ಸ್ನೇಹಿತರ ಜೊತೆಗೆ ಗೋವಾ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ಟಾಲಿವುಡ್ ನಟಿ ರಾಕುಲ್ ಪ್ರೀತ್, ಫೋಟೋ ವೈರಲ್

ಸೆಲೆಬ್ರಿಟಿಗಳು ಸಿನಿಮಾದ ಜೊತೆ ಜೊತೆಗೆ ಟ್ರಿಪ್ ಎಂದು ಸುದ್ದಿಯಲ್ಲಿರುತ್ತಾರೆ. ಈ ವೇಳೆಯಲ್ಲಿ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ನೆಟ್ಟಿಗರ ನಿದ್ದೆ ಕದಿಯುವುದಿದೆ. ಈ ವಿಚಾರದಲ್ಲಿ ತೆಲುಗು ನಟಿ ನಟಿ ರಾಕುಲ್ ಪ್ರೀತ್ (Rakul Preeth) ಕೂಡ ಹೊರತಾಗಿಲ್ಲ. ತೆಲುಗು ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ರಾಕುಲ್ ಪ್ರೀತ್ ಕಾಲೇಜಿನಲ್ಲಿ ಓದುತ್ತಿದ್ದಾಗ ರಾಕುಲ್‌ ಮಾಡೆಲಿಂಗ್‌ (Modeling) ನತ್ತ ಮುಖ ಮಾಡಿದರು.

ಆದರೆ ಇದೀಗ ಕೈ ತುಂಬಾ ಅವಕಾಶಗಳನ್ನು ಪಡೆದುಕೊಂಡು ಬ್ಯುಸಿಯಾಗಿದ್ದಾರೆ. ಹೌದು, 2009ರಲ್ಲಿ ಕನ್ನಡ ಚಿತ್ರ ಗಿಲ್ಲಿ (Gilli) ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಾಕುಲ್ ಪ್ರೀತ್ ತೆಲುಗು (Telugu), ಹಿಂದಿ (Hindi), ತಮಿಳು (Tamil), ಕನ್ನಡ (Kannada) ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ವೃತ್ತಿ ಜೀವನದ ಬ್ಯುಸಿಯ ನಡುವೆ ಬಿಡುವು ಮಾಡಿಕೊಂಡು, ನಟಿ ರಾಕುಲ್ ಪ್ರೀತ್ ಸಿಂಗ್ ಟ್ರಿಪ್ ಹೋಗುವುದು ಹೊಸದೇನಲ್ಲ ಬಿಡಿ.

ಇದೀಗ ನಟಿ ರಾಕುಲ್ ಅವರು ಈಗ ಗೆಳತಿ ಮದುವೆಗಾಗಿ ಗೋವಾ (Goa) ಗೆ ತೆರಳಿದ್ದು, ಅಲ್ಲಿ ಬೀಚ್‌ (Beach) ನಲ್ಲಿ ತನ್ನ ಸ್ನೇಹಿತರ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ. ಹೌದು, ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ನಟಿ ರಾಕುಲ್ ಪ್ರೀತ್ ಅವರು ಧರಿಸಿರುವ ಸ್ಕಾರ್ಫ್‌ ಉಡುಗೆಯು ಎಲ್ಲರ ಗಮನ ಸೆಳೆಯುತ್ತಿದೆ.

ನಟಿ ರಾಕುಲ್ ಅವರು ಧರಿಸಿರುವ ಉಡುಗೆ ಹೇಗಿದೆಯೆಂದರೆ ಸೈಡ್ ಒಪನ್ ಆಗಿರುವ ಹೂಗಳ ಡಿಸೈನ್ ಇರುವ ಈ ಗೌನ್ ಸ್ಟೈಲಿಶ್ ಆಗಿದೆ. ಹೀಗಾಗಿ ನಟಿಯು ಹಾಟ್ ಅಗಿಯೇ ಕಾಣಿಸಿಕೊಂಡಿದ್ದಾರೆ. ಸ್ಟೈಲಿಶ್ ಉಡುಗೆಯ ಜೊತೆಗೆ ಕೂಲಿಂಗ್ ಗ್ಲಾಸ್ ಕೈಗೆ ಗೋಲ್ಡ್ ಕಲರ್ ಬ್ಯಾಂಡ್ ಕತ್ತಿಗೆ ಗೋವಾ ಸ್ಟೈಲ್ ನೆಕ್ಲೇಸ್ ಧರಿಸಿದ್ದಾರೆ. ರಾಕುಲ್ ಪ್ರೀತ್ ಅವರ ಜೊತೆಗೆ ನಟಿಯರಾದ ಪ್ರಜ್ಞಾ ಜೈಸ್ವಾಲ್, ನೇಹಾ ಶೆಟ್ಟಿ ಹಾಗೂ ಲಕ್ಷ್ಮಿ ಮಂಚು ಇರುವುದನ್ನು ಕಾಣಬಹುದು.

ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು ಅದರ ಜೊತೆಗೆ, “ಜೀವನ ಒಂದು ತಂಗಾಳಿಯಂತೆ ಅದನ್ನು ತೆರೆದ ತೋಳುಗಳಿಂದ ಬರಮಾಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ನಟಿ ರಾಕುಲ್ ಅವರು ಸ್ನೇಹಿತರ ಜೊತೆಗೆ ಎಂಜಾಯ್ ಮಾಡುತ್ತಿರುವ ಫೋಟೋಗೆ ನೆಟ್ಟಿಗರಿಂದ ಮೆಚ್ಚುಗೆಗಳು ವ್ಯಕ್ತವಾಗಿವೆ.

Leave a Reply

Your email address will not be published. Required fields are marked *