ಕತ್ತಲಲ್ಲಿ ನನ್ನ ಮೈ ಮುಟ್ಟಿದರು!! ರಜನಿಕಾಂತ್ ಅವರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರಂಭಾ, ಅಷ್ಟಕ್ಕೂ ನಟಿ ಹೇಳಿದ್ದೇನು ಗೊತ್ತಾ?

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರಲ್ಲಿ ನಟಿ ರಂಭಾ (Rambha) ಕೂಡ ಒಬ್ಬರಾಗಿದ್ದಾರೆ..ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿರುವ ಚೆಲುವೆಯು ಇವತ್ತಿಗೂ ಕೂಡ ನೋಡಲು ಹಾಗೆಯೇ ಇದ್ದಾರೆ. ತಮ್ಮ ಗ್ಲಾಮರಸ್ ಅನ್ನು ಉಳಿಸಿಕೊಂಡು ಬಂದಿರುವ ನಟಿ ರಂಭಾರವರು ಇದೀಗ ಮತ್ತೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ.

ತೆಲುಗು (Telug), ತಮಿಳು (Tamil), ಕನ್ನಡ (Kannada), ಹಿಂದಿ (Hindi), ಮಲಯಾಳಂ (Malayalam), ಬೋಜ್ ಪುರಿ (Bojapuri), ಬೆಂಗಾಲಿ (Bengali) ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ರಂಭಾರವರು ಇದೀಗ ಸೂಪರ್ ಸ್ಟಾರ್ ರಜನಿಕಾಂತ್ (Super star Rajanikanth) ಅವರ ಬಗ್ಗೆ ಹೇಳಿದ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ನಟ ರಜನಿಕಾಂತ್ ಹಾಗೂ ನಟಿ ರಂಭಾ ಅವರು 90ರ ಸಿನಿಮಾ ಅರುಣಾಚಲಂ ಶೂಟಿಂಗ್ ಮಾಡುತ್ತಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ತನಗಾದ ಅನುಭವವನ್ನು ಬಿಚ್ಚಿಡುತ್ತಾ ನಟ ರಜನಿಕಾಂತ್ ಅವರ ಬಗ್ಗೆ ಕೆಲ ಹೇಳಿಕೆಗಳನ್ನು ನೀಡಿದ್ದು, ಹೀಗೂ ಆಗಿತ್ತಾ ಎನ್ನುವ ಪ್ರಶ್ನೆಯೊಂದು ಫ್ಯಾನ್ಸ್ ಗಳಲ್ಲಿ ಮೂಡಿದೆ.

ಸೂಪರ್ ಸ್ಟಾರ್ ರಜನಿಕಾಂತ್ ರವರ ಅರುಣಾಚಲಂ (Arunachalam) ಸಿನಿಮಾದಲ್ಲಿ ರಜನಿಕಾಂತ್ ರವರ ಆಪ್ತ ಸಹಾಯಕಿಯಾಗಿ ರಂಭಾ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿಸುತ್ತಿದ್ದ ವೇಳೆಯಲ್ಲಿ ರಂಭಾರವರು ಹಿಂದಿಯಲ್ಲಿ ಸಲ್ಮಾನ್ ಖಾನ್ (Salman Khan) ರವರ ಜೊತೆಗೆ ಬಂಧನ್ (Bandhan) ಎಂಬ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದರು.

ಹೀಗಾಗಿ ವಾಹಿನಿಯ ಸಂದರ್ಶನವೊಂದರಲ್ಲಿ ಅರುಣಾಚಲಂ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ರಂಭಾ, “ಈ ಎರಡೂ ಸಿನಿಮಾಗಳ ಶೂಟಿಂಗ್ ಹೈದರಾಬಾದ್ (Hyderbad) ನಲ್ಲಿ ನಡೆಯುತ್ತಿತ್ತು. ಬೆಳಗಿನ ಜಾವ ಅರುಣಾಚಲಂ ಶೂಟಿಂಗ್ ಬಳಿಕ ಮದ್ಯಾಹ್ನ ಬಂಧನ್ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದೆ.

ಒಮ್ಮೆ ಸಲ್ಮಾನ್ ಖಾನ್ ಅರುಣಾಚಲಂ ಶೂಟಿಂಗ್ ಸೆಟ್ ಗೆ ಬಂದಿದ್ದರು. ಕೂಡಲೇ ನಾನು ಓಡಿಹೋಗಿ ಸಲ್ಮಾನ್ ರವರನ್ನು ಹಗ್ ಮಾಡಿಕೊಂಡೆ. ಅದನ್ನ ರಜನಿ ಸಾರ್ ದೂರದಿಂದ ನೋಡ್ತಾ ಇದ್ದರು. ಬಳಿಕ ಆತ ಟವಲ್ ಅನ್ನು ಎಸೆದು ಸೀರಿಯಸ್ ಆಗಿ ನಿರ್ದೇಶಕರ ಬಳಿ ಮಾತನಾಡಿದ್ದರು. ನಾನು ಏನು ನಡೆಯಿತು ಎಂದು ಕೇಳಿದರೇ ನಡೆದ ವಿಷಯವನ್ನು ನನಗೆ ತಿಳಿಸಿದ್ದರು.

ಯಾಕಮ್ಮ ನೀನು ಆ ರೀತಿ ಮಾಡಿದ್ದೀಯಾ, ಇನ್ನು ನಿಮ್ಮೊಂದಿಗೆ ನಟಿಸೊಲ್ಲ ಎಂದು ರಜನಿ ಸಾರ್ ಹೇಳ್ತಾ ಇದ್ದಾರೆ ಎಂದು ಕ್ಯಾಮೆರಾಮ್ಯಾನ್ ಹೇಳಿದರು. ಇದರಿಂದ ನಾನು ತುಂಬಾನೆ ಅತ್ತುಬಿಟ್ಟೆ. ಬಳಿಕ ರಜನಿ ಸಾರ್‍ ಬಂದು ನಾನು ಯಾವ ರೀತಿ ಓಡುತ್ತಾ ಸಲ್ಮಾನ್ ಖಾನ್ ರನ್ನು ಹಗ್ ಮಾಡಿಕೊಂಡೆ ಎಂಬುದನ್ನು ಇಮಿಟೇಟ್ ಮಾಡಿ ತೋರಿಸಿದರುದರು.

ಬಳಿಕ ನಮ್ಮ ಸಿನಿಮಾ ಸೆಟ್ ನಲ್ಲಾದರೇ ಗುಡ್ ಮಾರ್ನಿಂಗ್ ಹೇಳಿ ಹೋಗುತ್ತಾಳೆ. ಆದರೆ ಹಿಂದಿ ಹೀರೋ ಬಂದರೇ ಹಗ್ ಮಾಡಿಕೊಳ್ಳುತ್ತಾಳೆ ಎಂದು ಹೇಳಿದರು. ಹೀಗೆ ರಜನೀಕಾಂತ್ ಹಾಗೂ ಟೀಮ್ ಪ್ರಾಂಕ್ ಮಾಡಿದ್ದರು ಎಂದಿದ್ದಾರೆ. ಸೆಟ್ ನಲ್ಲಿ ನಡೆದ ಫನ್ನಿ ಮೂವ್ಮೆಂಟ್ ಬಗ್ಗೆ ಹೇಳಿರುವ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

Leave a Reply

Your email address will not be published. Required fields are marked *