ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟ ನಟಿಯರು ವೃತ್ತಿ ಜೀವನದ ಜೊತೆಗೆ ವೈಯುಕ್ತಿಕ ಜೀವನದ ವಿಚಾರವಾಗಿಯು ಸುದ್ದಿಯಲ್ಲಿರುತ್ತಾರೆ. ಹೌದು, ತಮಿಳು ಬಿಗ್ ಬಾಸ್ ಸೀಸನ್ 6 (Tamil Big Boss Sisan 6) ರ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ನಟಿ ರಚಿತಾ ಮಹಾಲಕ್ಷ್ಮಿ ( Rachita Mahalakshmi) ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ. ಈ ನಟಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.
ಅದಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ರಚಿತಾರವರು ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ನಟಿ ಆದರೆ ಇದೀಗ ವಿಶೇಷವಾದ ಟ್ಯಾಟೂ (Tatto) ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಕಿರುತೆರೆ ನಟಿ ರಚಿತಾ ಮಹಾಲಕ್ಷ್ಮಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಎದೆಯ ಮೇಲೆ ಗೂಬೆ ಹಚ್ಚೆ ಹಾಕಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ.ಈ ಫೋಟೋ ಜೊತೆಗೆ, “ಭಯವನ್ನು ಶಕ್ತಿಯಾಗಿ ಪರಿವರ್ತಿಸುವುದು ಎಂದು ನಟಿ ಬರೆದುಕೊಂಡಿದ್ದಾರೆ. ಈ ಫೋಟೋಗೆ ನಲವತ್ತೈದು ಸಾವಿರಕ್ಕೂ ಅಧಿಕ ವ್ಯೂಸ್ ಬಂದಿದೆ.
ಗೂಬೆಯನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ನಟಿ ರಚಿತಾರವರ ಫೋಟೋ ನೋಡಿದ ನೆಟ್ಟಿಗರು ನಾನಾ ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಸೂಪರ್ ರಚಿತಾ ಎಂದರೆ, ಇನ್ನು ಕೆಲವರು ಗೂಬೆ ಹಚ್ಚೆ ಹಾಕಿಸಿಕೊಂಡಿರುವು ಅದೃಷ್ಟಕ್ಕೋ, ಅವಕಾಶಕ್ಕೋ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯಕ್ಕೆ ನಟಿ ರಚಿತಾ ಮಹಾಲಕ್ಷ್ಮಿಯವರ ಟ್ಯಾಟೂ ಫೋಟೋವೊಂದು ವೈರಲ್ ಆಗಿವೆ.
ಇತ್ತೀಚೆಗಷ್ಟೇ ನಟಿ ರಚಿತಾ ಮಹಾಲಕ್ಷ್ಮಿಯವರು ಕಾರು ಖರೀದಿಸಿದ್ದರು. ಸೋಶಿಯಲ್ ಮೀಡಿಯಾ (Social Media) ದಲ್ಲಿ ಹೊಸ ಕಾರ್ ಖರೀದಿಸಿದ್ದ ಫೋಟೋ ಶೇರ್ ಮಾಡಿಕೊಂಡಿದ್ದರು. ಕಾರು ಖರೀದಿಯ ವೇಳೆಯಲ್ಲಿ ನಟಿ ರಚಿತಾ ಮಹಾಲಕ್ಷ್ಮಿ ಜೊತೆಗೆ ಅವರ ಸ್ನೇಹಿತರು ಕೂಡ ಜೊತೆಗಿದ್ದರು. ಅಂದಹಾಗೆ, ಬೆಂಗಳೂರಿ (Banglore) ನಲ್ಲಿ ಹುಟ್ಟಿ ಬೆಳೆದ ರಚಿತಾರವರು ತಮಿಳು, ತೆಲುಗು ಹಾಗೂ ಕನ್ನಡ (Kannada) ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡವರು. ಪ್ರಾರಂಭದಲ್ಲಿ ಕನ್ನಡ ಧಾರಾವಾಹಿಗಳಲ್ಲಿ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು.

ಈಗಾಗಲೇ ನಟಿ ರಚಿತಾ ಮಹಾಲಕ್ಷ್ಮಿಯವರು, ಸಾಗುತ ದೂರ ದೂರ, ಸೂರ್ಯಕಾಂತಿ, ಮೇಘ ಮಂದಾರ, ಸವಿಗನಸು, ಬಂದೆ ಬರತವ್ವ ಕಾಲ, ಪಿರಿವೊಮ್ ಸಂತಿಪ್ಪೊಮ್, ಸುಪ್ರಭಾತ, ಜ್ಯೂನಿಯರ್ ಸೀನಿಯರ್, ಜ್ಯೂನಿಯರ್ ಸೂಪರ್ ಸ್ಟಾರ್ 3.0, ಮನೆಯೊಂದು ಮೂರು ಬಾಗಿಲು, ಮಸಾಲ ಕುದುಂಬಮ್, ಗೀತಾಂಜಲಿ, ನಚಿವರಪುರಂ, ಇಲ್ಲವರಸಿ, ಉಪ್ಪು ಕರುವಾಡು, ಸ್ವಾತಿ ಚಿಂಕುಲು ಹೀಗೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹೀಗೆ ಕಿರುತೆರೆ ಲೋಕದಲ್ಲಿ ಬ್ಯುಸಿಯಾಗಿದ್ದು, ಬೇಡಿಕೆಯಿದೆ