ಪ್ರೀತಿಸಿದ ಹುಡುಗನ ಕೈ ಹಿಡಿಯುತ್ತಿರುವ ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ. ಯಾರು ಆ ಅದೃಷ್ಟವಂತ ಗೊತ್ತಾ?..

ಮುಂಗಾರು ಮಳೆ ಸಿನಿಮಾದ ಖ್ಯಾತಿಯ ಪೂಜಾ ಗಾಂಧಿ (Pooja Gandhi) ಯವರು ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ಈಗಾಗಲೇ ನಟಿ ಪೂಜಾ ಗಾಂಧಿಯವರ ಮದುವೆಯ ಸುದ್ದಿಯೊಂದು ಹರಿದಾಡುತ್ತಿದ್ದು, ಇದೀಗ ಪೂಜಾ ಗಾಂಧಿ ಮದುವೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ. ವಿಜಯ್ ಗೋರ್ಪಡೆ (Vijay Gorpade) ಎನ್ನುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮುಂಗಾರು ಮಳೆ ಖ್ಯಾತಿಯ ಪೂಜಾ ಗಾಂಧಿ ಮದುವೆಯಾಗುತ್ತಿರುವ ಹುಡುಗ ವಿಜಯ್ ಅವರ ಫೋಟೋ ಕೂಡ ವೈರಲ್ ಆಗುತ್ತಿದೆ. ಬೆಂಗಳೂರಿನ ಯಲಹಂಕ (Yalahanka) ದಲ್ಲಿ ಪೂಜಾ ಗಾಂಧಿ ಅವರ ವಿವಾಹ ನೆರವೇರಲಿದ್ದು, ಇದೇ ನವೆಂಬರ್ 29ರಂದು ಬೆಂಗಳೂರಿನ ಯಲಹಂಕದಲ್ಲಿ ಮಂತ್ರ-ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ವಿಜಯ್ ಅವರು ಬೆಂಗಳೂರಿನಲ್ಲಿ ತಮ್ಮದೇ ಲಾಜಿಸ್ಟಿಕ್ ಕಂಪನಿ (Logistic Company) ಹೊಂದಿದ್ದಾರೆ. ವಿಜಯ್ ಹಾಗೂ ಪೂಜಾ ಗಾಂಧಿ ಪರಸ್ಪರ ಪ್ರೀತಿಸುತ್ತಿದ್ದು, ತಮ್ಮಿಬ್ಬರ ಪ್ರೀತಿಗೆ ಮದುವೆಯ ಅರ್ಥವನ್ನು ನೀಡುತ್ತಿದ್ದಾರೆ. ಉತ್ತರ ಪ್ರದೇಶದವರಾದ ಪೂಜಾ ಗಾಂಧಿಯವರು ಕನ್ನಡವನ್ನು ಕಲಿತ್ತಿದ್ದು, ವಿಜಯ್ ಅವರೇ ಪೂಜಾ ಗಾಂಧಿಗೆ ಕನ್ನಡ ಕಲಿಸಿದ್ದರಂತೆ. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರಾಗಿದ್ದಾರೆ.

ತಮ್ಮ ಮದುವೆಯ ಬಗ್ಗೆ ಪೂಜಾ ಗಾಂಧಿಯವರು ಮಾಧ್ಯಮಮಿತ್ರರಿಗೆ ಪತ್ರ ಬರೆದಿದ್ದು, ‘ಪ್ರೀತಿಯ ಮಾಧ್ಯಮ ಮಿತ್ರರಿಗೆ, ಆತ್ಮೀಯರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ನನ್ನ ಚಿತ್ರ ಜೀವನದ ಎಲ್ಲಾ ಬೆಳವಣಿಗೆಯಲ್ಲಿ ನೀವು ನನ್ನ ಜೊತೆಯಾಗಿದ್ದೀರಿ. ನವೆಂಬರ್‌ 29-11- 2023 ನೇ ತಾರೀಕು ಸಂಜೆ ಕವೆಂಪು ಆಶಯದ ” ಮಂತ್ರ ಮಾಂಗಲ್ಯದ” ಮೂಲಕ ವಿಜಯ್‌ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದೇನೆ.

ಕುಟುಂಬದವರಾಗಿ ನೀವು ಬಂದು ಹರಸಿ, ಆಶಿರ್ವದಿಸಿ. ಎಂದು ಮದುವೆಯ ಆಮಂತ್ರಣ ನೀಡಿದ್ದಾರೆ.ಆಮಂತ್ರಣ ಪತ್ರಿಕೆಯಲ್ಲಿ ಮನವಿಯನ್ನು ಮಾಡಿದ್ದು, ತಮ್ಮಲ್ಲಿ ಸವಿನಯ ಮನವಿ ಮದುವೆಯ ಸಮಯದಲ್ಲಿ ಯಾವುದೇ ಕ್ಯಾಮೆರಾಗಳಿಗೆ ಅವಕಾಶವಿರುವುದಿಲ್ಲ. ಅನ್ಯಥಾ ಭಾವಿಸಬೇಡಿ. ನಾವೇ ನಿಮಗೆ ಸಾಧ್ಯವಾದಷ್ಟು ಫೋಟೋಗಳನ್ನು ಮತ್ತು ದೃಶ್ಯಾವಳಿಗಳನ್ನು ತಲುಪಿಸುತ್ತೇವೆ.

ಮದುವೆಯ ಸಮಯವನ್ನು ನಾಳೆ 29-11-2023 ರ ಬೆಳಗ್ಗೆ ನಮ್ಮ ಪಿ.ಆರ್.ಓ ಸುಧೀಂದ್ರ ವೆಂಕಟೇಶ್‌ ಅವರು ತಿಳಿಸುತ್ತಾರೆ. ಈ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಮನದಾಳದ ಧನ್ಯವಾದಗಳು ನಿಮ್ಮ ಮನೆ ಮಗಳು ಪೂಜಾ ಗಾಂಧಿ ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ಪೂಜಾಗಾಂಯವರ ಮದುವೆಯ ಸುದ್ದಿ ಅಭಿಮಾನಿಗಳಿಗೆ ಸಂತಸ ತಂದಿದೆ.

Leave a Reply

Your email address will not be published. Required fields are marked *