ಕೆಲವು ನಟಿಯರು ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳದೆ ತನ್ನಿ ಸೀದಾ ನಟನೆಯಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಅಂತಹ ನಟಿಯರಲ್ಲಿ ಮೈನಾ ಖ್ಯಾತಿಯ ನಿತ್ಯಾ ಮೆನನ್ (Nitya Menan) ಕೂಡ ಒಬ್ಬರಾಗಿದ್ದಾರೆ.ನಿತ್ಯಾ ಮೆನನ್ ಕನ್ನಡ (Kannada), ತಮಿಳು (Tamil), ತೆಲುಗು (Telug), ಹಾಗೂ ಮಲಯಾಳಂ (Malayalam) ಗುರುತಿಸಿಕೊಂಡವರು. ನಟನೆಯ ಜೊತೆಗೆ ಗಾಯನದಿಂದಲೇ ಎಲ್ಲರ ಮನಸ್ಸನ್ನು ಗೆದ್ದುಕೊಂಡವರು. ಆದರೆ ಇದೀಗ ಚೆಂದುಳ್ಳಿ ಚೆಲುವೆ ನಿತ್ಯಾ ಮೆನನ್ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ಸದ್ಯಕ್ಕೆ ಎಲ್ಲಾ ಭಾಷೆಯಲ್ಲಿಯೂ ಬೇಡಿಕೆಯನ್ನು ಹೊಂದಿರುವ ನಟಿ ನಿತ್ಯಾ ಮೆನನ್ (Nithya Menan) ಅವರ ಮದುವೆಯ ಸುದ್ದಿಯೊಂದು ಕೇಳಿ ಬರುತ್ತಿದೆ. ನಟಿ ನಿತ್ಯಾ ಮೆನನ್ ಯಾರನ್ನೋ ಪ್ರೀತಿಸುತ್ತಿದ್ದು, ಮದುವೆಗೆ ಸಕಲ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿತ್ತು ಆದರೆ ಕೆಲವು ವರ್ಷಗಳ ಹಿಂದೆ ನಿತ್ಯಾ ಮೆನನ್ ಮದುವೆ ಸುದ್ದಿಯನ್ನು ನಿರಾಕರಿಸುವ ಮೂಲಕ ಈಗ ಮದುವೆ ಆಗುತ್ತಿಲ್ಲ, ಮದುವೆಯಾಗಬೇಕು ಅಂತ ನಿರ್ಧಾರ ಮಾಡಿದಾಗ ನಿಮ್ಗೆ ಮೊದಲು ಹೇಳ್ತೀನನಿ ಎಂದು ಮಾಧ್ಯಮದ ಮುಂದೆಯೇ ಹೇಳಿಕೊಂಡಿದ್ದರು.
ಆದರೆ ಇದೀಗ ನಿತ್ಯಾ ಮೆನನ್ ಈ ಬಾರಿ ಮದುವೆಯಾಗಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ನಿತ್ಯಾ ಮೆನನ್ ಮದುವೆಯ ಬಗ್ಗೆ ಆಪ್ತ ಮೂಲಗಳು ಮಾಹಿತಿ ನೀಡಿವೆ. ಆಪ್ತ ಸ್ನೇಹಿತ ಮತ್ತು ಉದ್ಯಮಿ ಜೊತೆ ಮದುವೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಟಿಯು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ತಮ್ಮ ಮದುವೆಯ ವಿಚಾರದ ಕುರಿತು ನಿತ್ಯಾ ಮೆನನ್ ಅವರೇ ಯಾವಾಗ ಅಧಿಕೃತವಾಗಿ ತಿಳಿಸುತ್ತಾರೆ ಎಂದು ಫ್ಯಾನ್ಸ್ ಕಾದು ಕುಳಿತಿದ್ದಾರೆ.
ಅದಲ್ಲದೇ ಇತ್ತೀಚೆಗಷ್ಟೇ ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ನಿತ್ಯಾ ಮೆನನ್ ಬಾಯ್ಬಿಟ್ಟಿದ್ದರು. “ಎಲ್ಲಾ ಭಾಷೆಯಲ್ಲಿ ನಟಿಸಿದ್ದೀನಿ, ಆದರೆ ಟಾಲಿವುಡ್‌ನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ, ತೆಲುಗು ಚಿತ್ರರಂಗದಲ್ಲಿ ತನಗೆ ಯಾರೂ ತೊಂದರೆ ಕೊಟ್ಟಿಲ್ಲ. ಆದರೆ ತಮಿಳು ಸಿನಿಮಾರಂಗದಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದ್ದೇನೆ. ಕಾಲಿವುಡ್‌ನ (Kollywood) ನಾಯಕನೊಬ್ಬ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ” ಎಂದಿದ್ದರು.
“ಶೂಟಿಂಗ್ ಸಮಯದಲ್ಲಿ ಅವರು ತನ್ನನ್ನು ಸ್ಪರ್ಶಿಸುವ ಮೂಲಕ ತುಂಬಾ ಹಿಂಸೆ ನೀಡಿದ್ದರು. ಆದರೆ ಆ ನಾಯಕ ಯಾರು ಎನ್ನುವ ಬಗ್ಗೆ ನಿತ್ಯಾ ಬಹಿರಂಗಪಡಿಸಿಲ್ಲ. ನಾಯಕನ ಹುಚ್ಚು ವರ್ತನೆಯಿಂದ ಸರಿಯಾಗಿ ಶೂಟಿಂಗ್‌ನಲ್ಲಿ ಭಾಗವಹಿಸಲು ಆಗುತ್ತಿರಲಿಲ್ಲ. ಮಹಿಳೆಯರಿಗೆ ಆ ರೀತಿ ತೊಂದರೆ ಕೊಟ್ಟರೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ಹಾಗಾಗಿಯೇ ಈಗ ಎಷ್ಟೋ ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡಲು ಹೆದರುತ್ತಿದ್ದಾರೆ” ಎಂದಿದ್ದರು.
2006 ರಲ್ಲಿ ಸಂತೋಷ್ ರಾಜ್ (Santhosh Raj) ನಿರ್ದೇಶನದಲ್ಲಿ ತೆರೆಕಂಡಿರುವ 7 o’ ಕ್ಲಾಕ್ (7 Clock) ಕನ್ನಡ ಚಿತ್ರವೊಂದರಲ್ಲಿ ಕಾಣಿಸಿಕೊಂಡರು. ಆ ಬಳಿಕ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಅದಲ್ಲದೇ ನಟಿಯು ಪರಭಾಷೆಯ ಸಿನಿಮಾಗಳಲ್ಲಿಯು ಬ್ಯುಸಿಯಾಗಿದ್ದು ಬೇಡಿಕೆಯ ಜೊತೆಗೆ ಸಾಲು ಸಾಲು ಪ್ರಾಜೆಕ್ಟ್ ಗಳನ್ನು ಹೊಂದಿದ್ದಾರೆ.