ವೈಟ್ ಸೀರೆಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟ ಚೆಲುವೆ ಮೇಘಾ ಶೆಟ್ಟಿ, ಫೋಟೋಗೆ ನೆಟ್ಟಿಗರು ಫಿದಾ

ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡ ಹಲವರು ಅವಕಾಶಗಳನ್ನು ಗಿಟ್ಟಿಸಿಕೊಂಡು ಬೆಳ್ಳಿತೆರೆಗೂ ಎಂಟ್ರಿ ಕೊಡುತ್ತಾರೆ. ಈ ವಿಚಾರದಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಕೂಡ ಹೊರತಾಗಿಲ್ಲ. ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡಿರುವ ನಟಿ ಮೇಘಾ ಶೆಟ್ಟಿ (Megha Shetty) ಯವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

ಅದಲ್ಲದೇ ನಟಿ ಮೇಘಾ ಶೆಟ್ಟಿಯವರಿಗೆ ಫೋಟೋ ಶೂಟ್ (Photoshoot) ಕ್ರೇಜ್ ಸಿಕ್ಕಾಪಟ್ಟೆ ಇದೆ. ಟ್ರಡಿಷನಲ್ ಹಾಗೂ ಮಾಡ್ರನ್ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ಟ್ರಡಿಷನಲ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಿ ಮೇಘಾ ಶೆಟ್ಟಿಯವರು ವೈಟ್ ಸೀರೆ (White Saary) ಯಟ್ಟುಕೊಂಡು ವಿವಿಧ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

ಇತ್ತೀಚೆಗಷ್ಟೇ ತ್ರಿಬಲ್ ರೈಡಿಂಗ್ (Tribal Riding) ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿರುವ ಮೇಘಾ ಶೆಟ್ಟಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅದಲ್ಲದೇ ಜೊತೆ ಜೊತೆಯಲಿ ಧಾರಾವಾಹಿಯು ಮುಕ್ತಾಯವಾಗಿದೆ. ಈ ಬಗ್ಗೆ ಮಾತನಾಡಿದ್ದ ಮೇಘಾ ಶೆಟ್ಟಿ, ” ಜೊತೆ ಜೊತೆಯಲಿ’ ಸೀರಿಯಲ್ ಮೊದಲ ಶಾಟ್ ಎದುರಿಸಿದ್ದು ನಾನೇ, ಕೊನೆಯ ಶಾಟ್ ಕೂಡ ನನ್ನದೆ. ಈ ಎರಡರ ನಡುವೆ ಸಾಕಷ್ಟು ದಿನಗಳ ಅಂತರವಿದೆ. ಯಾರೂ ಪರಿಚಯವಿಲ್ಲದೇ ಈ ತಂಡಕ್ಕೆ ಕಾಲಿಟ್ಟ ನನಗೆ ಈಗ ಈ ತಂಡ ಎರಡನೇ ಕುಟುಂಬ. ಈ ಕುಟುಂಬದೊಂದಿಗಿನ ನಂಟನ್ನು ಮುಗಿಸುತ್ತಿದ್ದೇನೆ. ನಿರ್ದೇಶಕ ಜಗದೀಶ್, ಎಪಿಸೋಡ್ ನಿರ್ದೇಶಕರು ಸೇರಿದಂತೆ ಇಡೀ ತಂಡದ ಜೊತೆ ನಾಲ್ಕು ವರ್ಷಗಳ ಕಾಲ ಒಡನಾಡಿದ್ದೇನೆ.

ಅವರ ಜೊತೆ ಕೂತು ಊಟ ಮಾಡಿದ್ದೆನೆ. ಅದನ್ನೆಲ್ಲವನ್ನೂ ಮರೆಯಲು ಸಾಧ್ಯವಿಲ್ಲ. ಅನು ಸಿರಿಮನೆ ನನಗೆ ಎಲ್ಲವನ್ನೂ ನೀಡಿದ್ದಾಳೆ. ನನಗೆ ಸಿಗುತ್ತಿರುವ ಸಿನಿಮಾಗಳು, ಜನರ ಪ್ರಿತಿ ಇವೆಲ್ಲದಕ್ಕೂ ಜೊತೆ ಜೊತೆಯಲಿ ಸೀರಿಯಲ್ ಮಾತ್ರ ಕಾರಣ. ಸಾವಿರ ಎಪಿಸೋಡ್‌ವರೆಗೂ ರೀಚ್ ಆಗಬೇಕು ಎಂದುಕೊಂಡಿದ್ದೆವು. ಅದರಂತೆ ಮುಗಿಸುತ್ತಿದ್ದೇವೆ. ಅದರ ಜೊತೆಗೆ, ಸಿನಿಮಾಗಳತ್ತ ಮಾತ್ರ ನನ್ನ ಗಮನ. ಒಳ್ಳೊಳ್ಳೆ ಕಥೆಗಳನ್ನು ಕೇಳುತ್ತಿದ್ದೇನೆ. ಈಗ ನಟಿಸಿರುವ ‘ಕೈವ’ ಮತ್ತು ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾ ಚೆನ್ನಾಗಿದೆ. ಈ ಎರಡೂ ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿವೆ. ಮುಂದಿನ ದಿನಗಳಲ್ಲಿ ಒಳ್ಳೆಯ ಕಥೆಗಳ ನಿರೀಕ್ಷೆಯಲ್ಲಿದ್ದೇನೆ” ಎಂದಿದ್ದರು.

ಅದಲ್ಲದೇ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ನಟಿ ಮೇಘಾ ಶೆಟ್ಟಿಯವರು “ಆಪರೇಶನ್‌ ಲಂಡನ್‌ ಕೆಫೆ’ (Operation Landon Kefe) ಎಂಬ ಔಟ್‌ ಆಯಂಡ್‌ ಔಟ್‌ ಆಕ್ಷನ್‌ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಮೇಘಾ ಶೆಟ್ಟಿ ಸಿನಿಮಾದಲ್ಲಿ ತಮ್ಮ ಪಾತ್ರದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ. ನಟಿ ಮೇಘಾ ಶೆಟ್ಟಿ ಒಂದರ ಮೇಲಂತೆ ಆಫರ್ ಗಳ ಮೇಲೆ ಆಫರ್ ಗಳನ್ನು ಪಡೆದುಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *