ಹಲವು ನಟರ ಅ ಫೇರ್. ತನ್ನ ಮೇಲೆ ಹರಿದಾಡಿದ್ದ ಗಾಸಿಪ್ ಬಗ್ಗೆ ಮುಖಕ್ಕೆ ಹೊಡೆದಂತೆ ಮಾತಾಡಿದ ಶ್ರೀ ರಾಮಚಂದ್ರ ಸಿನೆಮಾದ ನಟಿ ಮೋಹಿನಿ.. ಏನು ಹೇಳಿದ್ರು!!

ಸಿನಿಮಾರಂಗದಲ್ಲಿ ಗುರುತಿಸಿಕೊಂಡ ನಟ ನಟಿಯರು ವೈಯಕ್ತಿಕ ಕಾರಣ ಅಥವಾ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ಮರೆಯಾಗಿ ಬಿಡುತ್ತಾರೆ. ಮತ್ತೆ ಎಂದಿಗೂ ತೆರೆ ಮೇಲೆ ಕಾಣಿಸಿಕೊಳ್ಳುವುದೇ ಇಲ್ಲ. ಈ ಸಾಲಿಗೆ ನಟಿ ಮೋಹಿನಿ (Mohini) ಕೂಡ ಸೇರಿಕೊಳ್ಳುತ್ತಾರೆ. ಕ್ರೇಜಿಸ್ಟಾರ್​ ರವಿಚಂದ್ರನ್​ (Crazy Star Ravichandran) ಅಭಿನಯದ ಶ್ರೀರಾಮಚಂದ್ರ (Shreeramachandra) ಸಿನಿಮಾದಲ್ಲಿ ನಟಿಸಿ ತೆರೆ ಮೇಲೆ ಮೋಡಿ ಮಾಡಿದ ನಟಿಯೇ ಈ ಮೋಹಿನಿ.

ಮೂಲತಃ ಚೈನ್ನೈ ಅವರಾದ ನಟಿ ಮೋಹಿನಿಯವರು 90ರ ದಶಕದಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿ ಸಿನಿ ಪ್ರೇಕ್ಷಕ ಮನಸ್ಸು ಗೆದ್ದುಕೊಂಡರು. ಆದರೆ ಸಾಲು ಸಾಲು ಅವಕಾಶಗಳು ಬರುತ್ತಿದ್ದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಹೌದು, ಭರತ್​ (Bharath) ಎನ್ನುವವರ ಜೊತೆಗೆ ಸಪ್ತಪದಿ ತುಳಿದ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದರು. ಬಣ್ಣದ ಬದುಕಿನಿಂದ ದೂರ ಉಳಿದ ನಟಿ ಮೋಹಿನಿಯವರು ಪತಿ ಹಾಗೂ ಇಬ್ಬರು ಗಂಡು ಮಕ್ಕಳ ಜೊತೆಗೆ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಆದರೆ ನಟಿ ಮೋಹಿನಿಯವರು ತಮ್ಮ ಮೇಲಿನ ಗಾ-ಸಿಪ್ ಪ್ರಶ್ನೆಗೆ ಉತ್ತರಿಸುವ ಮೂಲಕ ಸುದ್ದಿಯಾಗಿದ್ದಾರೆ.

ನಟಿ ಮೋಹಿನಿಯವರ ಹಳೆಯ ಸಂದರ್ಶನದಲ್ಲಿ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ತಮ್ಮ ಮೇಲೆ ಇದ್ದ ಗಾಸಿಪ್ ಬಗ್ಗೆ ಉತ್ತರ ನೀಡಿರುವ ನಟಿ ಮೋಹಿನಿ,”ನನ್ನ ಮತ್ತು ಅರವಿಂದ್​ ಸ್ವಾಮಿ (Aravinda Swami) ನಡುವೆ ಗಾ-ಸಿಪ್​ ಶುರು ಮಾಡಿದ್ದರು. ಅದೇ ರೀತಿ ಅಕ್ಷಯ್​ ಕುಮಾರ್​ ಮತ್ತು ನನ್ನ ನಡುವೆ ಕೆಲವೊಂದಿಷ್ಟು ಗಾ-ಸಿಪ್​ ಹರಿಬಿಟ್ಟಿದ್ದರು.

ನಟರ ಜೊತೆ ನನ್ನ ಹೆಸರು ತಳುಕು ಹಾಕಿಕೊಂಡಿದ್ದರಿಂದ ನಾನು ತುಂಬಾ ಬೇಸರಗೊಂಡಿದ್ದೆ. ಒಂದೊಮ್ಮೆ ಆ-ತ್ಮಹತ್ಯೆಗೂ ಚಿಂತಿಸಿದ್ದೆ. ಆದರೆ, ನಟಿಯರ ಜೀವನದಲ್ಲಿ ಇದೆಲ್ಲ ಸಾಮಾನ್ಯ ಎನಿಸಿತು. ನಾನು ಮದುವೆಯಾಗಿ ಅನೇಕ ವರ್ಷಗಳೇ ಕಳೆದಿದ್ದರೂ ಗಾ-ಸಿಪ್​ಗಳೂ ಈಗಲೂ ಆಗಾ ಕೇಳಿಬರುತ್ತಿರುತ್ತದೆ.

ಯಾರಾದರೂ ಹೋಗಿ ನನ್ನ ಗಂಡನ ಬಳಿ, ನಿಮ್ಮ ಹೆಂಡತಿ ಆ ನಟರ ಜೊತೆ ಹರಟೆ ಹೊಡೆಯುತ್ತಿದ್ದರು ಎಂದು ಹೇಳಿದರೆ, ಓಹ್ ಹೌದಾ ಎಂದು ನನ್ನ ಪತಿ ಉತ್ತರಿಸುತ್ತಾರೆ. ಗಾ-ಸಿಪ್​ ಬಗ್ಗೆ ಹೇಳಿದವರು ಸುಮ್ಮನೆ ಸಪ್ಪೆ ಮೋರೆಯಿಂದ ಹಿಂತಿರುಗಬೇಕಷ್ಟೇ. ಏಕೆಂದರೆ ನನ್ನ ಗಂಡನಿಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿದೆ. ನನ್ನ ಪತಿ ಹೊರತು ಬೇರೆ ಯಾರೂ ನನ್ನನ್ನು ನಿಭಾಯಿಸಲು ಸಾಧ್ಯವಿಲ್ಲ” ಎಂದಿದ್ದಾರೆ.

Leave a Reply

Your email address will not be published. Required fields are marked *