ಸ್ಯಾಂಡಲ್ ವುಡ್ ನಟಿ ರಾಗಿಣಿ ಪ್ರಜ್ವಲ್ ಅವರ ಹೊಸ ಲುಕ್ ನಲ್ಲಿ ಮಾಡಿರುವ ಫೋಟೋ ಶೂಟ್ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಫೋಟೋ

ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರ ಮಡದಿ ರಾಗಿಣಿ ಪ್ರಜ್ವಲ್ (Ragini Prajwal) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದು, ಜಿಮ್, ಡ್ಯಾನ್ಸ್ ಹಾಗೂ ಔಟಿಂಗ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಫಿಟ್ನೆಸ್ (Fitness) ಬಗ್ಗೆ ಜ್ಞಾನ ಹೊಂದಿದ್ದು, ಅಪ್ಲಿಕೇಶನ್ ಮೂಲಕ ಹಲವಾರು ಜನರಿಗೆ ಕೋಚಿಂಗ್ ನೀಡುತ್ತಾರೆ.

ಎಲ್ಲವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುವ ಇವರಿಗೆ ಸಿನಿಮಾರಂಗದಲ್ಲಿಯು ಬೇಡಿಕೆಯಿದೆ. ಸೋಶಿಯಲ್ ಮೀಡಿಯಾದಲ್ಲಿ ಡಾನ್ಸ್ ಹಾಗೂ ಫಿಟ್ ನೆಸ್ (Dance and Fitness)ಗೆ ಸಂಬಂಧ ಪಟ್ಟ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಅದಲ್ಲದೆ ನಟಿ ರಾಗಿಣಿ ಪ್ರಜ್ವಲ್ ಅವರು ತಮ್ಮ ವೈಯುಕ್ತಿಕ ಜೀವನಕ್ಕೆ ಸಂಬಂಧ ಪಟ್ಟ ಅಪ್ಡೇಟ್ ನೀಡುತ್ತಿರುತ್ತಾರೆ.

ಅದಲ್ಲದೇ ಆಗಾಗ ಫೋಟೋ ಶೂಟ್ ಮಾಡಿಸಿಕೊಳ್ಳುವ ನಟಿಯು ಇದೀಗ ಲೈಟ್ ಆರೆಂಜ್ ಬಣ್ಣದ ಉಡುಗೆಯಲ್ಲಿ ಫೋಟೋಶೂಟ್ (Photoshoot) ಮಾಡಿಸಿಕೊಂಡಿದ್ದಾರೆ. ಮೈ ಕಾಣುವ ಉಡುಗೆಯಲ್ಲಿ ಮಿಂಚಿದ್ದು, ಇವರು ತೊಟ್ಟಿರುವ ಉಡುಗೆಯ ತುಂಬೆಲ್ಲಾ ಝರಿಯಿದ್ದು, ನೆಕ್ ಲೆಸ್ ಹಾಕಿದ್ದು ಕೂದಲು ಫ್ರೀಯಾಗಿ ಬಿಟ್ಟಿದ್ದಾರೆ. ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದು, ಈ ಫೋಟೋವನ್ನು ರಾಗಿಣಿ ಪ್ರಜ್ವಲ್ ಅವರು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಏಳು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿದ್ದು, ಪ್ರತಿಕ್ರಿಯೆಗಳು ಬರುತ್ತಿವೆ.

ನಟಿ ರಾಗಿಣಿ ಪ್ರಜ್ವಲ್ ಅವರ ಸಿನಿ ಕೆರಿಯರ್ ಬಗ್ಗೆ ಹೇಳುವುದಾದರೆ,ಅದ್ಭುತ ಡಾನ್ಸರ್ ಆಗಿರುವ ಇವರು ಈಗಾಗಲೇ ಸಾಕಷ್ಟು ಡಾನ್ಸ್ ಪರ್ಫಾರ್ಮೆನ್ಸ್ ನೀಡಿದ್ದಾರೆ. ಪುನೀತ್ ರಾಜಕುಮಾರ್ ನಿರ್ಮಾಣದ `ಲಾ’ (Laa) ಚಿತ್ರದ ಮೂಲಕ ನಾಯಕಿಯಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟರು. ಆ ಬಳಿಕ ರಚಿತಾ ರಾಮ್ ನಿರ್ಮಾಣದ `ರಿ‍ಷಭಪ್ರಿಯ’ (Rishabhapriya) ಚಿತ್ರದಲ್ಲಿ ನಟಿಸುವ ಮೂಲಕ ತೆರೆ ಮೇಲೆ ಕಾಣಿಸಿಕೊಂಡರು.

ಆದರೆ ಇದೀಗ ಶಾನುಭೋಗರ ಮಗಳು (Shanubhogara Magalu) ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕೋಡ್ಲು ರಾಮಕೃಷ್ಣ (Kodlu Ramakrishana) ಅವರು ಶಾನುಭೋಗರ ಮಗಳು ಸಿನಿಮಾಗೆ ಆಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಬ್ರಿಟಿಷರನ್ನು ಗುಂಡಿಟ್ಟು ಸಾಯಿಸುವ ದೃಶ್ಯವನ್ನು ಶ್ರೀರಂಗಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟದ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಡಿ ಗ್ಲಾಮ್ ಲುಕ್ ನಲ್ಲಿ ತೆರೆ ಕಾಣಿಸಿಕೊಳ್ಳಲಿರುವ ನಟಿ ರಾಗಿಣಿ ಪ್ರಜ್ವಲ್ ಅವರ ಪಾತ್ರದ ಬಗ್ಗೆ ಬಾರಿ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *