ಖ್ಯಾತ ನಟಿ ಪೂಜಾ ಹೆಗ್ಡೆಯವರ ಸುಂದರವಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಅಪರೂಪದ ಫೋಟೋ

ಕರಾವಳಿಯ ಬೆಡಗಿಯರು ಸಿನಿಮಾರಂಗದಲ್ಲಿ ಗುರುತಿಸಿಕೊಂಡು ಖ್ಯಾತಿ ಗಳಿಸಿಕೊಂಡಿದ್ದಾರೆ. ಈ ಸಾಲಿಗೆನಟಿ ಪೂಜಾ ಹೆಗ್ಡೆ (Pooja Hegde) ಕೂಡ ಸೇರಿಕೊಳ್ಳುತ್ತಾರೆ. ತೆಲುಗು (Telugu), ಹಿಂದಿ (Hindi) ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದು, ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ನಟಿ ಪೂಜಾ ಹೆಗ್ಡೆಯವರ ಮುದ್ದಾದ ಕುಟುಂಬದ ಜೊತೆಗಿನ ಫೋಟೋವೊಂದು ವೈರಲ್ ಆಗಿವೆ.

ಸದ್ಯಕ್ಕೆ ವೈರಲ್ ಆಗಿರುವ ಫೋಟೋದಲ್ಲಿ ನಟಿ ಪೂಜಾ ಹೆಗ್ಡೆ ತಂದೆ ತಾಯಿ ಹಾಗೂ ಸಹೋದರನ ಜೊತೆಗೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಲೈಕ್ಸ್ ಗಳು ಬಂದಿವೆ. ನಟಿ ಪೂಜಾ ಹೆಗ್ಡೆಯವರಿಗೆ ಕಾಲೇಜು ದಿನಗಳಿಂದಾನೂ ಡ್ಯಾನ್ಸ್ ಹಾಗೂ ಮಾಡೆಲಿಂಗ್ ನಲ್ಲಿ ಆಸಕ್ತಿ ಹೊಂದಿದ್ದರು. 2009 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಸುತ್ತಿನಲ್ಲಿಯೇ ಹೊರ ಬಂದಿದ್ದರು.

2010 ರಲ್ಲಿ ಮಿಸ್ ಯೂನಿವರ್ಸ್ (Miss Universe) ನಲ್ಲಿ ಎರಡನೇ ಸ್ಥಾನ ಪಡೆದು ರನ್ನರ್ ಅಪ್ ಆದರು. ಆ ಬಳಿಕ ಪೂಜಾ ಹೆಗ್ಡೆ ಅವರಿಗೆ ತಮಿಳು ಚಿತ್ರದಲ್ಲಿ ನಟಿಸಲು ಅವಕಾಶವೊಂದು ಸಿಕ್ಕಿತು. ತಮಿಳು ನಿರ್ದೇಶಕ ಮಿಸ್ಕಿನ್ ಅವರ ಮುಗಮೂಡಿ (Mugamudi) ಚಿತ್ರದಲ್ಲಿ ನಟ ಜೀವಾ ಅವರ ಜೊತೆಗೆ ನಟಿಸಿದ್ದರು. ಆ ಬಳಿಕ ನಟಿ ಪೂಜಾ ಹೆಗ್ಡೆ ಯವರಿಗೆ ತೆಲುಗಿನ ಓಕಾ ಲೈಲಾ ಕೋಸಮ್ (Oka Laila Kosam) ಎಂಬ ಚಿತ್ರದಲ್ಲಿ ನಟಿಸಲು ಆಫರ್ ಬಂದಿತು. ಹೀಗೆ ಸಿಕ್ಕ ಅವಕಾಶಗಳನ್ನು ತನ್ನದಾಗಿಸಿಕೊಂಡ ನಟಿ ಪೂಜಾ ಬ್ಯುಸಿಯಾದರು.

ಆ ಬಳಿಕ ಬಾಲಿವುಡ್ ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟರು. ಈಗಾಗಲೇ ಪ್ರಭಾಸ್ (Prabhas) ಅವರ ರಾಧೇಶ್ಯಾಮ್ (Radhe Shyam), ವಿಜಯ್​ (Vijay) ಅವರ ಬೀಸ್ಟ್​ (Beast), ಚಿರು (Chiru) ಅವರ ಆಚಾರ್ಯ (Acharya), ಸರ್ಕಸ್ (Circus), ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್ (Kisi Ka Bhay Ki Jan) ಸಿನಿಮಾಗಳು ಹೇಳಿಕೊಳ್ಳುವಷ್ಟೇನು ಯಶಸ್ಸು ಕಂಡಿಲ್ಲ. ಆದರೆ ನಟಿಗೆ ಅವಕಾಶಗಳು ಬರುತ್ತಿವೆ. ಇತ್ತೀಚೆಗಷ್ಟೇ ಕಿಸಿ ಕಾ ಭಾಯ್ ಸಿಕಿ ಕಿ ಜಾನ್(Kisi Kaa Bhay Kisi Kaa Jan) ಸಿನಿಮಾ ತೆರೆ ಕಂಡಿತ್ತು. ಸೂಪರ್​ಸ್ಟಾರ್ ಸಲ್ಮಾನ್ ಖಾನ್ ಅವರ ಜೊತೆಗೆ ನಟಿ ಪೂಜಾ ಹೆಗ್ಡೆ ಜೊತೆ ತೆರೆ ಹಂಚಿಕೊಂಡಿದ್ದು ರೋಮ್ಯಾನ್ಸ್ ಕೂಡ ಮಾಡಿದ್ದರು.

ನಟಿ ಪೂಜಾ ಹೆಗ್ಡೆ ಮಾತನಾಡಿ, “ಇದು ಹೊಸ ವಿಚಾರವೇನಲ್ಲ. ಹಾಗೆಯೇ ಸಲ್ಮಾನ್ ಖಾನ್ ಜೊತೆ ರೊಮ್ಯಾನ್ಸ್ ಮಾಡಿದ ಮೊದಲ ಕಿರಿಯ ನಟಿ ನಾನಲ್ಲ. ಈ ಮುಂಚೆಯೇ ಬಹಳಷ್ಟು ಕಿರಿಯ ನಟಿಯರು ಸಲ್ಮಾನ್ ಖಾನ್ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ನನ್ನ ಪೋಷಕರು ನಾನು ಸಲ್ಮಾನ್ ಖಾನ್ ಅವರಂತಹ ಸೂಪರ್​ಸ್ಟಾರ್ ಜೊತೆ ನಟಿಸಿದ್ದೇನೆ ಎಂದು ತುಂಬಾ ಥ್ರಿಲ್ ಆಗಿದ್ದಾರೆ. ನನ್ನ ತಾಯಿ ಹಾಗೂ ತಂಗಿ ಸಲ್ಮಾನ್ ಖಾನ್ ಅವರ ದೊಡ್ಡ ಫ್ಯಾನ್ಸ್” ಎಂದಿದ್ದರು.

ಸದ್ಯಕ್ಕೆ ನಟಿ ಪೂಜಾ ಹೆಗ್ಡೆಯವರಿಗೆ ಅವಕಾಶಗಳು ಬರುತ್ತಿದ್ದು, ನಟ ರವಿ ತೇಜ (Ravi Teja) ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಗೋಪಿಚಂದ್ ಮಲಿನೇನಿ (Gopichand Malineni) ಜೊತೆ ರವಿತೇಜಾ ಸಿನಿಮಾ ಮಾಡಲು ಸಜ್ಜಾಗಿದ್ದು, ಚಿತ್ರದಲ್ಲಿ ರವಿತೇಜಾಗೆ ಜೋಡಿಯಾಗಿ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ .

Leave a Reply

Your email address will not be published. Required fields are marked *