಸಿನಿರಂಗ ಬಿಟ್ಟು ರಾಜಕೀಯಕ್ಕೆ ಹೋಗಿದ್ದ ರಮ್ಯಾ ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಆಪಲ್ ಬಾಕ್ಸ್ (Apple Box) ಎನ್ನುವ ಸಂಸ್ಥೆಯಡಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಾಣವಾಗುತ್ತಿದೆ.
ಅದರಲ್ಲಿ ಕೆಲ ಸಮಯದಿಂದ ರಮ್ಯಾ ಮತ್ತೆ ಸೋಶಿಯಲ್ ಮೀಡಿಯಾ (Social Media) ದಲ್ಲಿ ಆಕ್ಟೀವ್ ಆಗಿದ್ದು, ಆಗಾಗ್ಗೆ ತಮ್ಮ ಹೊಸ ಹೊಸ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅದಲ್ಲದೇ ಸದ್ಯಕ್ಕೆ ರಮ್ಯಾ ಸದ್ಯ ವಿದೇಶದಲ್ಲಿದ್ದು, ತೂಕ ಇಳಿಸುವ ಚಿಕಿತ್ಸೆಯ ಕಾರಣಕ್ಕೆ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಆಗಾಗ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಅದಲ್ಲದೇ. ಶಾಟ್ ಡ್ರೆಸ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಇದೀಗ ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ಕಪ್ಪು ಬಣ್ಣ (Black Colour) ದ ತುಂಡುಗೆಯಲ್ಲಿ ನಟಿ ಮೋಹಕ ತಾರೆ ರಮ್ಯಾ ಕಾಣಿಸಿಕೊಂಡಿದ್ದಾರೆ. ಹಾಟ್ ಉಡುಗೆಯಲ್ಲಿ ಕಾಣಿಸಿಕೊಂಡಿರುವ ನಟಿ ಮೋಹಕ ತಾರೆ ರಮ್ಯಾ ಸೂರ್ಯನ ಕಿರಣವು ಕಣ್ಣಿಗೆ ಬೀಳದಂತೆ ಮುಖದ ಮೇಲೆ ಕೈ ಹಿಡಿದಿದ್ದಾರೆ. ಅದಲ್ಲದೇ ಈ ಫೋಟೋದಲ್ಲಿ ವಿದೇಶಿ ಮಹಿಳೆಯ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ನಟಿ ರಮ್ಯಾ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ನಟಿ ಬ್ಲಾಕ್ ಕಲರ್ ಉಡುಗೆಯಲ್ಲಿ ಮಿಂಚಿದ್ದು, ಈ ವಿಡಿಯೋದ ಜೊತೆಗೆ, ‘Endorphins’ (ಎಂಡೋರ್ಫಿನ್ಸ್) ಎಂದು ಕ್ಯಾಪ್ಶನ್ ಬರೆದುಕೊಂಡಿದ್ದರು. ಜಿಮ್ ಮುಗಿಸಿ ಮಾಡಿದ ಈ ವಿಡಿಯೋ ಇದಾಗಿತ್ತು. ಹೀಗಾಗಿ, ಇದರಲ್ಲಿ ನಟಿ ರಮ್ಯಾ ವಾಷ್ರೂಂನ ಕನ್ನಡಿ ಎದುರು ಡಾನ್ಸ್ ಮಾಡಿದ್ದರು. ನಟಿ ರಮ್ಯಾ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದು, ‘ನೀವು ಯಾವಾಗಲೂ ಸುಂದರಿ’ ಎಂದು ಕೆಲವರು ಕಮೆಂಟ್ ಮಾಡಿದರೆ, ಕೆಲವರು, ‘ಸಖತ್ ಗ್ಲಾಮರಸ್ ನೀವು’ ಎಂದು ನೆಟ್ಟಿಗನೊಬ್ಬನು ಹೇಳಿದ್ದನು.

ಇತ್ತೀಚೆಗಷ್ಟೇ ನಟಿ ರಮ್ಯಾರವರ ನಟನೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಸಿನಿಮಾವು ತೆರೆಗೆ ಬಂದಿದ್ದು ಒಳ್ಳೆಯ ರೆಸ್ಪಾನ್ಸ್ ಸಿಕ್ಕಿವೆ. ಇನ್ನೊಂದೆಡೆ ತಮ್ಮ ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯಿಂದ ಸ್ವಾತಿ ಮುತ್ತಿನ ಮಳೆ ಹನಿಯೇ (Swathi Muttina Male Haniye) ಸಿನಿಮಾಕ್ಕೆ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಡಾಲಿ ಧನಂಜಯ್ ಅವರ ನಟನೆಯ ಉತ್ತರ ಕಾಂಡ (Uttara Khanda) ಸಿನಿಮಾದಲ್ಲಿಯು ನಟಿ ಮೋಹಕ ತಾರೆ ರಮ್ಯಾರವರು ನಟಿಸುತ್ತಿದ್ದು, ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.