ಗಟ್ಟಿಮೇಳ’ ಧಾರಾವಾಹಿ ನೋಡಿದವರಿಗೆ ನಟಿ ಪ್ರಿಯಾ ಜೆ ಆಚಾರ್ (Priya J Achar) ಚೆನ್ನಾಗಿ ಪರಿಚಯ ಇದ್ದೆ ಇರುತ್ತದೆ. ಈ ಧಾರಾವಾಹಿಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದಾರೆ. ತನ್ನ ನಗು ಹಾಗೂ ನಟನೆಯಿಂದ ಮೋಡಿ ಮಾಡಿರುವ ಪ್ರಿಯಾ ಜೆ ಆಚಾರ್ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವಿದೆ. ಸ್ಟಾರ್ ಸುವರ್ಣದಲ್ಲಿ ‘ಕಾವೇರಿ ಕನ್ನಡ ಮೀಡಿಯಂ’ (Kaveri Kannada Medium)ಯಲ್ಲಿ ನಾಯಕಿ ಕಾವೇರಿಯಾಗಿ ಪ್ರಿಯಾ ಜೆ ಆಚಾರ್ ಕಾಣಿಸಿಕೊಂಡಿದ್ದು, ಈ ಧಾರಾವಾಹಿಯು ಸದ್ಯದಲ್ಲೇ ಆರಂಭವಾಗಲಿದ್ದು, ನಟಿಯು ಸ್ಮಾಲ್ ಸ್ಕ್ರೀನ್ ಮೇಲೆ ಮಿಂಚಲಿದ್ದಾರೆ.
ರೀಲ್ಸ್ (Reels) ಮೂಲಕ ಎಲ್ಲರ ಮನಸ್ಸು ಗೆದ್ದುಕೊಂಡಿರುವ ಪ್ರಿಯಾ ಜೆ ಆಚಾರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ವೈಯಕ್ತಿಕ ಬದುಕಿನ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಈ ನಟಿ ಕನ್ನಡ ಕಿರುತೆರೆಯ ಜನಪ್ರಿಯ ನಟ ಸಿದ್ದು ಮೂಲಿಮನಿ (Siddhu Mulimane) ಯವರನ್ನು ವಿವಾಹವಾಗಿದ್ದು, ಖುಷಿಯಿಂದ ಸಂಸಾರ ಮಾಡುತ್ತಿದ್ದಾರೆ.

ಅದಲ್ಲದೇ ಇದೀಗ ಪ್ರಿಯಾ ಜೆ ಆಚಾರ್ ಅವರು ತಮ್ಮ ಹುಟ್ಟುಹಬ್ಬವನ್ನು ಪತಿ ಸಿದ್ಧುಮೂಲಿಮನೆಯವರ ಜೊತೆಗೆ ಸೆಲೆಬ್ರೇಶನ್ ಮಾಡಿದ್ದಾರೆ. ಈ ಬರ್ತ್ಡೇ ಸೆಲೆಬ್ರೇಶನ್ ಫೋಟೋ ದಲ್ಲಿ ಕಿರುತೆರೆ ನಟಿ ಸಿತಾರ ಕೂಡ ಜೊತೆಯಾಗಿರುವುದನ್ನು ಕಾಣಬಹುದು. ನಟಿ ಪ್ರಿಯಾ ಜೆ ಆಚಾರ್ ಅವರ ಬರ್ತ್ಡೇ ಸೆಲೆಬ್ರೇಶನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ನೋಡಿ ಖುಷಿ ಪಡುತ್ತಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಪ್ರಿಯಾ ಹಾಗೂ ಸಿದ್ದು ಮೂಲಿಮನಿ ದುಬೈ ಪ್ರವಾಸ (Dubai Trip) ಎಂಜಾಯ್ ಮಾಡಿದ್ದರು. ದುಬೈಗೆ ಹಾರುವುದಕ್ಕಿಂತ ಮುನ್ನ ಬೆಂಗಳೂರಿನ ಅಂತರಾಷ್ಟ್ರೀಯ ಏರ್‌ಪೋರ್ಟ್ (Banglore International Airport) ನಿಂದ ಪ್ರವಾಸದ ಕ್ಷಣಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಶುರು ಮಾಡಿದ್ದರು. ದುಬೈ ಪ್ರವಾಸದ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗಟ್ಟಿಮೇಳ’ (Gattimela) ದಲ್ಲಿ ನಾಯಕಿ ಅಮೂಲ್ಯ ತಂಗಿ ಅದಿತಿಯಾಗಿ ಪ್ರೇಕ್ಷಕ ವರ್ಗಕ್ಕೆ ಹತ್ತಿರವಾಗಿದ್ದಾರೆ. ತೆಲುಗಿನ ‘ಆನಂದರಾಗಂ’ (Anandaragam) ಧಾರಾವಾಹಿಯಲ್ಲಿ ನಾಯಕಿ ಐಶ್ವರ್ಯಾಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್’ (Dance Karnataka Dance) ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಧಮಾಕಾ (Dhamaka) ದಲ್ಲಿ ನಟಿಸುವ ಮೂಲಕ ಹಿರಿತೆರೆಯಲ್ಲಿಯೂ ಕಮಾಲ್ ಮಾಡಿದ್ದಾರೆ ಪ್ರಿಯಾ. ಹೀಗೆ ಅವಕಾಶಗಳನ್ನು ಗಿಟ್ಟಿಸಿಕೊಂಡ ಪ್ರಿಯಾ ಜೆ ಆಚಾರ್ ಗೆ ಇನ್ನಷ್ಟು ಅವಕಾಶಗಳು ಲಭಿಸಲಿ ಎನ್ನುವುದೇ ಆಶಯ.

