ಖ್ಯಾತ ನಟಿ ವಿನಯ ಪ್ರಸಾದ್ ಪುತ್ರಿ ಪ್ರಥಮರವರ ಮುದ್ದಿನ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಫೋಟೋ

ಕನ್ನಡ ಕಿರುತೆರೆ ಲೋಕವು ಅದೆಷ್ಟೋ ಪ್ರತಿಭಾವಂತ ಕಲಾವಿದರಿಗೆ ಮಣೆ ಹಾಕಿದೆ. ಈಗಾಗಲೇ ಕನ್ನಡ ಕಿರುತೆರೆಲೋಕದಲ್ಲಿ ತಮ್ಮ ನಟನಾ ಕೌಶಲ್ಯದಿಂದಲೇ ಅಭಿಮಾನಿಗಳ ಮನಸ್ಸು ಗೆದ್ದುಕೊಂಡಿರುವ ನಟ ನಟಿಯರು ಇದ್ದಾರೆ ಅಂತಹವರಲ್ಲಿ ನಟಿ ಪ್ರಥಮ ಪ್ರಸಾದ್ (Prathama Prasad) ಕೂಡ ಒಬ್ಬರಾಗಿದ್ದಾರೆ. ಕಣ್ಣಿನಲ್ಲೇ ಭಾವನೆಗಳನ್ನು ಹೊರಹಾಕುವ ನಟಿ ಪ್ರಥಮರವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಕಳೆದ 10 ವರ್ಷಗಳಿಗೂ ಹೆಚ್ಚು ಸಮಯದಿಂದ ಕಿರುತೆರೆ (Small Screen) ಹಾಗೂ ಬೆಳ್ಳಿ ತೆರೆಯಲ್ಲಿ ತೊಡಗಿಸಿಕೊಂಡಿದ್ದು ಧಾರಾವಾಹಿ ಹಾಗೂ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಧಾರಾವಾಹಿ ಹಾಗೂ ಸಿನಿಮಾದಲ್ಲಿ ನಟಿಸಿರುವ ನಟಿ ಪ್ರಥಮ ಪ್ರಸಾದ್ ಅವರು ನಟಿ ವಿನಯಾ ಪ್ರಸಾದ್ (Vinaya Prasad) ಅವರ ಮಗಳು. ಈಗಾಗಲೇ ಪ್ರಥಮಾ ಪ್ರಸಾದ್ ಅವರು ಸೂರ್ಯ ರಾವ್ (Surya Rao) ಅವರನ್ನು ಮದುವೆಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿರುವ ಈ ಜೋಡಿಗೆ ಮುದ್ದಾದ ಹೆಣ್ಣು ಮಗುವಿದೆ. ನಟಿ ಪ್ರಥಮ್ ಪ್ರಸಾದ್ ಅವರು ತನ್ನ ಪತಿ ಸೂರ್ಯ ರಾವ್ ಅವರ ಜೊತೆಗಿನ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ದಂಪತಿಗಳು ಮುದ್ದಾಗಿ ಕಾಣಿಸಿಕೊಂಡಿದ್ದು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರಥಮಾ ಅವರು ಕೆಲವು ಶಾಕಿಂಗ್ ವಿಚಾರವನ್ನು ರಿವೀಲ್ ಮಾಡಿದ್ದರು. ತನ್ನ ತಾಯಿಯ ಬಗ್ಗೆ ಮಾತನಾಡಿರುವ ನಟಿ ಪ್ರಥಮ, ಅಮ್ಮನಿಗೆ ದುಡಿಯುವ ಅನಿವಾರ್ಯತೆ ತುಂಬಾ ಇತ್ತು. ಅದಕ್ಕೆ ನನ್ನನ್ನು ಮನೆಯಲ್ಲಿ ಬಿಟ್ಟು ಹೋಗ್ತಾ ಇದ್ರು. ಅವರು ಕಾಲ್ ಮಾಡಿದಾಗ ನಾನು ಬೇಸರ ಮಾಡಿಕೊಂಡ್ರೆ ಅವರು ಬೇಜಾರು ಮಾಡಿಕೊಳ್ತಾರೆ ಅಂತ ನಾನು ಖುಷಿಯಾಗಿ ಮಾತನಾಡ್ತಿದ್ದೆ. ನಾನು ಶಾಲೆಗೆ ಹೋಗುವಾಗ ನಿಮ್ಮ ಅಪ್ಪ ಸತ್ತರು, ನಿಮ್ಮ ಅಮ್ಮ ನಿನ್ನ ಬಿಟ್ಟು ಶೂಟಿಂಗ್ ಹೋಗ್ತಾರೆ ಎಂದು ಎಲ್ಲರು ಕೊಂಕು ಮಾತನಾಡ್ತಾ ಇದ್ರು. ನಾನು ಅವನ್ನು ಕೇಳಿಸಿಕೊಂಡೇ ಸ್ಟ್ರಾಂಗ್ ಆಗಿದ್ದು” ಎಂದಿದ್ದರು.

ನೆಗೆಟಿವ್ ಕಾಮೆಂಟ್‍ಗಳನ್ನು ಎದುರಿಸುವ ಧೈರ್ಯ ಬೇಕಿತ್ತು. ಅಮ್ಮ ರೋಬೋಟ್ ತರ ಕೆಲಸ ಮಾಡಬೇಕು ಎನ್ನುತ್ತಿದ್ದಳು. ನನ್ನನ್ನು ಮನೆಯಲ್ಲಿ ಬಿಟ್ಟು ಹೋಗುವಾಗ ಸಂಕಟ ಪಡುತ್ತಿದ್ದಳು. ಈ ಸಮಾಜದಲ್ಲಿ ದೊಡ್ಡವರು ಅನಿಸಿಕೊಂಡಿರುವ ಹುಳುಗಳು ತಾಯಿಗೆ ಬೆದರಿಕೆ ಹಾಕುತ್ತಿದ್ದರು. ನಮ್ಮ ಬೇಡಿಕೆಯನ್ನು ಈಡೇರಿಸದೇ ಇದ್ದರೆ ನಿನ್ನ ಮಗಳನ್ನು ಕೊಲೆ ಮಾಡುವೆವು ಎಂದು’ ಹೇಳ್ತಿದ್ರಂತೆ. ನನ್ನ ತಾಯಿ ಬೆಂಕಿ ರೀತಿ, ಆಕೆಯನ್ನು ಯಾರು ಮುಟ್ಟುಲು ಸಹ ಆಗುತ್ತಿರಲಿಲ್ಲ. ಎಲ್ಲಾ ಕಷ್ಟಗಳನ್ನು ದಾಟಿಕೊಂಡು ನನ್ನ ತಾಯಿ ನನ್ನನ್ನು ಸಾಕಿದ್ದಾಳೆ..ಅಮ್ಮ ಯಾವತ್ತೂ ಸೆಟ್ ನಲ್ಲಿ ಕಣ್ಣೀರು ಹಾಕಿಲ್ಲ. ತನ್ನ ದೌರ್ಬಲ್ಯ ತೋರಿಸಿಕೊಂಡಿಲ್ಲ. ನಾನೇ ಅವಳ ಶಕ್ತಿ ಮತ್ತು ದೌರ್ಬಲ್ಯ’ ಎಂದು ಕೆಲವು ವಿಚಾರವನ್ನು ರಿವೀಲ್ ಮಾಡಿದ್ದರು.

ನಟಿ ಪ್ರಥಮ್ ಅವರ ಪತಿ ಸೂರ್ಯ ರಾವ್ ಅವರ ಹಿನ್ನಲೆಯನ್ನು ಗಮನಿಸುವುದಾದರೆ, ಕ್ಲಾಸಿಕಲ್ ಡಾನ್ಸರ್ (Classical Dancer) ಆಗಿ ಖ್ಯಾತಿ ಗಳಿಸಿಕೊಂಡಿದ್ದಾರೆ. ಮಹಾಮಾಯಾ ಆರ್ಟಿಸ್ಟ್ ಫೌಂಡೇಶನ್‌ನ ನಿರ್ದೇಶಕರಾಗಿ ಸೂರ್ಯ ಕೆಲಸ ಮಾಡುತ್ತಿದ್ದಾರೆ. ಇತ್ತ ನಟಿ ಪ್ರಥಮರವರು ವೈಯುಕ್ತಿಕ ಜೀವನ ಹಾಗೂ ವೃತ್ತಿ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ.

ನಟಿ ಪ್ರಥಮರವರು ಮಾಯಾ ರಾವ್ ಅವರ ಬಳಿ ಪ್ರಥಮಾ ಕಥಕ್ (Kathak) ಅಭ್ಯಾಸ ಮಾಡಿದ್ದಾರೆ. ಡಾನ್ಸ್ ಜೊತೆಗೆ ನಟನೆಯನ್ನು ಬ್ಯಾಲೆನ್ಸ್ ಮಾಡುತ್ತಾ ಇರುವ ಇವರು ಎಂಎಂಸಿಎಚ್ (MMCH) ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಲಗ್ಗೆ ಇಟ್ಟರು. ಈಗಾಗಲೇ ಅಮ್ನೋರು (Amnoru), ದೇವಿ (Devi), ಮಹಾದೇವಿ (Mahadevi), ಬ್ರಹ್ಮಗಂಟು (Brahmagantu) ಧಾರಾವಾಹಿಯಲ್ಲಿ ನಟಿಸಿದ್ದಾರೆ. ‘ಚೌಕಾಬಾರ’ (Chowkaabara) ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *