ನಟಿ ಆಲಿಯಾ ಭಟ್ ಅತ್ತೆ ನೀತು ಕಪೂರ್ ಜೊತೆಗೆ ಜಗಳ, ಕಪೂರ್ ಫ್ಯಾಮಿಲಿಯಲ್ಲಿ ಬಿರುಕು.. ಮನೆ ಬಿಟ್ಟು ಹೋದರಾ ಆಲಿಯಾ!..

ಖ್ಯಾತ ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ನಡೆಸಿಕೊಡುವ ಕಾಫಿ ವಿತ್ ಕರಣ್ ಸೀಸನ್ 8 (Coffee with karan sisan 8) ಶೋ ನಾನಾ ವಿಚಾರಗಳಿಂದ ಸುದ್ದಿಯಲ್ಲಿದೆ. ಈಗಾಗಲೇ ಹಲವು ಸೆಲೆಬ್ರಿಟಿಗಳು ಈ ಶೋಗೆ ಬಂದು ತಮ್ಮ ವೈಯುಕ್ತಿಕ ವಿಚಾರಗಳನ್ನು ಹಾಗೂ ಕೆಲವು ಸೀಕ್ರೆಟ್ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಆದರೆ ಜನವರಿ 10 ರಿಲೀಸ್ ಆಗಿರುವ ಪ್ರೋಮೊದಲ್ಲಿ ನಟಿಯರಾದ ಜೀನತ್ ಅಮನ್ (Zenath Aman) ಮತ್ತು ನೀತು ಕಪೂರ್ (Neethu Kapoor) ಶೋನಲ್ಲಿ ಭಾಗವಹಿಸಿರುವುದನ್ನು ಕಾಣಬಹುದು. ಈ ಪ್ರೋಮೊ ನೋಡಿದ ವೀಕ್ಷಕರು ಸಖತ್ ಎಂಜಾಯ್ ಮಾಡಿದ್ದಾರೆ. ಹೌದು, ಈ ಎಪಿಸೋಡ್ ನಿನ್ನೆ ಜನವರಿ 11 ಕ್ಕೆ ಪ್ರಸಾರವಾಗಿದೆ.

ಅದಕ್ಕೂ ಮೊದಲಿಗೆ ರಿಲೀಸ್ ಆಗಿದ್ದ ಪ್ರೋಮೋದಲ್ಲಿ ನೀತು ಕಪೂರ್ ಹಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಈ ಶೋನಲ್ಲಿ ನಿಮ್ಮ ಮನೆಯಲ್ಲಿ ಮಾಮೂಲಿ ಮನೆಯಂತೆ ಅತ್ತೆ-ಸೊಸೆ ಜಗಳ ಇದ್ಯಾ ಎಂದು ಕರಣ್​ ಪ್ರಶ್ನಿಸಿದ್ದು, ಈ ವೇಳೆಯಲ್ಲಿ ಸೊಸೆ ಆಲಿಯಾ ಭಟ್​ (Aaliya Bhat) ಬಗ್ಗೆ ಉತ್ತರಿಸಿದ ನೀತು ಕಪೂರ್​, ‘ಹೌದು. ಆಗಾಗ್ಗೆ ಜಗಳ ನಡೆಯುತ್ತಿರುತ್ತದೆ.

ಹಾಗಂತ ಈ ಜಗಳ ತಮಾಷೆಯ ಜಗಳವಷ್ಟೇ. ಈ ಜಗಳವಾಗ್ತಿರೋದು ಆಲಿಯಾ ಮತ್ತು ರಣವೀರ್​ ಪುತ್ರಿ ರಾಹಾ (Raahaa) ಗಾಗಿ. ಹಾಗಂತ ಇದು ನೇರವಾಗಿ ಅತ್ತೆ-ಸೊಸೆಯ ಜಗಳವೂ ಅಲ್ಲ. ಬದಲಿಗೆ. ಆಲಿಯಾ ಭಟ್​ ಅತ್ತೆ ನೀತು ಕಪೂರ್ ಹಾಗೂ ಆಲಿಯಾ ಭಟ್ ತಾಯಿಯ ನಡುವಿನ ಜಗಳ ಎಂದು ಹೇಳಿದ್ದಾರೆ.

ತಮ್ಮ ಈ ಜಗಳದ ಬಗ್ಗೆ ವಿವರಣೆ ನೀಡಿರುವ ನೀತು ಕಪೂರ್, ರಾಹಾ ನಮ್ಮ ಮನೆಯಲ್ಲಿ ಬೆಳೆಯುತ್ತಿದ್ದಾಳೆ. ನಾನು ಮಗುವನ್ನು ನೋಡಿಕೊಳ್ಳುವ ಆಯಾಗೆ ಮಗುವಿಗೆ ಪಪ್ಪಾ ಎಂದು ಕರೆಯಲು ಕಲಿಸು ಎನ್ನುತ್ತೇನೆ. ಆದರೆ ಸೋನಿ ರಾಜ್ದಾನ್ ಅವರು ಮೊದಲು ಮಮ್ಮ ಎಂದು ಹೇಳಲು ಕಲಿಸಲು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಮಮ್ಮಾ-ಪಪ್ಪಾ ವಿಷಯದಲ್ಲಿ ಜಗಳವಾಗುತ್ತದೆ ಎಂದು ಹೇಳಿದ್ದಾರೆ.

