ಮಗನ ಜೋತೆ ಕಾರಿನಲ್ಲಿ ಕುಳಿತು ಕೊಂಡು ಗಳ ಗಳನೆ ಕಣ್ಣೀರು ಹಾಕಿದ ನಟಿ ಮೇಘನಾ ರಾಜ್!! ನಿಜಕ್ಕೂ ಆಗಿದ್ದೇನು ನೋಡಿ!!

ಗಣೇಶ ಹಬ್ಬದ ದಿನ (Ganesha Festival) ದಂದು ಧ್ರುವ ಸರ್ಜಾ ಪತ್ನಿ ಪ್ರೇರಣಾ (Dhruva Sarja wife Prerana) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸ್ಯಾಂಡಲ್ ವುಡ್ ಮುದ್ದಾದ ಜೋಡಿ ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾ ಕುಟುಂಬದಲ್ಲಿ ಸಂತೋಷವು ತುಂಬಿ ತುಳುಕುತ್ತಿದೆ. ಧ್ರುವ ಸರ್ಜಾ ಮಗನನ್ನು ನೋಡಲು ಮೇಘನಾ ರಾಜ್ (Meghana Raj) ಮತ್ತು ಸುಂದರ್​ ರಾಜ್​ (Sundar Raj), ಪ್ರಮೀಳಾ ಜೋಶಾಯ್​ (Pramila Joshay) ಆಸ್ಪತ್ರೆಗೆ ಆಗಮಿಸಿದ್ದರು.

ಮಗು ನೋಡಿ ಬಂದ ಬಳಿಕ ಹಿರಿಯ ನಟ ಸುಂದರ್ ರಾಜ್ (Sundar Raj) ಅವರು ಪ್ರತಿಕ್ರಿಯೆ ನೀಡಿದ್ದು, ಗೌರಿ ಈಗಾಗಲೇ ಮನೆಗೆ ಬಂದಿದ್ದಳು. ಈಗ ಗಣೇಶ ಬಂದ. ಈ ಮಗು ಗಜಕೇಸರಿ ಯೋಗದಲ್ಲಿ ಜನಿಸಿದೆ. ಇದರಿಂದ ಕುಟುಂಬದಲ್ಲಿ ಸಂತಸ ಮೂಡಿದೆ. ದೇವರು ಇದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಸಂತಸವನ್ನು ಹೊರಹಾಕಿದ್ದಾರೆ.

Astrology mahesh bhat

ಮಗುವನ್ನು ನೋಡುವ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ ಮೇಘನಾ ರಾಜ್ (Meghana Raj), ʻʻಚಿರು ಮನೆ ದೇವರ ಆರ್ಶೀವಾದ ಇರುವ ಮನೆ. ಮಗಳಿಗೆ ಕಣ್ಮಣಿ ಎಂದು ಹೆಸರಿಟ್ಟಿದ್ದೆ. ಈ ಮಗುವಿಗೂ ಒಂದು ಪೆಟ್ ನೇಮ್ ಇಡುತ್ತೇನೆ. ತುಂಬ ಸಂತಸವಾಗುತ್ತಿದೆʼʼ ಎಂದಿದ್ದಾರೆ. ನಟಿ ಮೇಘನಾ ರಾಜ್ ಕೂಡ ಮಗು ನೋಡಿದ ಬಳಿಕ ರಿಯಾಕ್ಷನ್ ಕೊಟ್ಟಿದ್ದು ಧ್ರುವ ಸರ್ಜಾ ಮಗ ಮುದ್ದು ಮುದ್ದಾಗಿದ್ದಾನೆ ಎಂದಿದ್ದಾರೆ.

