ಭಾವಿ ಪತಿಯ ಜೊತೆಗೆ ಮಜಾ ಭಾರತ ಮತ್ತು ರಾಧೆ ಶ್ಯಾಮ್ ಖ್ಯಾತಿಯ ಪ್ರಿಯಾಂಕಾ ಕಾಮತ್, ಇಲ್ಲಿದೆ ನೋಡಿ ಅಪರೂಪದ ಫೋಟೋ

ಕಿರುತೆರೆ ಲೋಕದ ಮಜಾಭಾರತದ ಶೋ ಮೂಲಕ ಫೇಮಸ್ ಆದವರು ಕಲಾವಿದೆ ಪ್ರಿಯಾಂಕಾ ಕಾಮತ್ (Priyanka Kamath) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಕಿರುತೆರೆಯ ಪರದೆಯಲ್ಲಿ ಪ್ರಿಯಾಂಕಾ ಕಾಮತ್ ಪಿಕೆ (PK) ಎಂದೇ ಫೇಮಸ್ ಆಗಿದ್ದು, ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವನ್ನು ಹೊಂದಿದ್ದಾರೆ. ಪ್ರಿಯಾಂಕಾ ಕಾಮತ್ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆಯಾಗಿದ್ದಾರೆ.

ಈ ಹಿಂದೆ ತಾನು ಒಬ್ಬ ಕಲಾವಿದೆ ಎನ್ನುವ ಕಾರಣಕ್ಕೆ ಯಾರು ನನ್ನನ್ನು ಮದುವೆಯಾಗಲು ಬರುತ್ತಿಲ್ಲ ಎಂದು ತಮ್ಮ ನೋವಿನಿಂದ ಹೇಳಿಕೊಂಡಿದ್ದರು. ಹೀಗಿರುವಾಗಲೇ ಈ ವರ್ಷದ ಪ್ರಾರಂಭದಲ್ಲಿ ಮಜಾಭಾರತ (Maja Bharatha) ಗಿಚ್ಚಿ ಗಿಲಿಗಿಲಿ (Gicchi Gili Gili) ಶೋಗಳ ಮೂಲಕ ಖ್ಯಾತಿ ಪಡೆದಿರುವ ಪ್ರಿಯಾಂಕಾ ಕಾಮತ್ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಗುಡ್ ನ್ಯೂಸ್ ನೀಡಿದ್ದರು.

ಇದೀಗ ಭಾವಿ ಪತಿಯ ಜೊತೆಗಿನ ಫೋಟೋಗಳು ವೈರಲ್ ಆಗಿದ್ದು, ಈ ಫೋಟೋದಲ್ಲಿ ನಟಿ ಪ್ರಿಯಾಂಕಾ ಕಾಮತ್ ತನ್ನ ಬೋಲ್ಡ್ ಲುಕ್ ನಿಂದಲೇ ಗಮನ ಸೆಳೆದಿದ್ದಾರೆ. ಈ ಪ್ರಿಯಾಂಕಾ ಕಾಮತ್ ಹಾಗೂ ಅಮಿತ್ ನಾಯಕ್ (Amith Nayak) ಅವರ ಫೋಟೋಗೆ ಮೆಚ್ಚುಗೆ ವ್ಯಕ್ತವಾಗಿವೆ. ಒಂದೇ ಫೋಟೋದಲ್ಲಿ ಈ ಜೋಡಿಯನ್ನು ನೋಡಿದ ಫ್ಯಾನ್ಸ್ ಖುಷಿ ಪಟ್ಟುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮಜಾಭಾರತ ಖ್ಯಾತಿಯ ಪ್ರಿಯಾಂಕಾ ಕಾಮತ್ ಅವರ ನಿಶ್ಚಿತಾರ್ಥ (Engegment) ನೆರವೇರಿತ್ತು. ತಾವು ಪ್ರೀತಿಸಿದ ಹುಡುಗ ಅಮಿತ್ ನಾಯಕ್ ಜೊತೆ ಪ್ರಿಯಾಂಕಾ ಕಾಮತ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಪ್ರಿಯಾಂಕಾ ಕಾಮತ್ ಹಾಗೂ ಅಮಿತ್ ನಾಯಕ್ ಅವರ ನಿಶ್ಚಿತಾರ್ಥ ಸಮಾರಂಭ ಪುತ್ತೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಪ್ರಿಯಾಂಕಾ ಕಾಮತ್ ಮತ್ತು ಅಮಿತ್ ನಾಯಕ್ ಉಂಗುರ ಬದಲಾಯಿಸಿಕೊಂಡಿದ್ದರು.

ಅಮಿತ್ ನಾಯಕ್ ಮೂಲತಃ ಕುಂದಾಪುರ (Kundapura) ದವರಾಗಿದ್ದು, ಮೆಕ್ಯಾನಿಕಲ್ ಎಂಜಿನಿಯರ್ (Mechanical Engineer) ಓದಿದ್ದಾರೆ. ಕೆಲ ಸಮಯದಿಂದ ಪ್ರಿಯಾಂಕಾ ಕಾಮತ್ ಹಾಗೂ ಅಮಿತ್ ನಾಯಕ್ ಪರಸ್ಪರ ಪ್ರೀತಿಸುತ್ತಿದ್ದಾರೆ. ಇತ್ತ ಚಾಂಪಿಯನ್’ (Champian) ಎಂಬ ರಿಯಾಲಿಟಿ ಶೋನಲ್ಲಿ ಪ್ರಿಯಾಂಕಾ ಕಾಮತ್ ಸ್ಪರ್ಧಿಸಿದ್ದರು. ‘ಮಜಾಭಾರತ’ ಹಾಗೂ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮಗಳಲ್ಲೂ ಪ್ರಿಯಾಂಕಾ ಕಾಮತ್ ಸ್ಪರ್ಧಿಸಿದ್ದರು. ನಟಿ ಪ್ರಿಯಾಂಕಾ ಕಾಮತ್ ಅವರಿಗೆ ಕಿರುತೆರೆಯಲ್ಲಿ ಅವಕಾಶಗಳು ಬರುತ್ತಿದ್ದು, ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ತಾನು ಪ್ರೀತಿಸಿದ ಹುಡುಗನ ಜೊತೆಗೆ ಯಾವಾಗ ಮದುವೆ ಮಾಡಿಕೊಳ್ಳುತ್ತಾರೆ ಎಂದು ಕಾದು ನೋಡಬೇಕು.

Leave a Reply

Your email address will not be published. Required fields are marked *