ಮುಂಗಾರು ಮಳೆ ನಟಿ ಪೂಜಾ ಗಾಂಧಿ ಗೆ ಕನ್ನಡದ ಮೇಲೆ ಇರುವ ಅಭಿಮಾನ ಎಂತಹದ್ದು ನೋಡಿ ನಿಜಕ್ಕೂ ಗ್ರೇಟ್!!!

ಮಳೆ ಹುಡುಗಿ ಎಂದೇ ಖ್ಯಾತಿ ಗಳಿಸಿರುವ ನಟಿ ಪೂಜಾ ಗಾಂಧಿ (Pooja Gandhi) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಮುಂಗಾರು ಮಳೆ ಸಿನಿಮಾದ ಮೂಲಕ ಎಲ್ಲರ ಮನಸ್ಸು ಗೆದ್ದುಕೊಂಡ ಚೆಲುವೆಗೆ ಒಂದು ಕಾಲದಲ್ಲಿ ಕೈ ತುಂಬಾ ಆಫರ್ ಗಳಿದ್ದವು. ಆದರೆ ಇದೀಗ ಸ್ವಲ್ಪ ಮಟ್ಟಿಗೆ ಅವಕಾಶವಿಲ್ಲದೇ ಸಿನಿಮಾಲೋಕದಿಂದ ದೂರವಿದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.

ಬೆಂಗಾಲಿ ಬೆಡಗಿಯಾಗಿರುವ ನಟಿ ಪೂಜಾ ಗಾಂಧಿಯವರು ಕನ್ನಡವನ್ನು ಸಲೀಸಾಗಿ ಮಾತನಾಡುತ್ತಾರೆ. ಈಗಾಗಲೇ ಕನ್ನಡವನ್ನು ಕಲಿತಿದ್ದು ಗುರುಪೂರ್ಣಿಮೆಯಂದು ಕನ್ನಡದಲ್ಲಿ ಬರೆದಿರುವ ಪೋಸ್ಟ್ ಹಂಚಿಕೊಂಡಿದ್ದಾರೆ. “ಕಳೆದ ಒಂದು ವರ್ಷದಲ್ಲಿ ಕನ್ನಡ ಅಕ್ಷರಭ್ಯಾಸ ಮಾಡಿಸಿದ ಶ್ರೀಮತಿ ಜ್ಯೋತಿ ಸನತಕುಮಾ‌ರ್ ರವರಿಗೂ ಮತ್ತು ಕನ್ನಡ ಓದು-ಬರಹ ಕಲಿಸಿದ ಶ್ರೀಮತಿ ಜಯಶ್ರೀ ಯವರಿಗೆ, ಗುರುಪೂರ್ಣಿಮೆಯ ಈ ಶುಭದಿನದಲ್ಲಿ ನನ್ನ ಅನಂತ ಅನಂತ ನಮಸ್ಕಾರಗಳು” ಎಂದು ಬರೆದುಕೊಂಡು ಈ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಟಿ ಪೂಜಾ ಗಾಂಧಿ ಕನ್ನಡ (Kannada), ತಮಿಳು (Tamil), ಹಿಂದಿ (Hindi), ಮಲಯಾಳಂ (Malayalam) ಹಾಗೂ ಬೆಂಗಾಲಿ (Bengali) ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಅಕ್ಟೋಬರ್ 07, 1983 ರಲ್ಲಿ ಜನಿಸಿದರು. ಇವರು ಬಾಲ್ಯ ವಿದ್ಯಾಭ್ಯಾಸವೆಲ್ಲ ಮೀರತ್, ಸೋಫಿಯಾ ಕಾನ್ವೆಂಟ್ ಶಾಲ್ಲೆಯಲ್ಲಿ ಮುಗಿಸಿದ್ದರು. ಮುಂಗಾರು ಮಳೆ (Mungaru Male) ಸಿನಿಮಾದಲ್ಲಿ ಕಾಣಿಸಿಕೊಂಡ ಇವರ ಜನಪ್ರಿಯ ಹೆಚ್ಚಾಯಿತು.

ತದನಂತರದಲ್ಲಿ ಮಿಲನ, ಬುದ್ದಿವಂತ, ದಂಡುಪಾಳ್ಯ, ತಾಜ್ ಮಹಲ್ ಹೀಗೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆದರೆ ವರ್ಷ ಕಳೆಯುತ್ತಾ ಹೋದ ಹಾಗೆ ನಟಿ ಪೂಜಾ ಗಾಂಧಿಯವರು ಅವಕಾಶದಿಂದ ವಂಚಿತರಾದರು. ಸಿನಿಮಾರಂಗದಲ್ಲಿ ಅವಕಾಶಗಳು ಕಡಿಮೆಯಾದದ್ದಕ್ಕೆ ಕಾರಣ ನಟಿ ದಪ್ಪವಾದದ್ದು. 2018 ರಲ್ಲಿ ದಂಡುಪಾಳ್ಯ 2 (Dandu Panlya 2) ಸಿನಿಮಾದ ಮೂಲಕ ನಟಿ ಪೂಜಾ ಗಾಂಧಿ ಮತ್ತೆ ರೀ ಎಂಟ್ರಿ ಕೊಟ್ಟರು.

ಸಿನಿಮಾರಂಗದಲ್ಲಿ ಅವಕಾಶವಿಲ್ಲದೇ ಇದ್ದಾಗ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಆದರೆ ಇದೀಗ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಹೊಸ ಉದ್ಯಮ ಶುರು ಮಾಡಿದ್ದು, ಮೆಡಿಕಲ್ ಚೈನ್ ಸಪ್ಲೈ, ವೈದ್ಯಕೀಯ ಪರಿಕರಗಳ ಸರಬರಾಜುಗಳ ಮೇಲ್ವಿಚಾರಣೆಯನ್ನು ಅವರೇ ನೋಡಿಕೊಳ್ಳುತ್ತಿದ್ದು, ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *