ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾಗೌಡರವರ ತಿಂಗಳಿಗೆ ಎಷ್ಟು ಲಕ್ಷ ದುಡಿತಾರೆ ಗೊತ್ತಾ? ಕೇಳಿದ್ರೆ ಬಾಯಿ ಮೇಲೆ ಕೈ ಇಡ್ತೀರಾ!

ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿ ನಮೃತಾ ಗೌಡ (Namrutha Gowda) ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಅದರಲ್ಲಿ ಬಿಗ್ ಬಾಸ್ ಸೀಸನ್ 10 (Bigg Boss Sisan 10) ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಬಂದ ಬಳಿಕವಂತೂ ನಮ್ರತಾ ಗೌಡ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನಮ್ರತಾ ಗೌಡ ಸಂದರ್ಶನಗಳನ್ನು ನೀಡುತ್ತಿದ್ದಾರೆ.

ಈ ಸಂದರ್ಶನ (Interviews) ಗಳಲ್ಲಿ ತಮ್ಮ ಬಿಗ್ ಬಾಸ್ ಮನೆಯ ಅನುಭವಗಳನ್ನು ಬಿಚ್ಚಿಡುತ್ತಿದ್ದಾರೆ. ಇದೀಗ ತಾನು ಸೀರಿಯಲ್ ಗೆ ಪಡೆಯುವ ಸಂಭಾವನೆ ಹಾಗೂ ತನ್ನ ಆಸ್ತಿಯ ಬಗ್ಗೆ ಮಾತನಾಡಿದ್ದಾರೆ. ನಟಿ ನಮ್ರತಾ ಗೌಡರವರು ನಾಗಿಣಿ ಸೀರಿಯಲ್ ಮೂಲಕ ಖ್ಯಾತಿ ಗಳಿಸಿಕೊಂಡವರು.

ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ನಮೃತಾ (Namratha) ಅವರು ಆಗಾಗ ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಅಪ್ಡೇಟ್ ನೀಡುತ್ತಿರುತ್ತಾರೆ. ಕಳೆದ ವರ್ಷ ತಮ್ಮ ಆಸೆಯಂತೆ ತಾನೇ ಹೊಸ ಮನೆ ಕಟ್ಟಿಸಿದ್ದು, ಮನೆಯ ಗೃಹ ಪ್ರವೇಶ ಮಾಡಿದ್ದರು. ತಮ್ಮ ಹೊಸ ಮನೆಯ ಗೃಹಪ್ರವೇಶದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಹೀಗಾಗಿ ಅಭಿಮಾನಿಗಳು ಹೆಣ್ಣು ಮಗಳಾಗಿ ಸ್ವಂತ ಮನೆ ಕಟ್ಟಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದರು. ಆದರೆ ಸಂದರ್ಶನವೊಂದರಲ್ಲಿ ನಟಿ ನಮ್ರತಾರ ಗೌಡರವರ ಸಂಭಾವನೆ ಹಾಗೂ ಆಸ್ತಿಯ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ವೇಳೆಯಲ್ಲಿ ಪ್ರತಿಕ್ರಿಯೆ ನೀಡಿದ ನಮ್ರತಾ ಗೌಡ, ‘ ‘ಹುಡುಗರಿಗೆ ಮಾತ್ರ ಇದನ್ನು ತೆಗೆದುಕೊಳ್ಳಲು ಶಕ್ತಿ ಇರುತ್ತೆ. ಹುಡುಗರಿಗೆ ಇರಲ್ಲ ಅಂದುಕೊಳ್ಳುತ್ತಾರೆ. ಆದರೆ ಎಷ್ಟೋ ಜನಕ್ಕೆ ಈ ವಿಷ್ಯ ಗೊತ್ತಿಲ್ಲ.

ನಾನು ಕೆಲಸ ಮಾಡಿರುವ ಸೀರಿಯಲ್ ಗಳಲ್ಲಿ ಹಾಗೂ ಒಂದಷ್ಟು ಪ್ರಾಜೆಕ್ಟ್ ಗಳಲ್ಲಿ ಅಲ್ಲಿ ವರ್ಕ್ ಮಾಡುವ ಹುಡುಗರಿಗಿಂತ ಹೆಚ್ಚು ಸಂಭಾವನೆ ನಾನು ತೆಗೆದುಕೊಂಡಿದ್ದೀನಿ. ಹೀರೋಯಿನ್ ಗಳು ಕೂಡ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಾರೆ. ನನ್ನ ಫಸ್ಟ್ ಪೇಮೆಂಟ್ ದಿನಕ್ಕೆ 400 ಇತ್ತು.

6 ಆರು ವರ್ಷಯಿದ್ದಾಗ ನಾಲ್ಕೂರು ರೂಪಾಯಿ ಸಂಭಾವನೆಯಿಂದ ನಾನು ಶುರು ಮಾಡಿದ್ದು, ಅಲ್ಲಿಂದ ಇಲ್ಲಿಯವರೆಗೂ ಎಷ್ಟೋ ವರ್ಷಗಳ ಕಾಲ ದುಡಿದು ನಾನು ಕಾರು ಮನೆ ತಕೊಂಡಿದ್ದೇನೆ ಅದು ನನ್ನ ದುಡ್ಡು’ ಎಂದಿದ್ದಾರೆ. ಆದರೆ ಇದೀಗ ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡಡ ವಾರಕ್ಕೆ 2.5 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.

ಅದಲ್ಲದೇ ಧಾರಾವಾಹಿಗಳಲ್ಲಿ ದಿನಕ್ಕೆ 25000 ಸಂಬಳ ಪಡೆದುಕೊಳ್ಳುವ ಮೂಲಕ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನಮ್ರತಾ ಗೌಡರವರಿಗೆ ಅವಕಾಶಗಳು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಯಾವ ಪ್ರಾಜೆಕ್ಟ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *