ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿರುವ ನಟ ನಟಿಯರು ತಮ್ಮ ಬದುಕಿನಲ್ಲಿ ಎಷ್ಟೇ ನೋವಿದ್ದರೂ ಕೂಡ ಅದನ್ನು ಕೂಡ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ತೆರೆ ಮೇಲೆ ಎಲ್ಲರನ್ನು ರಂಜಿಸುವ ನಟ ನಟಿಯರ ಬದುಕು ನೋವು ಹಾಗೂ ನಲಿವಿನಿಂದ ಕೂಡಿರುತ್ತದೆ. ಈ ವಿಚಾರದಲ್ಲಿ ಪಾರು ಧಾರಾವಾಹಿ (Paru Serial) ಖ್ಯಾತಿಯ ಮೋಕ್ಷಿತಾ ಪೈ (Mokshitha Pai) ಅವರು ಹೊರತಾಗಿಲ್ಲ.
ಪಾರು ಧಾರಾವಾಹಿ ಖ್ಯಾತಿಯ ನಟಿ ಮೋಕ್ಷಿತಾ ಪೈ ನಿಜ ಜೀವನದಲ್ಲಿ ಸಾಕಷ್ಟು ಏರಿಳಿತ ಹಾಗೂ ನೋವುಗಳಿಂದ ಕೂಡಿದೆ. ಮೋಕ್ಷಿತಾಗೆ ವಿಶೇಷ ಚೇತನ ಸಹೋದರ (Brother) ನಿದ್ದು, ಆತನ ಅ- ನಾರೋಗ್ಯದಿಂದಾಗಿ ಪಾರು ಅವರ ಜೀವನ ಹೇಳಿಕೊಳ್ಳುವಷ್ಟೇನು ಉತ್ತಮವಾಗಿಲ್ಲ. 16-17 ವರ್ಷದ ಸಹೋದರನಿಗೆ ಬುದ್ಧಿ ಬೆಳವಣಿಗೆ ಆಗಿಲ್ಲ. ಇನ್ನು ಪುಟ್ಟ ಮಗುವಿನಂತೆ ಇರುವ ಆತನ ಆರೈಕೆಗೆ ಒಬ್ಬರು ಜೊತೆಗೆ ಇರಲೇಬೇಕು.


ಈ ಬಗ್ಗೆ ನಟಿ ಮೋಕ್ಷಿತಾರವರು ಎಷ್ಟೋ ಸಲ ಹಲವು ವೇದಿಕೆಗಳು ಹಾಗೂ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ತನ್ನ ತಮ್ಮನ ಬಗ್ಗೆ ಹೇಳಿಕೊಳ್ಳಲು ಮುಜುಗರ ಪಟ್ಟುಕೊಂಡಿಲ್ಲ. ಆದರೆ ಇದೀಗ ನಟಿ ಮೋಕ್ಷಿತಾ ಪೈ ಯವರು ತಮ್ಮ ಮುದ್ದಿನ ತಮ್ಮನ ಜೊತೆಯಲ್ಲಿ ರಕ್ಷಾ ಬಂಧನ ಹಬ್ಬ (Raksha Bandhana Festival) ವನ್ನು ಸೆಲೆಬ್ರೇಟ್ ಮಾಡಿದ್ದಾರೆ.
ತಮ್ಮನೊಂದಿಗೆ ರಕ್ಷಾಬಂಧನ್ ಆಚರಿಸಿರುವ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಮುದ್ದಿನ ತಮ್ಮನಿಗೆ ಆರತಿ ಎತ್ತಿ, ಸಿಹಿ ತಿನ್ನಿಸಿ ರಾಖಿ ಕಟ್ಟಿದ ಮೋಕ್ಷಿತಾ ಬಳಿಕ ತಮ್ಮನಿಂದ ಗಿಫ್ಟ್ ರೂಪದಲ್ಲಿ ಹಣವನ್ನು ಪಡೆದುಕೊಂಡಿದ್ದಾರೆ. ನಟಿ ಮೋಕ್ಷಿತಾ ಶೇರ್ ಮಾಡಿಕೊಂಡಿರುವ ರಕ್ಷಾ ಬಂಧನ ಸೆಲೆಬ್ರೇಶನ್ ವಿಡಿಯೋ (Raksha Bandhan Celebration Video) ಗಳು ವೈರಲ್ ಆಗಿದ್ದು, ಈ ವಿಡಿಯೋವನ್ನು ಫ್ಯಾನ್ಸ್ ಗಳು ಮೆಚ್ಚಿಕೊಂಡಿದ್ದಾರೆ.

ಪಾರು (Par ಧಾರಾವಾಹಿಯ ಮೂಲಕ ಸಾಕಷ್ಟು ಫ್ಯಾನ್ಸ್ ಗಳನ್ನು ಸೃಷ್ಟಿಸಿಕೊಂಡಿರುವ ನಟಿ ಮೋಕ್ಷಿತಾರವರು ಮಂಗಳೂರಿನವರು (Manglorian). ಆದರೆ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಮೊದಲು ಮೋಕ್ಷಿತಾರವರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವಿ ಪಡೆದ ಮೋಕ್ಷಿತಾ ಮೊದಲು ಟ್ಯೂಶನ್ ಟೀಚರ್ (Tution Teacher) ಆಗಿ ಕೆಲಸ ಮಾಡುತ್ತಿದ್ದರು.
ಸೋಷಿಯಲ್ ಮೀಡಿಯಾ (Social Media) ದಲ್ಲೂ ಆಕ್ಟಿವ್ ಆಗಿದ್ದ ಮೋಕ್ಷಿತಾಗೆ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ವಿಡಿಯೋ, ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಈ ವಿಡಿಯೋ ಹಾಗೂ ಫೋಟೋಗಳಿಂದಲೇ ಮೋಕ್ಷಿತಾರವರಿಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶವೊಂದು ಲಭಿಸುತ್ತದೆ. ಸದ್ಯಕ್ಕೆ ಪಾರು ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗಳಾಗಿ ಹತ್ತಿರವಾಗಿದ್ದಾರೆ.

