ಅಕ್ಕನ ಜೊತೆಗೆ ದುಬೈ ಟ್ರಿಪ್ ಎಂಜಾಯ್ ಮಾಡುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ

ಸೆಲೆಬ್ರಿಟಿಗಳು ಸಿನಿಮಾ ಹಾಗೂ ಕಿರುತೆರೆ ಲೋಕದಲ್ಲಿ ಬ್ಯುಸಿಯಾಗಿದ್ದರೂ ಕೂಡ ಬಿಡುವು ಮಾಡಿಕೊಂಡು ಫ್ಯಾಮಿಲಿ ಹಾಗೂ ಸ್ನೇಹಿತರ ಟ್ರಿಪ್ ಹೋಗುತ್ತಿರುತ್ತಾರೆ. ಟ್ರಿಪ್ ನಲ್ಲಿ ಮೋಜು ಮಸ್ತಿ ಮಾಡುವ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸುತ್ತಿರುತ್ತಾರೆ. ಆದರೆ ಇದೀಗ ನಟಿ ನೇಹಾ ಗೌಡ (Neha Gowda) ಟ್ರಿಪ್ ಎಂಜಾಯ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಲಕ್ಷ್ಮಿ ಬಾರಮ್ಮ ಸೀರಿಯಲ್ ನಿಂದ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಗಳಿಸಿಕೊಂಡ ನಟಿ ನೇಹಾ ಗೌಡ (Neha Gowda) ಕೂಡ ತಮ್ಮ ಸಹೋದರಿ ಸೋನು ಗೌಡ ಅವರೊಂದಿಗೆ ದುಬೈ (Dubai) ಗೆ ತೆರಳಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ‘ಫೋಟೋ ಡಂಪ್’ ಎಂದು ಬರೆದುಕೊಂಡಿದ್ದಾರೆ.

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.ಅದಲ್ಲದೇ ಈ ಪ್ರವಾಸವನ್ನು ಎಂದಿಗೂ ಮರೆಯಲಾಗದಂತೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಸೋನು ಗೌಡರವರು ನೇಹಾ ಗೌಡ (Neha Gowda) ಮೆನ್ಸನ್ ಮಾಡಿದ್ದಾರೆ. ಅಕ್ಕ ತಂಗಿಯರಿಬ್ಬರೂ ದುಬೈ ಪ್ರವಾಸ ಎಂಜಾಯ್ ಮಾಡಿರುವ ಫೋಟೋಗಳನ್ನು ನೋಡಿ ಫುಲ್ ಖುಷ್ ಆಗಿದ್ದಾರೆ.

ಓದುತ್ತಿದ್ದ ಸಮಯದಲ್ಲಿಯೇ ನೇಹಾ ಗೌಡರವರಿಗೆ ನಟಿಯಾಗಬೇಕು ಎಂಬ ಕನಸು ಇತ್ತು.ಹೀಗಾಗಿ ಈ ಕನಸನ್ನು ಈಡೇರಿಸಿಕೊಳ್ಳಲು ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಹೀಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಾಕಷ್ಟು ಫ್ಯಾಶನ್ ಶೋಗಳಲ್ಲಿಯೂ ಭಾಗವಹಿಸಿದ್ದರು. ನಟಿಯಾಗಬೇಕು ಎಂದು ಕನಸು ಕಂಡಿದ್ದ ಇವರಿಗೆ ಸ್ವಾತಿ ಚಿನುಕುಳು ಎಂಬ ತೆಲುಗು ಧಾರಾವಾಹಿಯಲ್ಲಿ ನಟಿಸುವ ಅವಕಾಶವೊಂದು ಲಭಿಸಿತು. ಈ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇವರು ಮತ್ತೆ ಹಿಂದೆ ತಿರುಗಿ ನೋಡಿದ್ದು ಇಲ್ಲ. ಒಂದಲ್ಲ ಒಂದು ಅವಕಾಶವನ್ನು ಗಿಟ್ಟಿಸಿಕೊಂಡು ಪ್ರೇಕ್ಷಕ ವರ್ಗಕ್ಕೆ ಹತ್ತಿರವಾದರು.

ಕಲರ್ಸ್ ಕನ್ನಡ (Colours Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಸೀರಿಯಲ್ ನಿಂದ ಗೊಂಬೆ ಎಂದೇ ಪ್ರಖ್ಯಾತಿ ಪಡೆದಿದ್ದ ಸಾಕಷ್ಟು ಫ್ಯಾನ್ಸ್ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಹಿಂದೆ ಬಾಸ್ ಮನೆಗೆ ಎಂಟ್ರಿಕೊಟ್ಟ ಮತ್ತೆ ಪ್ರೇಕ್ಷಕ ವರ್ಗಕ್ಕೆ ಹತ್ತಿರವಾಗಿದ್ದರು. ಸದ್ಯಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ನಮ್ಮ ಲಚ್ಚಿ (Namma Lacchi) ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *