ಓಣಂ ಹಬ್ಬವನ್ನು ಸಂಭ್ರಮಿಸಿದ ಪೋಸ್ಟ್ ಹಂಚಿಕೊಂಡ ಲವ್ ಮಾಕ್ಟೇಲ್ ನಟಿ ರಾಚೆಲ್ ಡೇವಿಡ್

ಮಲಯಾಳಂ ನಟಿ ರಾಚೆಲ್ ಡೇವಿಡ್ (Rachel Devid) ಎಲ್ಲರಿಗೂ ಕೂಡ ಚಿರಪರಿಚಿತರಾಗಿದ್ದಾರೆ. ಲವ್ ಮಾಕ್ಟೇಲ್ 2 (Love Mocktail 2) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಕನ್ನಡಿಗರ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಇದೀಗ ಮಲಯಾಳಂ ನಟಿ ರಾಚೆಲ್ ಡೇವಿಡ್ ಅವರಿಗೂ ಕೂಡ ಅವಕಾಶಗಳು ಬರುತ್ತಿದ್ದು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ.

ಮಲಯಾಳಂ ನಟಿ ರಾಚೆಲ್ ಅವರು ಓಣಂ ಹಬ್ಬ (Onam Festival) ವನ್ನು ಆಚರಿಸಿಕೊಂಡಿದ್ದಾರೆ. ಹೌದು ಕೇರಳದ ಸೀರೆಯುಟ್ಟು, ತಲೆಗೆ ಮಲ್ಲಿಗೆ ಹೂವು ಮುಡಿದುಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡು, ಎರಡನೇ ಸುತ್ತಿಗೆ ರೆಡಿ, ಹ್ಯಾಪಿ ಓಣಂ ಎಂದು ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್ಟಿಗರು ಸೇರಿದಂತೆ ಚಿತ್ರರಂಗದವರು ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಚೈತ್ರಾ ಜೆ ಆಚಾರ್ ಅವರು ಆಹಾ ಶೋ ಪ್ರೆಟ್ಟಿ ಎಂದು ಕಾಮೆಂಟ್ ಮಾಡಿದ್ದಾರೆ.

ಸದ್ಯಕ್ಕೆ ನಟಿ ರಾಚೆಲ್ ಡೇವಿಡ್ ಅವರಿಗೆ ಕನ್ನಡದಲ್ಲಿ ಸಾಲು ಸಾಲು ಅವಕಾಶಗಳು ಬರುತ್ತಿದ್ದು, ಕನ್ನಡ ಚಿತ್ರಗಳ ಅವಕಾಶ ಸಿಗುತ್ತಿರುವುದಕ್ಕೆ ಅವರು ಸಂತೋಷವಾಗಿದ್ದಾರೆ. ನಟಿ ರಾಚೆಲ್ ಅವರು ಕನ್ನಡದ ಚೆಫ್ ಚಿದಂಬರ (Chef Chidambara) ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಆನಂದ್ ರಾಜ್ (Anand Raj) ಆಕ್ಷನ್ ಕಟ್ ಹೇಳುತ್ತಿದ್ದು, ನಟ ಅನಿರುದ್ಧ್ ಜಟ್ಕರ್ (Aniruddh Jatkar) ನಟಿಸಿದ್ದಾರೆ. ಈ ಸಿನಿಮಾದ ಬಗ್ಗೆ ಮಾತನಾಡಿರುವ ನಟಿ ಪಾತ್ರವನ್ನು ಒಪ್ಪಿಕೊಳ್ಳಲು ಮತ್ತು ಅನಿರುದ್ಧ್ ಅವರಂತಹ ಅನುಭವಿ ನಟರೊಂದಿಗೆ ತೆರೆ ಹಂಚಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.

ನಟಿ ರಾಚೆಲ್ ಡೇವಿಡ್ ಅವರು ಮಾತು ಶುರು ಮಾಡಿದ್ದು, “ಇದೇ ಪ್ರಶ್ನೆ ನನ್ನ ಮನಸ್ಸಲ್ಲೂ ಮೂಡಿತು ಮತ್ತು ನಾನು ಅದನ್ನು ನಿರ್ದೇಶಕ ಆನಂದ್ ರಾಜ್ ಅವರೊಂದಿಗೆ ಚರ್ಚಿಸಿದೆ. ಪರದೆ ಮೇಲೆ ವಯಸ್ಸಿನ ವ್ಯತ್ಯಾಸ ಮುಖ್ಯವೇ ಎಂದು ನಾನು ಕೇಳಿದೆ. ಅನಿರುದ್ಧ್ ಅವರನ್ನು ಈ ಹಿಂದೆಂದು ಭೇಟಿಯಾಗದ ಕಾರಣ ನನಗೂ ಸ್ವಲ್ಪ ಆತಂಕವಿತ್ತು. ಆದಾಗ್ಯೂ, ಆನಂದ್ ರಾಜ್ ಅವರು ಉತ್ತಮವಾಗಿ ತೋರಿಸುವುದಾಗಿ ಮತ್ತು ನಮ್ಮ ಜೋಡಿಯು ನಿಸ್ಸಂದೇಹವಾಗಿ ಸುಂದರವಾಗಿ ಮೂಡಿಬರುತ್ತದೆ ಎಂದು ನನಗೆ ಭರವಸೆ ನೀಡಿದರು” ಎಂದಿದ್ದಾರೆ.

“ಈಗಿನ ಕಾಲದಲ್ಲಿ, ತೆರೆಯ ಮೇಲೆ ಕಾಣಿಸಿಕೊಳ್ಳಲು ವಯಸ್ಸು ಅಡ್ಡಿಯಾಗಬಾರದು ಎಂದು ನಾನು ನಂಬುತ್ತೇನೆ. ನನಗೆ ಹೆಚ್ಚು ಮುಖ್ಯವಾದುದು ಕಂಟೆಂಟ್. ನನ್ನ ಹಿಂದಿನ ಚಿತ್ರಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದುದನ್ನು ಮಾಡುವ ಗುರಿಯನ್ನು ಹೊಂದಿದ್ದೇನೆ. ನಾನು ಯಾವುದೇ ಹೊಸ ಅಥವಾ ಅನುಭವಿ ನಟರೊಂದಿಗೆ ಜೋಡಿಯಾಗಿದ್ದರೂ, ನನ್ನ ಪಾತ್ರಕ್ಕೆ ಎಷ್ಟು ಮೌಲ್ಯವಿದೆ ಎಂಬುದು ನನಗೆ ಮುಖ್ಯ ವಿಚಾರ. ಈ ಸಂದರ್ಭದಲ್ಲಿ, ನಾನು ಸಂಪೂರ್ಣವಾಗಿ ನಿರ್ದೇಶಕರ ಇಚ್ಛೆಯಂತೆ ಹೋಗಿದ್ದೇನೆ’ ಎಂದಿದ್ದಾರೆ.

Leave a Reply

Your email address will not be published. Required fields are marked *