ಹಾಗಿದ್ದರೆ ರಾಹಾ ಕೊನೆಗೆ ಏನು ಹೇಳಿದಳು ಎಂದು ಪ್ರಶ್ನಿಸಿದಾಗ, ಮಮ್ಮಾ ಅನ್ನಲಿಲ್ಲ ಬದಲಿಗೆ ಮ್ ಮ್ ಎಂದಳಷ್ಟೇ. ಆಗ ಆಲಿಯಾ ನನ್ನ ಕಡೆ ತಾನೇ ಗೆದ್ದೆ ಎನ್ನೋ ರೀತಿ ನೋಟ ಬೀರಿದಳು. ಆಗ ನಾನು ಅವಳಿಗೆ ಹೀಗೆ ಹೇಳಲು ನಾನೇ ಕಲಿಸಿದ್ದೆ, ಜಂಭ ಪಡಬೇಡ ಎಂದು ಹೇಳಿದೆ. ಹೀಗೆ ರಾಹಾ ವಿಷಯದಲ್ಲಿ ಪಾಸಿಟಿವ್ ಜಗಳ ಆಗುತ್ತಿರುತ್ತದೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ಅದಲ್ಲದೆ, ನಾನಾ ಎನ್ನುವ ಬದಲು ರಾಹಾ ದಾದಾ ಎನ್ನುತ್ತಾಳೆ. ಹಾಗಾಗಿ ನನಗೆ ಖುಷಿ ಇದೆ. ಕಪೂರ್ ಮನೆಗೆ ಪುಟ್ಟ ರಾಜಕುಮಾರಿ ರಾಹಾ ಎಂಟ್ರಿಯಾದ ನಂತರ ರಣಬೀರ್ ಹಾಗೂ ಅಲಿಯಾ ಕೂಡಾ ಮಗುವಿನ ಜೊತೆ ಸಮಯ ಕಳೆಯಲು ಜಗಳ ಮಾಡುತ್ತಾರೆ. ಇಬ್ಬರೂ ಶೂಟಿಂಗ್​​ನಲ್ಲಿ ಬ್ಯುಸಿ ಇರುವ ಕಾರಣ ಮನೆಗೆ ಬಂದ ಹೊತ್ತಲ್ಲಿ ಮಗುವನ್ನು ಎತ್ತಲು ಇಬ್ಬರೂ ಸಣ್ಣ ಪುಟ್ಟ ಜಗಳ ಮಾಡುತ್ತಾರೆ.

ಒಟ್ಟಿನಲ್ಲಿ ರಾಹಾಗಾಗಿ ಮನೆಯಲ್ಲಿ ತಮಾಷೆಯ ಜಗಳ ನಡೆಯುತ್ತಲೇ ಇರುತ್ತದೆ. ಇಬ್ಬರ ಫ್ಯಾಮಿಲಿ ಜಗಳ ಮಾಡಿಕೊಂಡೇ ಮಗುವಿಗೆ ಸಿಕ್ಕಾಪಟ್ಟೆ ಪ್ರೀತಿ ಸುರಿಸುತ್ತಿದೆ ಎಂದಿದ್ದಾರೆ. ಅತ್ತೆ ಸೊಸೆ ಜಗಳದ ಬಳಿಕ ಮಾತನಾಡಿದ ನೀತು ಕಪೂರ್ (Neethu Kapoor) ತನ್ನ ಕ್ರಶ್ ಬಗ್ಗೆ ಕೂಡ ರಿವೀಲ್ ಮಾಡಿದ್ದು, ಶಶಿ ಕಪೂರ್​ (Shashi Kapoor) ಎಂದು ಹೇಳಿದ್ದಾರೆ. ಈ ಹೆಸರು ಕೇಳುತ್ತಿದ್ದಂತೆ ಕರಣ್ ಜೋಹರ್ ಶಾಕ್ ಆಗಿ, ಅಂದರೆ ಅಂಕಲ್​ ಮೇಲಾ ಎಂದಿದ್ದಾರೆ. ಅದಕ್ಕೆ ನಟಿ ಹೌದು ಎಂದಿದ್ದಾರೆ. ಒಟ್ಟಿನಲ್ಲಿ ನೀತು ಕಪೂರ್ ಅವರ ತಮಾಷೆಯ ಮಾತುಗಳನ್ನು ಪ್ರೋಮೊದಲ್ಲಿ ವೀಕ್ಷಕರು ಫುಲ್ ಖುಷಿ ಪಟ್ಟಿದ್ದಾರೆ.

Leave a Reply

Your email address will not be published. Required fields are marked *