ಗಂಡನ ಜಾತಿ ಕುರಿತು ಟ್ರೋಲ್ ಮಾಡುವ ನೆಟ್ಟಿಗರಿಗೆ ಖಡಕ್ ಉತ್ತರ ಕೊಟ್ಟ ನಟಿ ಪ್ರಿಯಾಮಣಿ!!

ಸೆಲೆಬ್ರಿಟಿಗಳು ನಾನಾ ವಿಚಾರಗಳಿಂದ ಸುದ್ದಿಯಾಗುತ್ತಾರೆ. ಅದರಲ್ಲಿ ನಟಿಯರು ಸಿನಿಮಾದ ಜೊತೆಗೆ ವೈವಾಹಿಕ ಜೀವನದ ಕುರಿತು ಸುದ್ದಿ ಯಾಗುವುದೇ ಹೆಚ್ಚು. ವೈವಾಹಿಕ ಜೀವನವು ಸುಖಕರವಾಗಿದ್ದರೂ ಕೂಡ ಟ್ರೋಲಿಗರು ಮಾತ್ರ ಸೆಲೆಬ್ರಿಟಿಗಳ ವೈಯುಕ್ತಿಕ ಜೀವನದ ಬಗ್ಗೆ ನಾನಾ ರೀತಿಯ ಸುದ್ದಿಯನ್ನು ಹರಿ ಬಿಡುತ್ತಾರೆ. ಈ ವಿಚಾರದಲ್ಲಿ ಬಹುಭಾಷಾ ನಟಿ ಪ್ರಿಯಾಮಣಿ (Priyaamani) ಕೂಡ ಹೊರತಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮಾಮೂಲಾಗಿದೆ.

ಅದೇ ರೀತಿ ನಟಿ ಪ್ರಿಯಾಮಣಿ ಕೂಡ 2017ರಲ್ಲಿ ಉದ್ಯಮಿ ಮುಸ್ತಫಾ ರಾಜ್ (Mustafa Raj) ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿ ಸುಖ ಸಂಸಾರ ನಡೆಸುತ್ತಿದ್ದರೂ ಇವರಿಬ್ಬರ ಮದುವೆ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ.ಇನ್ನೊಂದೆಡೆ ಉದ್ಯಮಿ ಮುಸ್ತಫಾ ರಾಜ್ (Mustafa Raj) ಅವರು ಮೊದಲ ಪತ್ನಿ ಆಯೆಷಾಗೆ ವಿಚ್ಛೇದನ ನೀಡದೆ ಪ್ರಿಯಾಮಣಿ ಮದುವೆಯಾಗಿದ್ದರು. ಇದರಿಂದಾಗಿ ಇವರಿಬ್ಬರ ಮದುವೆ ಅಸಿಂಧು ಎಂದು ಆರೋಪಿಸಿ ಆಯೆಷಾ, ಮುಸ್ತಫಾ ಹಾಗೂ ಪ್ರಿಯಾಮಣಿ ವಿರುದ್ಧ ದೂರು ನೀಡಿದ್ದರು.

ಈ ವಿಚಾರದಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಆದರೆ ಪ್ರಿಯಾ ಮಣಿ ದಂಪತಿಗಳು ಸುಖವಾಗಿ ಸಂಸಾರ ಮಾಡುತ್ತಿದ್ದರೂ ಕೂಡ ಟ್ರೋಲಿಗರು ಮಾತ್ರ ಇವರನ್ನು ಬಿಡುವಂತೆ ಕಾಣಲ್ಲ. ಇವರಿಬ್ಬರ ದಾಂಪತ್ಯ ಜೀವನ ಸರಿಯಿಲ್ಲ ಎನ್ನುವ ಸುದ್ದಿಯೊಂದು ಹರಿದಾಡಿದ್ದು, ಈ ಬಗ್ಗೆ ನಟಿಯೂ ಖಡಕ್ ಆಗಿ ಉತ್ತರ ನೀಡಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ನಟಿ ಪ್ರಿಯಾಮಣಿ,”ನಾನು ಪ್ರೀತಿಸಿ ಮದುವೆ ಆಗಿದ್ದು ತಪ್ಪಾ? ಎಲ್ಲಾ ಮುಸ್ಲಿಮರು ಐ-ಸಿಸ್ ಅಲ್ಲ. ನನ್ನನ್ನು ನೋಡಿ ದೇವತೆ ಹಾಗೆ, ಹೀಗೆ ಎನ್ನುತ್ತಾರೆ, ಆದರೆ ನಾನು ಪ್ರೀತಿಸಿದವರನ್ನು ಮದುವೆಯಾದರೆ ಟ್ರೋಲ್​ (Troll) ಮಾಡುತ್ತಾರೆ. ಇದು ನನಗೆ ತುಂಬಾ ಬೇಸರವಾಗುತ್ತಿದೆ. ನನ್ನ ಪತಿ ಮುಸ್ತಾಫಾ ರಾಜಾ ಬೇರೆ ಧರ್ಮದವರಾದರೆ (Religion) ಏನು? ಇದರಲ್ಲಿ ತಪ್ಪೇನಿದೆ? ಎಲ್ಲಾ ಮುಸ್ಲಿಮರು ಐ-ಸಿಸ್ ಅಲ್ಲ, ಎಲ್ಲರೂ ಲವ್ ಜಿ-ಹಾದ್ಮಾ ಡ್ತಾರೆ ಅಂತಲ್ಲ. ಸ್ವಲ್ಪ ಪ್ರಜ್ಞಾವಂತರಾಗಿ ಯೋಚಿಸಿ ಎಂದಿರುವ ಪ್ರಿಯಾಮಣಿ, ಹಿಂದೂ-ಮುಸ್ಲಿಂ ಭಾಯಿ ಭಾಯಿ ಅನ್ನೋದಿಲ್ವಾ, ಅದ್ಯಾಕೆ ಅರ್ಥವಾಗುವುದಿಲ್ಲ” ಎಂದಿದ್ದಾರೆ.

“ಭಾರತ ಜಾತ್ಯಾತೀತ ದೇಶ. ಹಿಂದೂ, ಮುಸ್ಲಿಂ, ಸಿಖ್ಖರು ಎಲ್ಲರೂ ಭಾಯಿ ಭಾಯಿ ಅಂತ ಅದಕ್ಕೇ ಹೇಳುವುದು. ಸುಮ್ಮನೇ ಮುಸ್ಲಿಂರನ್ನು ಮದ್ವೆಯಾದ ಮಾತ್ರಕ್ಕೆ ಹಾಗೆ ಹೀಗೆ ಹೇಳುವುದನ್ನು ನಿಲ್ಲಿಸಿ. ಇದು ನನ್ನ ಜೀವನ. ನನಗೆ ಯಾರು ಬೇಕೋ ಅವರೊಟ್ಟಿಗೆ ನನ್ನ ಮುಂದಿನ ಜೀವನ ಕಳೆಯುತ್ತೇನೆ. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿ-ಹಾದಿಗಳಾಗಿ ಹುಟ್ತಾರೆ, ಇದು ಲವ್‌ ಜಿ-ಹಾದ್ ಅಂತೆಲ್ಲಾ ಅಂದರು. ಹೀಗೆ ಹೇಳಲು ನಿಮಗೆ ಹೇಗೆ ಮನಸ್ಸು ಬರುತ್ತದೆ? ನನ್ನ ಮಕ್ಕಳೇನೂ ಜಿ-ಹಾದಿಗಳಾಗಿ ಹುಟ್ಟುವುದಿಲ್ಲ” ಎಂದಿದ್ದಾರೆ ನಟಿ.

ನಟಿ ಪ್ರಿಯಾಮಣಿ ಈಗಾಗಲೇ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಹೀಗಾಗಿ ಟ್ರೋಲ್ ಬಗ್ಗೆ ಮಾತನಾಡಿರುವ ನಟಿ, “ಟ್ರೋಲ್‌ಗಳ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಳ್ಳುವುದಿಲ್ಲ. ನಾವು ಅದಕ್ಕೆ ಹೆಚ್ಚು ಗಮನ ಕೊಟ್ಟು ಪ್ರತಿಕ್ರಿಯಿಸಿದರೆ ಮತ್ತಷ್ಟು ಹೆಚ್ಚಾಗುತ್ತದೆ. ಬಾಡಿ ಶೇ-ಮಿಂಗ್ ಕೂಡ ಮಾಡಲಾಗುತ್ತಿದೆ. ಈ ಹಂತದಲ್ಲಿ ನಾನು ಸಣ್ಣ ಆಗಿದ್ದು ನೋಡಿ ಕೆಲವರು ಕಾಮೆಂಟ್ ಮಾಡ್ತಾರೆ. ಬರೀ ಬಾಡಿ ಶೇಮಿಂಗ್ ಅಲ್ಲ, ನಾನು ಮದುವೆ ಆದಾಗ ಬಹಳ ಟ್ರೋಲ್ ಮಾಡಿದ್ದರು. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿ-ಹಾದಿಗಳಾಗಿ ಹುಟ್ತಾರೆ, ಇದು ಲವ್‌ ಜಿ-ಹಾದ್ ಅಂತೆಲ್ಲಾ ಅಂದರು” ಎಂದು ತಮ್ಮ ನೋವನ್ನು ಹೊರಗೆ ಹಾಕಿದ್ದಾರೆ.

Leave a Reply

Your email address will not be published. Required fields are marked *