ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಯವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ಅಪರೂಪದ ಫೋಟೋಗಳು

ತುಪ್ಪದ ಬೆಡಗಿ ಎಂದೇ ಖ್ಯಾತಿ ಗಳಿಸಿರುವ ರಾಗಿಣಿ ದ್ವಿವೇದಿ (Ragini Dwivedi) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ವೈಯುಕ್ತಿಕ ಜೀವನದ ಕೆಟ್ಟ ಘಟನೆಯಿಂದ ಸುದ್ದಿಯಾದ ನಟಿ ರಾಗಿಣಿ ದ್ವಿವೇದಿ ಇದೀಗ ಮತ್ತೆ ಕನ್ನಡ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ರಾಗಿಣಿ ದ್ವಿವೇದಿಯವರು ನಟಿ ಹಾಗೂ ಮಾಡೆಲ್ ಆಗಿದ್ದು ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾ (Social Media) ದಲ್ಲಿ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಅದರೊಂದಿಗೆ ಯೂಟ್ಯೂಬ್ ಚಾನೆಲ್ ನಲ್ಲಿ ಹಲವು ವಿಚಾರಗಳನ್ನು ರಿವೀಲ್ ಮಾಡುತ್ತಿರುತ್ತಾರೆ. ಇದೀಗ ನಟಿ ರಾಗಿಣಿ ದ್ವಿವೇದಿಯವರ ಮುದ್ದಾದ ಕುಟುಂಬದ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ಅಪ್ಪ, ಅಮ್ಮ ಹಾಗೂ ಸಹೋದರ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದು, ಒಂದೇ ಫ್ರೇಮ್ ನಲ್ಲಿ ಈ ನಟಿಯ ಫ್ಯಾಮಿಲಿಯನ್ನು ಕಂಡು ಖುಷಿ ಪಟ್ಟುಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಟಿ ರಾಗಿಣಿ ಅವರು ಸ್ವಿಮ್ಮಿಂಗ್ ​ಪೂಲ್​ (Swimming Pool) ನಲ್ಲಿ ಸಮಯ ಕಳೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಈ ಫೋಟೋಗಳು ವೈರಲ್ ಆಗಿದ್ದು, ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ‘ನೀವು ಸಖತ್ ಹಾಟ್. ಬಹುಶಃ ಸ್ವಿಮ್ಮಿಂಗ್ ​ಪೂಲ್ ನೀರು ಬಿಸಿ ಆಗಿರಬಹುದು’ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ

ನಟಿ ರಾಗಿಣಿಯವರ ನಟನಾ ಹಿನ್ನಲೆಯನ್ನು ನೋಡುವುದಾದರೆ, 2009 ರಲ್ಲಿ `ವೀರ ಮದಕರಿ’ (Veera Madakari) ಚಿತ್ರದಿಂದ ಸಿನಿಪಯಣ ಆರಂಭಿಸಿದ ರಾಗಿಣಿ ಸುಮಾರು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹಿಂದಿ (Hindi), ಮಲಯಾಳಂ (Malayalam), ತೆಲುಗು (Telugu) ಮತ್ತು ತಮಿಳು (Tamil) ಚಿತ್ರಗಳಲ್ಲಿ ನಟಿಸಿದ್ದಾರೆ. 2008 ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ರಾಗಿಣಿ ಹೈದಾರಾಬಾದಿನಲ್ಲಿ ಜರುಗಿದ ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆಗಿ ಹೊರ ಹೊಮ್ಮಿದ್ದರು. 2009 ರಲ್ಲಿ ಮುಂಬೈನಲ್ಲಿ ಜರುಗಿದ ಫೆಮಿನಾ ಮಿಸ್ ಬ್ಯೂಟಿಪುಲ್ ಹೇರ್ ಸ್ಫರ್ಧೆ ಗೆದ್ದುಕೊಂಡರು.

ಕಿಚ್ಚ ಸುದೀಪ್‌ರ `ವೀರ ಮದಕರಿ’ ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ಹಲವು ಸಿನಿಮಾಗಳಲ್ಲಿ ನಟಿಸಿ ಬ್ಯುಸಿಯಾಗಿದ್ದಾರೆ. 2011 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಂದಿನಿ (Nandini) ಹಾಲು ನಿಯಮಿತದ ರಾಯಭಾರಿಯಾಗಿರುವ ರಾಗಿಣಿ ನೋಂದಾಯಿತ ಅಭಿಮಾನಿಗಳ ಸಂಘವನ್ನು ಹೊಂದಿದ್ದಾರೆ. ಬದುಕಿನಲ್ಲಿ ಆದ ಏರಿಳಿತವನ್ನು ಮರೆತು ನಟಿ ರಾಗಿಣಿ ದ್ವಿವೇದಿ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳ ಮೂಲಕವೂ ಅವರು ಗಮನ ಸೆಳೆಯುತ್ತಿದ್ದು, ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *