ಪತಿ ಸಿದ್ದು ಜೊತೆಗಿನ ಖಾಸಗಿ ಫೋಟೋವೊಂದನ್ನು ಶೇರ್ ಮಾಡಿಕೊಂಡ ನಟಿ ಪ್ರಿಯಾ ಜೆ ಆಚಾರ್!! ಫೋಟೋ ನೋಡಿ ಬೆರಗಾದ ಕನ್ನಡ ಜನತೆ!!

ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಧಾರಾವಾಹಿಯೆಂದರೆ ಅದುವೇ ಗಟ್ಟಿಮೇಳ'(Gattimela). ಗಟ್ಟಿಮೇಳ ಧಾರಾವಾಹಿಯಿಂದ ಫೇಮಸ್ ಆಗಿರುವ ನಟಿ ಪ್ರಿಯಾ ಜೆ ಆಚಾರ್ (Priya J Achar) ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಶೂಟ್ ಮಾಡಿಸಿಕೊಳ್ಳುವ ನಟಿ ಪ್ರಿಯಾ ಆಚಾರ್ ಒಂದಿಲ್ಲ ಒಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ.

ಪ್ರಿಯಾ ಜೆ ಆಚಾರ್ ಅವರದ್ದು ಯೂಟ್ಯೂಬ್ ಚಾನೆಲ್ (YouTube Chanel) ಇದ್ದು, ಇದರಲ್ಲಿ ಬಿಡುವು ಸಿಕ್ಕಾಗಲೆಲ್ಲಾ ವಿಡಿಯೋ ಮಾಡಿ ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳನ್ನು ಖುಷಿ ಪಡಿಸಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ನಟಿ ಪ್ರಿಯಾ ಆಚಾರ್ ಅವರು ವಿಶೇಷವಾದ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿ ಪ್ರಿಯಾ ಆಚಾರ್ ಅವರು ಪತಿ ಸಿದ್ದುಮೂಲಿಮನೆರವರ ಜೊತೆಗಿನ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ಫೋಟೋದ ಜೊತೆಗೆ, ‘ನೀನೇ ನಿನ್ನ ಜಗತ್ತು, ಎಂದಿಗೂ ಇರಲಿ ನಿನ್ನ ಸಿಹಿ ಮುತ್ತು’ ಎಂದು ಬರೆದುಕೊಂಡಿದ್ದಾರೆ. ಅದಲ್ಲದೇ ಒಂದು ಫೋಟೋದಲ್ಲಿ ನಟಿ ಪ್ರಿಯಾ ಪತಿ ಸಿದ್ದುಗೆ ಮುತ್ತುಕೊಟ್ಟರೆ, ಮತ್ತೊಂದು ಫೋಟೋದಲ್ಲಿ ಸಿದ್ದು ಪ್ರಿಯಾರವರಿಗೆ ಮುತ್ತು ನೀಡಿದ್ದಾರೆ. ಈ ಫೋಟೋಗೆ ಮೂವತ್ತೇಳು ಸಾವಿರಕ್ಕೂ ಅಧಿಕ ವ್ಯೂಸ್ ಬಂದಿದೆ. ಈ ಫೋಟೋದಲ್ಲಿ ಪ್ರಿಯಾ ಹಾಗೂ ಸಿದ್ಧು ಸೀರೆ ಹಾಗೂ ಪಂಚೆ ಧರಿಸಿದ್ದು ಪಕ್ಕಾ ಟ್ರಡಿಷನಲ್ ಲುಕ್ ನಲ್ಲಿ ಗಮನ ಸೆಳೆದಿದ್ದಾರೆ.

ನಟಿ ಪ್ರಿಯಾ ಆಚಾರ್ ಅವರು ದಾವಣಗೆರೆಯವರಾಗಿದ್ದು, ಬಿಸಿಎ ಪದವಿ ಪೂರ್ಣ ಗೊಳಿಸಿದ್ದಾರೆ. ‘ಗಟ್ಟಿಮೇಳ’ ಧಾರಾವಾಹಿ ಆರಂಭವಾದ ಸಮಯದಲ್ಲಿ ಪ್ರಿಯಾ ಆಚಾರ್ ಅವರು ಓದು ಹಾಗೂ ನಟನೆ ಎರಡನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದರು. ಪ್ರಿಯಾ ಆಚಾರ್ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಈಗಾಗಲೇ ಪ್ರಿಯಾ ಜೆ ಆಚಾರ್ ಅವರು ‘ಧಮಾಕಾ’ (Dhamaka) ಸಿನಿಮಾದಲ್ಲಿ ನಟಿಸಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಪ್ರಿಯಾ ಹಾಗೂ ಸಿದ್ದು ಮೂಲಿಮನಿ ದುಬೈ ಪ್ರವಾಸ (Dubai Trip) ಕೈಗೊಂಡಿದ್ದರು. ಈ ವೇಳೆಯಲ್ಲಿ ದುಬೈಗೆ ಹಾರುವುದಕ್ಕಿಂತ ಮುನ್ನ ಬೆಂಗಳೂರಿನ ಅಂತರಾಷ್ಟ್ರೀಯ ಏರ್‌ಪೋರ್ಟ್‌ (Banglore International Airport) ನಿಂದ ಪ್ರವಾಸದ ಕ್ಷಣಗಳನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದರು. ಪತಿ ಸಿದ್ದು ಮೂಲಿಮನಿ ಹಾಗೂ ಕುಟುಂಬದೊಂದಿಗೆ ದುಬೈ ಪ್ರವಾಸ ಮಾಡಿದ್ದಕ್ಕೆ ಫೋಟೋಗಳು ಸಾಕ್ಷಿಯಾಗಿತ್ತು. ದುಬೈನಲ್ಲಿ ಸುತ್ತಿದ್ದ ಪ್ರಿಯಾ ಮತ್ತು ಸಿದ್ದುರವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು.

ಅದಿತಿ ಅಲಿಯಾಸ್ ನಟಿ ಪ್ರಿಯಾ ಜೆ ಆಚಾರ್ (Priya J Achar) ಹಾಗೂ ಪ್ರೀತು ಅರ್ಥಾತ್​ ಸಿದ್ದು ಮೂಲಿಮನಿ (Siddu Moolimani) ದಾಂಪತ್ಯ ಬದುಕಿಗೆ ಕಾಲಿಟ್ಟು ಐದು ತಿಂಗಳಷ್ಟೇ ಕಳೆದಿದೆ. ಕಳೆದ ಫೆ.12ರಂದು ಬೆಂಗಳೂರಿನಲ್ಲಿ ಮದುವೆ ಮಾಡಿಕೊಂಡಿತ್ತು ಈ ಜೋಡಿ. ಆದಾದ ಬಳಿಕ , ಅದೇ 14ರಂದು ದಾವಣಗೆರೆಯಲ್ಲಿ ಆರತಕ್ಷತೆಯನ್ನು ಹಮ್ಮಿಕೊಂಡಿತ್ತು. ತಮ್ಮ ಎರಡು ಮೂರು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿತ್ತು. ಸದ್ಯಕ್ಕೆ ಹೊಸ ಜೀವನಕ್ಕೆ ಕಾಲಿಟ್ಟು ಹೊಸ ಲೈಫ್​ ಎಂಜಾಯ್​ ಮಾಡುತ್ತಿದ್ದು,ಅದರ ಜೊತೆಗೆ ಕಿರುತೆರೆ ಲೋಕದಲ್ಲಿಯು ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *