ಕಣ್ಸನ್ನೆ ಮೂಲಕವೇ ಒಂದು ಕ್ಷಣ ಎಲ್ಲರ ಗಮನ ಸೆಳೆದಿದ್ದ ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Variyar) ಯಾರಿಗೆ ತಾನೇ ಗೊತ್ತಿರದೇ ಇರಲು ಸಾಧ್ಯ ಹೇಳಿ?. ತನ್ನ ಕಣ್ಣಿನ ಸನ್ನೆಯಲ್ಲಿ ಅನೇಕ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಮೊದಲ ಸಿನಿಮಾದಲ್ಲಿಯೇ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಗಳಿಸಿಕೊಂಡರು. ಇತ್ತೀಚೆಗಂತೂ ಪ್ರಿಯಾ ವಾರಿಯರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ತನ್ನ ಫೋಟೋಗಳ ಮೂಲಕ ಪಡ್ಡೆ ಹೈಕಳ ನಿದ್ದೆ ಕದಿಯುತ್ತಿರುತ್ತಾರೆ.
ಸದ್ಯಕ್ಕೆ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಥೈಲ್ಯಾಂಡ್ (Thailand) ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ವೇಕೇಷನ್ ಎಂಜಾಯ್ ಮಾಡುತ್ತಿರುವ ಸಮುದ್ರದಲ್ಲಿ ಬಿಕಿನಿ ಧರಿಸಿ ಹಾಟ್ ಪೋಸ್ ಕೊಟ್ಟಿದ್ದು ಪಡ್ಡೆ ಹೈಕಳ ನಿದ್ದೆಯನ್ನು ಕದಿಯುವಂತೆ ಮಾಡಿದೆ. ಸ್ನೇಹಿತರೊಂದಿಗೆ ಟ್ರಿಪ್ ಎಂಜಾಯ್ ಮಾಡುತ್ತಾ ಕೆಲವೊಂದು ಪೊಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಮುದ್ರದಲ್ಲಿ ಹಳದಿ ಬಣ್ಣದ ಬಿಕಿನಿಯನ್ನು ಧರಿಸಿ ಹಾಟ್ ಆಗಿಯೇ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಹಾಟ್ ಬಾಂಬ್ ಎಂದರೆ ಇನ್ನು ಕೆಲವರು ಪಕ್ಕಾ ಮೆಟಿರೀಯಲ್ ಎಂದಿದ್ದಾರೆ. ಇಲ್ಲೊಬ್ಬ ಸಿನಿರಂಗದಲ್ಲಿ ಬೆಳೆಯಲು ಅಷ್ಟು ಮಾತ್ರ ಸ್ಕಿನ್ ಶೋ ಮಾಡಲೇಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾನೆ. ಒಟ್ಟಿನಲ್ಲಿ ಕಣ್ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಫೋಟೋಗೆ ಹೀಗೆ ಹಲವು ಕಾಮೆಂಟ್ ಗಳು ಬಂದಿವೆ.

ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂ (Malayalam) ಚಿತ್ರರಂಗದ ಖ್ಯಾತ ನಟಿಯಾಗಿದ್ದಾರೆ. ಒಂದೇ ಒಂದು ಸಿನಿಮಾದ ಮೂಲಕ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದು, ಸದ್ಯಕ್ಕೆ ಹಿಂದಿ (Hindi) ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಮಲಯಾಳಂನ `ಒರು ಅದಾರ್ ಲವ್’ (Oru Adaar Love) ಚಿತ್ರದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಚೆಲುವೆ ಎಲ್ಲರ ಮನಸ್ಸು ಗೆದ್ದು ಕೊಂಡರು.
ಕನ್ನಡದಲ್ಲಿ `ಒರು ಅದಾರ್ ಲವ್’ ಚಿತ್ರದ ಡಬ್ ಅವತರಣಿಕೆ `ಕಿರಿಕ್ ಲವ್ ಸ್ಟೋರಿ’ (Kirik Love Story) ಸಿನಿಮಾವು ತೆರೆ ಕಂಡಿತ್ತು. ಈ ಸಿನಿಮಾದ ಬಳಿಕ ಪ್ರಿಯಾ ಪ್ರಕಾಶ್ ವಾರಿಯರ್ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿದ್ದರು. ಆದಾದ ಬಳಿಕ ಮಲಯಾಳಂ ಮಾತ್ರವಲ್ಲದೇ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡು ತೆಲುಗು, ಹಿಂದಿ, ತಮಿಳು, ಕನ್ನಡದಲ್ಲಿ ಬ್ಯುಸಿಯಾಗಿದ್ದಾರೆ.
ಈಗಾಗಲೇ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಬಾಲಿವುಡ್ ನಲ್ಲಿ ನಾಲ್ಕು ಸಿನಿಮಾಗಳು, ಕನ್ನಡದಲ್ಲಿ ಒಂದು ಸಿನಿಮಾ ಹಾಗೂ ಮಲಯಾಳಂನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ (Pavan Kalyan) ರವರ ಬ್ರೋ (Bro) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ನಟನೆಯ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದಾರೆ.