ಒಂಟಿ ಆಗಿ ಇರೋಕೆ ಆಗುತ್ತಿಲ್ಲ.. ಖ್ಯಾತ ನಟಿ ಮೀನಾ ಎರಡನೇ ಮದುವೆಯಾಗುವುದು ನಿಜಾನಾ, ಕೊನೆಗೂ ಮೌನ ಮುರಿದ ನಟಿ ಏನು ಹೇಳಿದ್ರು ಗೊತ್ತಾ?

ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದವರಲ್ಲಿ ನಟಿ ಮೀನಾ (Meena) ಕೂಡ ಒಬ್ಬರಾಗಿದ್ದಾರೆ. ನಟಿ ಮೀನಾರವರಿಗೆ , ಪ್ರಾರಂಭದ ದಿನಗಳಲ್ಲಿ ಡ್ಯಾನ್ಸ್ ನಲ್ಲಿ ತುಂಬಾನೇ ಆಸಕ್ತಿಯಿತ್ತು. ಹೀಗಾಗಿ ಭರತನಾಟ್ಯವನ್ನು ಸಹ ಅಭ್ಯಾಸ ಮಾಡಿದ್ದರು. ಅನೇಕ ವೇದಿಕೆಗಳಲ್ಲಿ ಹಲವು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದರು.

ಈ ನೃತ್ಯದಲ್ಲಿದ್ದ ಆಸಕ್ತಿಯೇ ನಟಿ ಮೀನಾರವರನ್ನು ಸಿನಿಮಾ ರಂಗಕ್ಕೆ ಕರೆತಂದಿತು. ಬಾಲನಟಿಯಾಗಿ, ನಟಿಯಾಗಿ ಚಿತ್ರರಂಗದಲ್ಲಿ ಹೆಸರು ಸಂಪಾದನೆ ಮಾಡಿಕೊಂಡರು. ಸದ್ಯಕ್ಕೆ ನಟಿ ಮೀನಾರವರು ಪೋಷಕ ನಟಿಯಾಗಿ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ನಟಿ ಮೀನಾರವರ ಪತಿ ವಿದ್ಯಾಸಾಗರ್ (Vidhyasagar) ಅ-ನಾರೋಗ್ಯ ಸಮಸ್ಯೆಯಿಂದ ನಿ-ಧನ ಹೊಂದಿದ್ದರು.

ಪತಿಯ ಅ-ಗಲುವಿಕೆಯ ನೋವಿನಿಂದ ಚೇತರೀಸಿಕೊಳ್ಳುತ್ತಿರುವ ನಟಿ ಮೀನಾ ಸಿನಿರಂಗದಲ್ಲಿ ಎರಡನೇ ಇನ್ನಿಂಗ್ಸ್ ಶುರುಮಾಡಿದ್ದು ಆದರೆ ನಟಿ ಮೀನಾರವರಿಗೆ ಎರಡನೇ ಮದುವೆ (Second Marriage) ಯ ಕುರಿತಂತೆ ಸಾಕಷ್ಟು ಪ್ರಶ್ನೆಗಳು ಎದುರಾಗುತ್ತಿವೆ. ನಟ ಧನುಷ್‌ ಮಾತ್ರವಲ್ಲದೆ, ಖ್ಯಾತ ಉದ್ಯಮಿ, ಹಿರಿಯ ಸ್ಟಾರ್‌ ನಟನೊಬ್ಬರ ಜೊತೆಗೆ ಮೀನಾ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದು, ಈ ಎಲ್ಲಾ ಸುದ್ದಿಗಳಿಂದ ನಟಿ ಮೀನಾರವರಿಗೆ ತೀರಾ ಬೇಸರವಾಗಿದೆ.

ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಸಂಬಂಧ ಪಟ್ಟಂತೆ ನಟಿ ಮೀನಾರವರು ಮೌನ ಮುರಿದಿದ್ದಾರೆ. ಯೂಟ್ಯೂಬ್‌ (Youtube) ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಟಿ ಮೀನಾ, ‘ನನಗೆ ಗೊತ್ತಿಲ್ಲ, ನನಗೆ ಗೊತ್ತಿಲ್ಲ ಎಂದು ಹಲವು ಬಾರಿ ಪುನರುಚ್ಚರಿಸಿದ್ದಾರೆ. “ನಾಳೆ ಏನಾಗುತ್ತದೋ ಎಂಬುದು ನನಗೆ ಗೊತ್ತಿಲ್ಲ, ಮುಂದಿನ ಎರಡು ವರ್ಷದಲ್ಲಿ ಏನೆಲ್ಲ ಆಗಬಹುದು ಎಂಬುದೂ ನನಗೆ ತಿಳಿದಿಲ್ಲ. ಹಾಗಾಗಿ ಸದ್ಯಕ್ಕೆ ಮಗಳೇ ನನಗೆ ಎಲ್ಲ’ ಎಂದು ಹೇಳಿದ್ದಾರೆ.

ಮತ್ತೊಂದು ಮದುವೆ ಎಂಬುದು ಇದು ಸಣ್ಣ ನಿರ್ಧಾರವಲ್ಲ. ನನ್ನ ಜತೆಗೆ ಮಗಳಿದ್ದಾಳೆ. ಅವಳ ಬಗ್ಗೆಯೂ ನಾನು ವಿಚಾರಿಸಬೇಕು. ಏಕೆಂದರೆ ನನ್ನ ಮೊದಲ ಆದ್ಯತೆಯೇ ನನ್ನ ಮಗಳು. ಹಾಗಾಗಿ ನನ್ನ ಕಂಫರ್ಟ್‌ಗಾಗಿ, ನನ್ನ‌ ಸುಖಕ್ಕಾಗಿ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮುಂದೆ ಹೇಗೆ ಬರುತ್ತೋ ಹಾಗೇ ಹೋಗಬೇಕು. ಕಾಲ ನಮ್ಮ ಕೈಯಲ್ಲಿಲ್ಲ ಎನ್ನುವ ಮೂಲಕ” ಎಂದು ಹೇಳುವ ಮೂಲಕ ಇಲ್ಲ ಸಲ್ಲದ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

Leave a Reply

Your email address will not be published. Required fields are marked *