ಯೋಗ ದಿನದಂದು ಬಾಳೆ ಎಲೆಯಂತೆ ಬಾಗಿ ಯೋಗಾಸನ ಪ್ರದರ್ಶನ ಮಾಡಿದ ರಾಧಿಕಾ ಕುಮಾರಸ್ವಾಮಿ ಅತ್ತಿಗೆ!! ವಿಡಿಯೋ ಹಂಚಿಕೊಂಡ ನಟಿ ರಾಧಿಕಾ… ಇಲ್ಲಿದೆ ನೋಡಿ!!!

ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswami) ಸಿನಿಮಾ ಇಂಡಸ್ಟ್ರಿಯಿಂದ ದೂರವೇ ಉಳಿದಿದ್ದರು. ಆದರೆ ಇದೀಗ ಮತ್ತೆ ಅವರು ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ರಂಗದಿಂದ ಸ್ವಲ್ಪ ಮಟ್ಟಿಗೆ ಅಂತರ ಕಾಯ್ದುಕೊಂಡಿದ್ದರೂ ಕೂಡ ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಮನಸ್ಸು ಗೆಲ್ಲುವ ಈ ಬೆಡಗಿಗೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಗಳಿದ್ದಾರೆ. ಸದ್ಯಕ್ಕೆ ಅಜಗ್ರತ ಸಿನಿಮಾದಲ್ಲಿ ನಟಿಸುತ್ತಿದ್ದು, ಬಿಡುವು ಸಿಕ್ಕಾಗಲೆಲ್ಲಾ ರೀಲ್ಸ್ ಎಂದು ಸುದ್ದಿಯಲ್ಲಿರುತ್ತಾರೆ. ಇದೀಗ ಚಂದನವನದ ನಟಿ ರಾಧಿಕಾ ಕುಮಾರಸ್ವಾಮಿಯವರು ಸುದ್ದಿಯಾಗಿದ್ದಾರೆ.

ಅಂತರಾಷ್ಟ್ರೀಯ ಯೋಗ ದಿನ (International Yoga Day) ವಾದ ಇಂದು ರಾಧಿಕಾ ಕುಮಾರಸ್ವಾಮಿ ಯೋಗ ಮಾಡುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದ ಜೊತೆಗೆ ಯೋಗ ದಿನಾಚರಣೆಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್ ನೋಡಿದ್ದು, ನಟಿಗೆ ಕೂಡ ಯೋಗ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅದಲ್ಲದೇ ನಟಿ ರಾಧಿಕಾ ಕುಮಾರಸ್ವಾಮಿಯವರು ಯೋಗ ಮಾಡುವ ವಿಡಿಯೋ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತನ್ನ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡವರು ನಟಿ ರಾಧಿಕಾ ಕುಮಾರಸ್ವಾಮಿ. ಚಂದನವನದಲ್ಲಿ ನಟಿ (Actor) ಯಾಗಿ ಮಾತ್ರವಲ್ಲ ನಿರ್ಮಾಪಕಿ (Producer) ಯಾಗಿಯೂ ಗುರುತಿಸಿಕೊಂಡಿದ್ದಾರೆ. 2002 ರಲ್ಲಿ ಬಿಡುಗಡೆಗೊಂಡ ನಿನಗಾಗಿ (Ninagagi) ಚಿತ್ರದ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟವರು. ಆದಾದ ಬಳಿಕ ಹಿಟ್ ಸಿನಿಮಾಗಳ ಮೂಲಕ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಅದಲ್ಲದೇ, ಶಮಿಕಾ ಎಂಟರ್‍ಪ್ರೈಸಸ್ ಮುನ್ನಡೆಸುತ್ತಿದ್ದು, ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.ಸದ್ಯಕ್ಕೆ ಅಜಾಗ್ರತ’ ನಟಿ ರಾಧಿಕಾ ಕುಮಾರಸ್ವಾಮಿ ಬ್ಯುಸಿಯಾಗಿದ್ದಾರೆ. ಎಂ ಶಶಿಧರ್ (M. Shasidhar) ನಿರ್ದೇಶನದ ಈ ಚಿತ್ರವು ಖ್ಯಾತ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ (Shreyas Talpade) ಅವರ ಕನ್ನಡದ ಮೊದಲ ಸಿನಿಮಾವಾಗಿದೆ. ಈ ಚಿತ್ರದ ಚಿತ್ರೀಕರಣ ಹೈದರಾಬಾದ್ (Hyderbad) , ಬೆಂಗಳೂರು (Banglore) ಮತ್ತು ಮುಂಬೈ (Mumbai) ನಲ್ಲಿ ನಡೆಯಲಿದೆ.

ರವಿರಾಜ್ (Raviraj) ನಿರ್ಮಿಸಿರುವ ಅಜಾಗ್ರತ ಕನ್ನಡ (Kannada), ತಮಿಳು (Tamil), ತೆಲುಗು (Telug), ಮಲಯಾಳಂ (Malayalam), ಹಿಂದಿ (Hindi), ಕೊಂಕಣಿ (Konkani), ಮರಾಠಿ (Marati)ಸೇರಿದಂತೆ ಏಳು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡು ಸಿನಿಮಾ ರಿಲೀಸ್ ಆಗಲಿದೆ.

Leave a Reply

Your email address will not be published. Required fields are marked *