15 ವರ್ಷಕ್ಕೆ ಹುಡುಗನ ಹಿಂದೆ ಓಡಿ ಹೋದ ನಟಿ ಪೂಜಾ ಬ್ಯಾನರ್ಜಿ, ನಂತರ ಹುಡುಗ ಆಕೆಗೆ ಮಾಡಿದ್ದೇನು ಗೊತ್ತಾ? ಇಲ್ಲಿದೆ ನೋಡಿ!!!

ಸೆಲೆಬ್ರಿಟಿಗಳ ಬದುಕು ಹೊರ ಜಗತ್ತಿಗೆ ಸುಂದರವಾಗಿಯೇ ಕಾಣುತ್ತವೆ. ನೇಮ್ ಫೇಮ್ ಅವಕಾಶಗಳು ಕೈ ತುಂಬಾ ವೈಯುಕ್ತಿಕ ಬದುಕಿನಲ್ಲಿ ಆಗಿರುವ ನೋವು ನಲಿವಿನ ಬಗ್ಗೆ ಯಾರಿಗೂ ಕೂಡ ತಿಳಿದಿರುವುದಿಲ್ಲ. ಆದರೆ ಕೆಲವೊಮ್ಮೆ ನಟ ನಟಿಯರು ತಮ್ಮ ವೈಯುಕ್ತಿಕ ಬದುಕಿನಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಹೇಳಿಕೊಳ್ಳುವುದಿದೆ.

ಹೌದು, ಹಿಂದಿಯ “ದೇವೋನ್ ಕೆ ದೇವ್ ಮಹಾದೇವ್” ಧಾರಾವಾಹಿಯಲ್ಲಿ ಪಾರ್ವತಿ ಪಾತ್ರದಲ್ಲಿ ನಟಿಸಿದ್ದ ಕಿರುತೆರೆ ನಟಿ ಪೂಜಾ ಬ್ಯಾನರ್ಜಿ (Pooja Banerjee) ಅವರು ತಮ್ಮ ಕಷ್ಟಗಳ ಕುರಿತು ಮಾತನಾಡಿದ್ದಾರೆ. ಕಿರುತೆರೆಯ ನಟಿ ಈ ಪೂಜಾ ಬ್ಯಾನರ್ಜಿ 15 ನೇ ವಯಸ್ಸಿನಲ್ಲಿ ಮನೆಯಿಂದ ಬಂದ ಬಳಿಕ, ಪೂಜಾ ಬ್ಯಾನರ್ಜಿ 2004 ರಲ್ಲಿ ತನ್ನ ಪ್ರೇಮಿ ಅರುಣಯ್ ಚಕ್ರವರ್ತಿ (Arunay Chakravati) ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಆದರೆ 2013 ರಲ್ಲಿ, ಈ ಇಬ್ಬರೂ ಕೂಡ ಒಪ್ಪಿಗೆ ಪಡೆದು ದೂರವಾಗಿ ಬಿಟ್ಟರು. ವೈಯುಕ್ತಿಕ ಬದುಕಿನ ಏರಿಳಿತಗಳ ನಡುವೆ ಕೆರಿಯರ್ ಕೈ ಹಿಡಿಯಿತು ಎನ್ನಬಹುದು. ‘ದೇವೋ ಕೇ ದೇವ್ ಮಹಾದೇವ್’ (Devo Ke Dev Mahadev) ಚಿತ್ರದಲ್ಲಿ ಪಾರ್ವತಿ ಪಾತ್ರವನ್ನು ನಿರ್ವಹಿಸಿ ಹೆಸರು ಗಳಿಸಿದರು. ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿ ಕೊಂಡ ಇವರ ಜೀವನದಲ್ಲಿ ಮತ್ತೊಮ್ಮೆ ಪ್ರೀತಿಯಾಯಿತು.

ಕಿರುತೆರೆ ನಟ ಕುನಾಲ್ ವರ್ಮಾ (Kunal Varma) ಅವರನ್ನು ಪ್ರೀತಿಸಿದರು. ಕೆಲವು ವರ್ಷಗಳ ಡೇಟಿಂಗ್ ಬಳಿಕವಾಗಿ, 2021 ರಲ್ಲಿ ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿರುವ ಕಿರುತೆರೆಯ ನಟಿ ಪೂಜಾ ಬ್ಯಾನರ್ಜಿ ಅವರು ಕೆಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ನಟಿ ಪೂಜಾ ಬ್ಯಾನರ್ಜಿ, ತಾನು ಮಾಡಿದ ದೊಡ್ಡ ತಪ್ಪು ಏನೆಂದ್ರೆ 15ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗುವ ನಿರ್ಧಾರ ಮಾಡಿದ್ದು, ಇದಕ್ಕೆ ಈಗಲೂ ಪಶ್ಚಾತ್ತಾಪ ಪಡುತ್ತೇನೆ. ನಾವು ಬೆಂಗಾಲಿ ಸಂಪ್ರದಾಯದಂತೆ ಮದುವೆಯಾದೆವು.

ಮದುವೆಗೆ ಮುಂಚೆಯೇ ನಮಗೆ ಮಗುವಾಗಿದ್ದರೂ ಮತ್ತೆ ಮದುವೆಯಾಗುವುದು ಹೊಸ ಅನುಭವ. ಇದು ನಮ್ಮ ಸಂಬಂಧದಲ್ಲಿ ಹೊಸತನವನ್ನು ತಂದಿದೆ. ಅದಲ್ಲದೇ, ನಮ್ಮ ಸಂಬಂಧಿಕರು ನಮ್ಮನ್ನು ಮದುವೆಯಾದ ನವವಿವಾಹಿತರಂತೆ ನಡೆಸಿಕೊಳ್ಳುತ್ತಿದ್ದರೂ, ನಮ್ಮನ್ನು ಊಟಕ್ಕೆ ಆಹ್ವಾನಿಸುತ್ತಿದ್ದರು. ಹಳೆಯ ಬ್ರೇಕಪ್ ವಿಚಾರ ನನ್ನನ್ನು ಕಾಡಲಿಲ್ಲ” ಎಂದಿದ್ದಾರೆ.

Leave a Reply

Your email address will not be published. Required fields are marked *