ಮಾಧ್ಯಮದ ಜೊತೆಗೆ ಧ್ರುವ ಸರ್ಜಾ (Dhruva Sarja) ಮಾತನಾಡಿ ʻʻತುಂಬಾ ಖುಷಿಯಾಗುತ್ತಿದೆ. ಜನರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ ಈಗ ಚಿರು ಮಗನ ರೂಪದಲ್ಲಿ ಧ್ರುವ ಸರ್ಜಾ ಮಡಿಲು ಸೇರಿದ್ದಾರೆ ಎಂದು. ಜನರ ಮಾತಿನಂತೆ ಹಾಗೆ ನಡೆಯಲಿ. ನಮ್ಮ ಮನೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಂಭ್ರಮ ಮನೆ ಮಾಡಿದೆ. ಮೊದಲು ರಾಯನ್ ಆಮೇಲೆ ನನ್ನ ಮಗಳು ಈಗ ಮಗ. ತಾಯಿ ಗರ್ಭಿಣಿ ಆಗಿರುವಾಗ ಮಗುವಿಗೆ ನಾಮಕರಣ ಮಾಡಬಾರದು ಎಂದು ಹೇಳಿದ್ದರು. ಅದಿಕ್ಕೆ ಹೆಸರಿಟ್ಟಿರಲಿಲ್ಲ ಹೀಗಾಗಿ ಒಟ್ಟಿಗೆ ಎರಡೂ ಮಾಡುತ್ತೇವೆ. ಫ್ಯಾಮಿಲಿಯಲ್ಲಿ ಮೂರು ಜನ ಮಕ್ಕಳಿದ್ದಾರೆ. ಎಲ್ಲರೂ ತುಂಬಾ ಹ್ಯಾಪಿ ಆಗಿದ್ದಾರೆ’ ಎಂದಿದ್ದಾರೆ

‘ನಾನು ಮೊದಲು ಮೊಬೈಲ್ ಹಿಡಿದು Chi ಅಂತ ಟೈಪ್ ಮಾಡಿ ಓ ….ಆಮೇಲೆ ಅರ್ಜುನ್ ಅಂಕಲ್‌ಗೆ ಕಾಲ್ ಮಾಡಿದೆ. ಅಂಕಲ್ ನೋಡಿದರು ಖುಷಿ ಆಯ್ತು ಮೊದಲು ಅವರಿಗೆ ಹೇಳಿದ್ದು. ಅಣ್ಣನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ನಾನು ಮೂರು ವರ್ಷಗಳಿಂದ ನಾನು ಅಣ್ಣನ ಸಮಾಧಿ ಬಳಿ ಮಲಗುತ್ತೀನಿ ಯಾರೋ ಅದನ್ನು ಎಡಿಟ್ ಮಾಡಿ ಕೆಲವು ಕ್ಷಣಗಳನ್ನು ವೈರಲ್ ಮಾಡಿದ್ದಾರೆ. ನಾನು ಎಲ್ಲೂ ಅಣ್ಣನ ಮಿಸ್ ಮಾಡಿಕೊಳ್ಳುತ್ತೀನಿ. ಆದರೆ ಎಲ್ಲೂ ತೋರಿಸಿಕೊಳ್ಳುವುದಿಲ್ಲ ಅಷ್ಟು ಖುಷಿ ಬೇಸರ ಮಾಡಿಕೊಂಡರೆ ನನ್ನ ತಂದೆತಾಯಿ ಬೇಸರ ಮಾಡಿಕೊಳ್ಳುತ್ತಾರೆ ಅದಿಕ್ಕೆ ಜಾಸ್ತಿ ಎಕ್ಸಪ್ರೆಸ್ ಮಾಡುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ.

‘ಹಬ್ಬದ ದಿನ ನನಗೆ ಎರಡನೇ ಮಗು ಆಗಿದೆ. ಲೆಕ್ಕದ ಪ್ರಕಾರ ನನಗೆ ಎರಡನೇ ಮಗ. ನನ್ನ ಮಗಳಿಗೆ ಹೆಸರಿಟ್ಟಿಲ್ಲ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ದೊಡ್ಡ ಗಣ್ಯರ ಹುಟ್ಟುಹಬ್ಬದ ದಿನ ಹಬ್ಬದ ದಿನ ನನ್ನ ಪತ್ನಿ ಹುಟ್ಟುಹಬ್ಬ ದಿನ ಎಲ್ಲವೂ 18 ನಂಬರ್ ತುಂಬಾ ಖುಷಿಯಾಗುತ್ತದೆ. ಯಾವ ದಿನ ಮಗು ಹುಟ್ಟಿದ್ದರೂ ಓಕೆ ಯಾವ ಮಗು ಆಗಿದ್ದರೂ ಓಕೆ ಅಂತ ಇದ್ದೆ. ನಾರ್ಮಲರ್ ಡೆಲಿವರಿಯಲ್ಲಿ ತುಂಬಾ ಕಿರ್ಚಾಟ ಇರುತ್ತೆ ಅದಿಕ್ಕೆ ಗಾ-ಬರಿ ಆಗಿದ್ದೆ’ ಎಂದಿದ್ದಾರೆ. ಸದ್ಯಕ್ಕೆ ನಟ ಧ್ರುವ ಸರ್ಜಾರವರು ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಮುಳುಗಿಹೋಗಿದ್ದಾರೆ.

Leave a Reply

Your email address will not be published. Required fields are marked *