ಅಪ್ಪಂದಿರ ದಿನಕ್ಕೆ ವಿಶೇಷ ಪೋಸ್ಟ್ ಹಂಚಿಕೊಂಡ ನಟಿ ರಾಧಿಕಾ ಪಂಡಿತ್, ಪೋಸ್ಟ್ ನಲ್ಲಿ ಅಪ್ಪನ ಬಗ್ಗೆ ಬರೆದುಕೊಂಡ ನಟಿ

ಚಂದನವನದ ನಟಿ ರಾಧಿಕಾ ಪಂಡಿತ್ (Actress Radhika Pandith) ಅವರು ಸಾಂಸಾರಿಕ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಲೋಕದಿಂದ ದೂರ ಉಳಿದಿದ್ದಾರೆ. ನಟಿ ರಾಧಿಕಾ ಪಂಡಿತ್ ಅವರು, ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ತನ್ನ ಮುದ್ದು ಮಕ್ಕಳ ಜೊತೆಗೆ ಸಮಯ ಕಳೆಯುತ್ತ ಪತಿಯ ಕೆಲಸಗಳಿಗೆ ಸಾಥ್ ನೀಡುತ್ತಿರುತ್ತಾರೆ.

ಹಬ್ಬ ಹಾಗೂ ವಿಶೇಷ ದಿನದಂದು ರಾಧಿಕಾ ಪಂಡಿತ್ ಮಿಸ್ ಮಾಡದೇನೆ ಪೋಸ್ಟ್ ಮಾಡಿ ಫ್ಯಾನ್ಸ್ ಗಳ ಗಮನ ಸೆಳೆಯುತ್ತಿರುತ್ತಾರೆ. ಇಂದು ಅಪ್ಪಂದಿರದಿನ. ಈ ದಿನ ರಾಧಿಕಾ ಪಂಡಿತ್ ಅವರು ವಿಶೇಷವಾಗಿ ಪೋಸ್ಟ್ ಮಾಡಿದ್ದು, ಫ್ಯಾನ್ಸ್ ಈ ಪೋಸ್ಟ್ ನೋಡಿ ಖುಷಿ ಪಟ್ಟಿದ್ದಾರೆ. ಮಗಳ ಕಾಲು ಬೆರಳಿಗೆ ನೇಲ್ ಪಾಲಿಶ್ ಹಾಕುತ್ತಿರುವ ಯಶ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಪುತ್ರ ಯಥರ್ವ (Yatharv) ಜೊತೆ ಚೆಸ್ ಆಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್‌ ತಂದೆ ತಾಯಿ ಹಾಗೂ ಅಣ್ಣನೊಂದಿಗೆ ಇರುವ ಫೋಟೊಗಳನ್ನು ಹಂಚಿಕೊಂಡು ʻʻನಾನು ಯಾವಾಗಲೂ ಅಪ್ಪನ ಮಗಳು, ಎಲ್ಲದಕ್ಕೂ, ಏನೇ ಇದ್ದರೂ ಅಪ್ಪನ ಬಳಿಯೇ ಮೊದಲು ಓಡುತ್ತೇನೆ. (ಅಮ್ಮನಿಂದ ಅನುಮತಿ ನಿರಾಕರಿಸಬಹುದು, ಸಲಹೆಗಾಗಿ, ಕೆಲವೊಮ್ಮೆ ಸುಮ್ಮನೆ ಮಾತನಾಡಲು) ನನಗೆ ಅಪ್ಪನೇ ನನ್ನ ಮಾರ್ಗದರ್ಶಿ, ನನ್ನ ಆಧಾರ, ನನ್ನ ಹೀರೊ !! ನನ್ನ ತಂದೆ ಜತೆಗಿನ ಬಾಂಧವ್ಯ ಇರುವ ಹಾಗೆಯೇ, ಐರಾ ಮತ್ತು ಯಥರ್ವ್‌ ಅವರ ತಂದೆ ಯಶ್ ಜೊತೆಯಿದೆ. ಎಲ್ಲಾ ಅತ್ಯುತ್ತಮ ಅಪ್ಪಂದಿರಿಗೆ ತಂದೆಯ ದಿನದ ಶುಭಾಶಯಗಳು!!ʼʼಎಂದು ಬರೆದುಕೊಂಡಿದ್ದಾರೆ. ರಾಧಿಕಾ ಪಂಡಿತ್ ಅವರ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕೆಜಿಎಫ್ 2 ( KGF 2) ಬಳಿಕ ಯಶ್ ಹೊಸ ಸಿನಿಮಾ ಘೋಷಣೆಯಾಗಿಲ್ಲ. ಇತ್ತೀಚೆಗಸ್ಟೇ ಬಾಲಿವುಡ್ ಸಿನಿಮಾದಲ್ಲಿ ರಾವಣನ ಪಾತ್ರವನ್ನು ಯಶ್ (Yash) ತಿರಸ್ಕರಿಸಿದ ಸುದ್ದಿ ಬಂದಿತ್ತು. ಇದೀಗ ರಜನಿ ಕಾಂತ್ ಅವರ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುವ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ತಲೈವಾ 171 ಸಿನಿಮಾವನ್ನು ಲೋಕೇಶ್ ಕನಗರಾಜು ( Lokesh Kanagaraju) ನಿರ್ದೇಶನ ಮಾಡಲಿದ್ದು, ಈ ಸಿನಿಮಾದಲ್ಲಿ ಯಶ್ ಅತಿಥಿ ಪಾತ್ರವೊಂದನ್ನು ಮಾಡಬೇಕೆಂದು ಚಿತ್ರತಂಡ ಪ್ರಯತ್ನ ನಡೆಸುತ್ತಿದೆಯಂತೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯೊಂದು ಹೊರಬೀಳಬೇಕು.

Leave a Reply

Your email address will not be published. Required fields are marked *