ಕಿರುತೆರೆಯಲ್ಲಿ ಬ್ಯುಸಿಯಿದ್ದರೂ ಸಿನಿಮಾ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎನ್ನುವ ಅಸಲಿ ಕಾರಣ ರಿವೀಲ್ ಮಾಡಿದ ಅಮೃತಾ ವರ್ಷಿಣಿ ಸೀರಿಯಲ್ ನಟಿ ರಜನಿ!!

ಕನ್ನಡ ಕಿರುತೆರೆ ಲೋಕದಲ್ಲಿ ಅಮೃತಾ ವರ್ಷಿಣಿ (Amruta Varshini) ಧಾರಾವಾಹಿ ಮೂಲಕ ಖ್ಯಾತಿ ಗಳಿಸಿಕೊಂಡವರು ನಟಿ ರಜನಿ (Rajani). ನಟಿ ರಜನಿಯವರು ಅಮೃತಾ ವರ್ಷಿಣಿ ಧಾರಾವಾಹಿ ಮುಗಿದ ನಂತರ ಕಿರುತೆರೆ ಲೋಕದಿಂದ ಕೊಂಚ ಕಾಲ ಅಂತರ ಕಾಯ್ದು ಕೊಂಡರು. ಆದರೆ ಇದೀಗ ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟು ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ನಟಿ ರಜನಿಯವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಹೌದು ಆಗಾಗ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಆದರೆ ಇದೀಗ ಸಂದರ್ಶನವೊಂದರಲ್ಲಿ ಕೆಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ಸದ್ಯಕ್ಕೆ ನಟಿ ರಜನಿಯವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ (Hitlar Kalyana) ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಶುಭಾ ಪೂಂಜಾ (Shubha Punja) ಜೊತೆ ಅಂಬುಜಾ (Ambuja) ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ಅಂಬುಜಾ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗಷ್ಟೇ ಯೂ ಟ್ಯೂಬ್ ಚಾನೆಲ್ (Youtube Chanel) ನ ಸಂದರ್ಶನವೊಂದರಲ್ಲಿ ನಟಿ ರಜನಿಯವರು ಕಿರುತೆರೆಯಲ್ಲಿ ಬ್ಯುಸಿಯಿದ್ದರೂ ಸಿನಿಮಾ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ಖಾಸಗಿ ಕನ್ನಡ ಯುಟ್ಯೂಬ್ ಚಾನೆಲ್‌ (Private Kannada Youtube Chanel) ನಲ್ಲಿ ಮಾತನಾಡಿರುವ ನಟಿ ರಜನಿ, ‘ಸೀರಿಯಲ್‌ನಲ್ಲಿ ನಾನು ಅಳುತ್ತಿದ್ದೆ ಎಂದು ನಿಜ ಜೀನದಲ್ಲೂ ನಾನು ಹಾಗೆ ಇರುವುದು ಎಂದು ಜನರು ಅಂದುಕೊಂಡಿದ್ದರು. ಅಳುತ್ತಲೇ ಇರುತ್ತಾಳೆ ಮೂರು ಹೊತ್ತು ಮಾಡೋಕೆ ಕೆಲಸನೇ ಇಲ್ಲ ಅನ್ನೋ ತರ ಜನರಿಗೆ ರೀಚ್ ಆಗಿತ್ತು. ಸೀರಿಲ್‌ಗಳಿಂದ ಬ್ರೇಕ್ ತೆಗೆದುಕೊಂಡು ಮಜಾ ಟಾಕೀಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದಾಗ ಜನರಿಗೆ ನನ್ನ ರಿಯಲ್ ವ್ಯಕ್ತಿತ್ವ ತಿಳಿಯಿತ್ತು ಅದರಿಂದ ನನ್ನ ಹೊಸ ಸಿನಿಮಾ ಅಂಬುಜಾದಲ್ಲಿ ಆ ಭಾವನೆಗಳು ಕ್ಯಾರಿ ಆಗಿದೆ’ ಎಂದಿದ್ದಾರೆ.

ನನ್ನ ತಲೆಯಲ್ಲಿ ಸಿನಿಮಾ ಅನ್ನೋದು ಇರಲಿಲ್ಲ ಸೀರಿಯಲ್‌ನಲ್ಲಿ ಕಂಫರ್ಟ್ ಇತ್ತು ಆರಾಮ್‌ ಆಗಿ ತಿಂಗಳಲ್ಲಿ 20 ದಿನ ಶೂಟಿಂಗ್‌ ಇರುತ್ತೆ ಆಮೇಲೆ ನಾಲ್ಕೈದು ವರ್ಷ ನಡೆಯುತ್ತೆ ಹೀಗಾಗಿ ತಲೆ ಬಿಸಿ ಇಲ್ಲ . ಹೊಸ ಸಿನಿಮಾ ಬಂದಾಗ ಆ ತಂಡದ ಜೊತೆ ತುಂಬಾ ಕೆಲಸ ಇರುತ್ತೆ. ಅಮೃತಾವರ್ಷಿಣಿ ಧಾರಾವಾಹಿ ಸಮಯದಲಗಲಿ ತುಂಬಾ ಒಳ್ಳೆ ಸಿನಿಮಾಗಳ ಆಫರ್‌ ಬಂದಿತ್ತು ಆದರೆ ಆ ಸಮಯಲ್ಲಿ ನಟಿಸಲು ಆಗಲಿಲ್ಲ. ಹಿಟ್ಲರ್ ಕಲ್ಯಾಣ ಧಾರಾವಾಹಿಯಿಂದ ಹೊರ ಬಂದು ಏನಾದರೂ ಪ್ರಯತ್ನ ಮಾಡೋಣ ಅಂತ ಯೋಚನೆ ಮಾಡಿದಾಗ ಅಂಬುಜಾ ಸಿನಿಮಾ ಆಫರ್ ಬಂತು’ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.

‘ಈಗ ಸೀರಿಯಲ್ ಮಾಡಿದರೆ ಒಂದು ಸಿನಿಮಾ ಮಾಡಿದ ಲೆಕ್ಕದ ಹಾಗೆ. ಸಿನಿಮಾನಾ ಸೀರಿಯಲಾ ಅಂತ ವ್ಯತ್ಯಾಸ ಹೇಳುವುದಕ್ಕೆ ಆಗಲ್ಲ ಸೆಟ್‌ ಅಷ್ಟು ಅದ್ಭುತವಾಗಿರುತ್ತದೆ ಹಾಗೆ ಸಿನಿಮಾ ರೀತಿ ಸೀರಿಯಲ್‌ನಲ್ಲಿ 70-80ಲಕ್ಷ ಹಣ ಖರ್ಚು ಮಾಡಿರುತ್ತಾರೆ. ಸಿನಿಮಾದಲ್ಲಿ ಇರುವಷ್ಟು ಕಾಂಪಿಟೇಷನ್‌ ಸೀರಿಯಲ್‌ ಲೋಕದಲ್ಲೂ ಇದೆ. ನಟಿಯರಿಗೆ ತುಂಬಾ ಕಾಂಪಿಟೇಷನ್‌ ಇರುತ್ತದೆ ಕೆಲವರು ಪ್ಯಾಷನ್‌ನಿಂದ ಬರುತ್ತಾರೆ ಆದರೆ ಕೆಲವರು ಇದ್ದನೇ ದುಡಿಮೆ ಮಾಡಿಕೊಳ್ಳಬೇಕು ಎಂದು ಬರುತ್ತಾರೆ. ಸೀರಿಯಲ್‌ನಲ್ಲಿ ನಾನು ಆಗ ಇದ್ದಿದ್ದಕ್ಕೂ ಈಗ ಇರುವುದಕ್ಕೂ ತುಂಬಾ ಬದಲಾಗಿರುವೆ. ಇಂಡಸ್ಟ್ರಿಗೆ ಕಾಲಿಟ್ಟಾಗ ನಾನು ಮೊದಲು ಕಲಿತ ಪಾಠವೇ ಸಮಯ ಪ್ರಜ್ಞೆ ಯಾರು ಬರಲಿ ಬಿಡಲಿ ನಾನು ಮೊದಲು ಸೆಟ್‌ಗೆ ಬಂದು ರೆಡಿಯಾಗಿ ನಿಂತಿರುವೆ’ ಎಂದು ಹೇಳಿದ್ದಾರೆ ನಟಿ ರಜನಿ .

Leave a Reply

Your email address will not be published. Required fields are marked *